ಶಿಕ್ಷಣ ಬದುಕಿಗೆ ಆಸರೆಯಾಗಲಿ: ಸಂಗನಗೌಡ ಕರೆ

KannadaprabhaNewsNetwork |  
Published : Oct 17, 2026, 01:30 AM IST
16ಕೆಪಿಎಂಎಸ್ಕೆ01:  | Kannada Prabha

ಸಾರಾಂಶ

ಶಿಕ್ಷಣ ಕೇವಲ ಪದವಿ, ಪ್ರಮಾಣಪತ್ರಕ್ಕೆ ಸೀಮಿತವಾಗದೆ ಬದುಕಿಗೆ ಆಸರೆಯಾಗಿ, ವ್ಯಕ್ತಿತ್ವ ರೂಪಿಸಬೇಕು. ವಿದ್ಯಾರ್ಥಿಗಳು ನಾಯಕತ್ವ, ನೈತಿಕ ಮೌಲ್ಯ ಬೆಳೆಸಿಕೊಂಡು ಪರಿಶ್ರಮದಿಂದ ಗುರಿ ತಲುಪಬೇಕು ಎಂದು ಡಾ. ಸಂಗನಗೌಡ ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಶಿಕ್ಷಣ ಕೇವಲ ಪದವಿ, ಪ್ರಮಾಣಪತ್ರಕ್ಕೆ ಸೀಮಿತವಾಗದೆ ಬದುಕಿಗೆ ಆಸರೆಯಾಗಿ, ವ್ಯಕ್ತಿತ್ವ ರೂಪಿಸಬೇಕು. ವಿದ್ಯಾರ್ಥಿಗಳು ನಾಯಕತ್ವ, ನೈತಿಕ ಮೌಲ್ಯ ಬೆಳೆಸಿಕೊಂಡು ಪರಿಶ್ರಮದಿಂದ ಗುರಿ ತಲುಪಬೇಕು ಎಂದು ಡಾ. ಸಂಗನಗೌಡ ಎಸ್. ಹೇಳಿದರು.

ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸದಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಸಹಜ. ಆದರೆ ಕಾಲೇಜಿನ ಕಲಿಕಾ ವಾತಾವರಣ ಮತ್ತು ಪಠ್ಯೇತರ ಚಟುವಟಿಕೆಗಳು ಆತ್ಮವಿಶ್ವಾಸ ಹೆಚ್ಚಿಸಿ, ಕನಸುಗಳಿಗೆ ರೆಕ್ಕೆ ನೀಡುತ್ತವೆ ಎಂದರು.

ಮೆದುಕಿಹಾಳ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಎಲೆಕೂಡ್ಲಿಗಿ, ಇಮಾಮ್ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಧಕರಿಗೆ ಸನ್ಮಾನ: ಪ್ರಾಧ್ಯಾಪಕರಾಗಿ ಪದೋನ್ನತಿ ಪಡೆದ ಮಸ್ಕಿ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತಗೌಡ ಪಾಟೀಲ್ ಹಾಗೂ ಪಿಎಚ್.ಡಿ ಪದವಿ ಪಡೆದ ಡಾ. ಬಸವರಾಜ ತಡಕಲ್ ಅವರನ್ನು ಸನ್ಮಾನಿಸಲಾಯಿತು. ಕೆ-ಸೆಟ್, ನೆಟ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎನ್ಎಸ್ಎಸ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ‘ಗಾಂಧಿ ಸಂಸ್ಕಾರ ನಿಧಿ’ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಂದ ಪಡೆದ ವಿದ್ಯಾರ್ಥಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಐಕ್ಯೂಎಸಿ ಸಂಚಾಲಕ ಶ್ರೀನಿವಾಸ್ ಯಾಳಗಿರಿ ಅನಿಸಿಕೆ ವ್ಯಕ್ತಪಡಿಸಿದರು. ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ವೀರಪನಗೌಡ, ಡಾ. ರಾಮಣ್ಣ ಎ., ಡಾ. ಪರಮಾನಂದ, ಡಾ. ರಜಿಯಾ, ಆಶಾ ಸಿ., ಹಾಜಿ ಬಾಬಾ, ಸಣ್ಣಪ್ಪ ನಾಯಕ, ಗಿರಿಜಾ ರಾಟಿ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು. ಅನಿತಾ ಪ್ರಾರ್ಥಿಸಿ, ಗಣೇಶ ಸ್ವಾಗತಿಸಿ, ಗಾಯತ್ರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನದಲ್ಲಿ ಧಾರಾಕಾರ ಮಳೆ ಹಿನ್ನೆಲೆ ರೈತರಿಗೆ ಸಂತಸ
ತಾರ್ಕಿಕ ಚಿಂತನೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸಿಕೊಳ್ಳಿ