ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 38ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ, ನಾಟಕ, ಸಾಹಿತ್ಯ ಎಲ್ಲವೂ ಈ ವಿಶಿಷ್ಠ ಸಂಸ್ಕೃತಿಗಳ ಪ್ರತಿಬಿಂಬ. ಅದು ಜನಪ್ರಿಯ ಚಲನಚಿತ್ರಗಳಿರಬಹುದು, ಗಾಢವಾದ ಹೊಳಹುಗಳಿರುವ ಗಂಭೀರವಾದ ಸಾಹಿತ್ಯ ಇರಬಹುದು ಅಥವಾ ಹವ್ಯಾಸಿ ಯಕ್ಷಗಾನ ಇರಬಹುದು, ಎಲ್ಲವೂ ಜನಜೀವನದ ಕಲಾತ್ಮಕ ಅಭಿವ್ಯಕ್ತಿಯೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಲೆ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುವಲ್ಲಿ ನೆರವಾಗಲಿ ಎಂದರು.
ಸಮಕಾಲೀನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲಕ ಮುಕ್ತಿ ಮಾರ್ಗದ ಕಾಣ್ಕೆ ಅನಾವರಣಗೊಳಿಸುವುದೇ ಶಿಕ್ಷಣದ ನಿಜಧರ್ಮ ಎಂದು ಹೇಳಿದರು.ವಿಕಾಸಪಥವು ಹಾವು ಏಣಿ ಆಟ ಇದ್ದ ಹಾಗೆ. ಇಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳೆಂಬ ಹಾವುಗಳಿವೆ. ಅದರ ಜೊತೆಗೆ ಸಮಾನತೆ, ಸಹಿಷ್ಣುತೆಗಳೆಂಬ ಏಣಿಗಳೂ ಇವೆ. ಶಿಕ್ಷಣದ ಮೂಲಕ ಇಂಥಹ ಏಣಿಗಳನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕರ ಸಮಕಾಲೀನ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ನಿಷ್ಕಲ್ಮಷವಾದ ಮಮತೆ ಮತ್ತು ಸಮತೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.
ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಸಿಂಡಿಕೇಟ್ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಅಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ: ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಕುವೆಂಪು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಬುಧವಾರ ನಡೆದಿದೆ. ಇದೇ ದಿನ ವಿವಿ ಕುಲಪತಿಗೆ ಬಹಿರಂಗ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಶೈಕ್ಷಣಿಕ ವೇಳಾಪಟ್ಟಿಯಂತೆ ಜೂನ್ 13ರಂದು ಎಲ್ಲ ಪದವಿ ಪರೀಕ್ಷೆಗಳು ಹಾಗೂ ಅಂತಿಮ ವರ್ಷದ ಪರೀಕ್ಷೆಗಳು ಜೂನ್ 4ರಂದೇ ಪೂರ್ಣಗೊಂಡರೂ ಮೌಲ್ಯಮಾಪನ ಕಾರ್ಯವನ್ನು ಇನ್ನೂ ಪ್ರಾರಂಭಿಸದಿರುವುದು ಎಂತಹ ನಿರ್ಲಕ್ಷ್ಯ? ಮೌಲ್ಯಮಾಪನವನ್ನು ನಡೆಸದ ಮೇಲೆ ಅತಿ ತುರ್ತಾಗಿ ಪರೀಕ್ಷೆಗಳನ್ನು ಏಕೆ ನಡೆಸಲಾಯಿತು?
ಮೌಲ್ಯಮಾಪನದ ಬೋರ್ಡಿನ ಮುಖ್ಯಸ್ಥರು ಡಿಎ ಹಾಗೂ ಟಿಎ ಸಂಭಾವನೆ ಸಂಬಂಧಿತ ವಿಷಯದಲ್ಲಿ ಗೊಂದಲಗಳಿವೆ. ಇತರ ವಿಶ್ವವಿದ್ಯಾನಿಲಯಗಳ ಪರೀಕ್ಷಾ ಶುಲ್ಕದೊಂದಿಗೆ ಹೋಲಿಸಿದರೆ, ನಮ್ಮ ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಾಗಿರುವುದಲ್ಲದೆ; ಮೌಲ್ಯಮಾಪಕರ ಸಂಭಾವನೆಯನ್ನು ಕಡಿತಗೊಳಿಸಿರುವುದರ ಹಿನ್ನೆಲೆ ಏನು? ಬೇರೆ ಯಾವ ಯಾವ ವಿಶ್ವವಿದ್ಯಾನಿಲಯದಲ್ಲಿ ಮೌಲ್ಯಮಾಪನದ ಸಂಭಾವನೆಯನ್ನು ಕಡಿತಗೊಳಿಸಿದ್ದಾರೆ?
ಇವೆಲ್ಲ ಪ್ರಶ್ನೆಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ವಿಶ್ವವಿದ್ಯಾನಿಲಯದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಕೇಳುತ್ತಿರುವೆ ಎಂದು ಮನಗಂಡು ಸಮರ್ಪಕ ಉತ್ತರ ನೀಡುವಂತೆ ವಿನಂತಿಸುತ್ತೇನೆ. ಆದಷ್ಟು ಬೇಗ ತ್ವರಿತ ಗತಿಯಲ್ಲಿ ಮೌಲ್ಯಮಾಪನವನ್ನು ಪ್ರಾರಂಭಿಸಿ ಫಲಿತಾಂಶವನ್ನು ನೀಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತಿರುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.