ಧಾರವಾಡ:
ಜಾನಪದ ಸಂಶೋಧನಾ ಕೇಂದ್ರ ಹಮ್ಮಿಕೊಂಡ ಬಸವ ಜಯಂತಿ ಉಪನ್ಯಾಸ ಶರಣರ ದೃಷ್ಟಿಯಲ್ಲಿ ಹೆಣ್ಣು ಹಾಗೂ ವಚನ ಗಾಯನ ನೃತ್ಯ ರೂಪಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವೇಶ್ವರರು ಮಹಿಳೆಯರಿಗೆ ವಾಕ್, ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಚನ ಬರೆದು ಆ ಮೂಲಕ ತಮ್ಮ ಅನುಭವಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಸ್ವಾತಂತ್ರ‍್ಯ ನೀಡಿದರು. ಕಾಯಕದ ಮೂಲಕ ಅಂದಿನ ದುಡಿಮೆ ಅಂದಿನ ಅನ್ನ ಆಗಬೇಕು ಎಂದರು.
ಪ್ರಸ್ತುತ ನಾವು ಎಷ್ಟೇ ವಿದ್ಯಾವಂತರಾದರೂ ದೌರ್ಜನ್ಯ, ಶೋಷಣೆ ಹಾಗೂ ಜಾತಿಯತೆ ಇಂದಿಗೂ ಎದುರಿಸುತ್ತಿದ್ದೇವೆ. ಅದನ್ನು ಹೋಗಲಾಡಿಸಿ ಇಂದಿನ ಹೆಣ್ಣು ಮಕ್ಕಳು ಬದುಕಬೇಕಾಗಿದೆ. ವಿದ್ಯೆ, ಧೈರ್ಯ ಮತ್ತು ಹೋರಾಟ ನಮ್ಮ ಅಸ್ತ್ರಗಳಾಗಬೇಕಿದೆ ಎಂದರು.ಚಿಂತಕಿ ಸುಧಾ ಪಾಟೀಲ ಶರಣರ ದೃಷ್ಟಿಯಲ್ಲಿ ಹೆಣ್ಣು ವಿಷಯ ಕುರಿತು ಮಾತನಾಡಿದರು. ಶರಣರು ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಮೋಕ್ಷ ಅಥವಾ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಹಕ್ಕು ಗಂಡಿನಷ್ಟೇ ಹೆಣ್ಣಿಗೂ ಇದೆ ಎಂದು ಪ್ರತಿಪಾದಿಸಿದರು. ಅರಿವಿನ ಮಟ್ಟದಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲ ಎಂದು ಹೇಳುತ್ತಾ ಅನುಭವ ಮಂಟಪದ ಮೂಲಕ 34ಕ್ಕೂ ಹೆಚ್ಚು ಶಿವಶರಣೆಯರಿಗೆ ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆಯನ್ನು ಶರಣರು ಕಲ್ಪಿಸಿದ್ದರು ಎಂದು ಹೇಳಿದರು.