ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯವಾಗಲಿ

KannadaprabhaNewsNetwork |  
Published : Sep 19, 2024, 01:47 AM IST
ಪೊಟೋ-ಪಟ್ಟಣದ ಕಲಾ ವೈಭವ ಭರತ ನಾಟ್ಯ ಕಲಾ ಕೇಂದ್ರದವರು ನಡೆಸಿಕೊಟ್ಟ  ನೃತ್ಯಾಮೃತ ಕಾರ್ಯಕ್ರಮದ ಉದ್ಘಾಟನೆ ಹಾಗೂ ಭರತ ನಾಟ್ಯ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು  | Kannada Prabha

ಸಾರಾಂಶ

ಭರತ ನಾಟ್ಯ ಕಲೆಯು ನಮ್ಮ ರಾಜ ಮಹಾರಾಜರ ಕಾಲಕ್ಕಿಂತಲೂ ಪೂರ್ವದಲ್ಲಿ ಭಾರತೀಯ ಸಂಸ್ಕೃತಿಯ ಭಾಗವಾಗಿ ಭರತ ನಾಟ್ಯ ಕಲೆಯು ಬೆಳೆದು ಬಂದಿದೆ

ಲಕ್ಷ್ಮೇಶ್ವರ: ಭರತನಾಟ್ಯ ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆಯ ವೈಭವದ ಪ್ರತೀಕವಾಗಿದೆ. ಭರತನಾಟ್ಯ ಕಲೆಯು ಜಗತ್ತಿನ ಅದ್ಭುತ ನಾಟ್ಯಕಲೆಗಳಲ್ಲಿ ಒಂದಾಗಿದೆ ಎಂದು ಹುಬ್ಬಳ್ಳಿಯ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ವಿದುಷಿ ಸಹನಾ ಭಟ್ ಹೇಳಿದರು.

ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಇತ್ತೀಚೆಗೆ ಪಟ್ಟಣದ ಕಲಾ ವೈಭವ ಭರತ ನಾಟ್ಯ ಸಂಸ್ಥೆಯ ನೃತ್ಯಾಮೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭರತ ನಾಟ್ಯ ಕಲೆಯು ನಮ್ಮ ರಾಜ ಮಹಾರಾಜರ ಕಾಲಕ್ಕಿಂತಲೂ ಪೂರ್ವದಲ್ಲಿ ಭಾರತೀಯ ಸಂಸ್ಕೃತಿಯ ಭಾಗವಾಗಿ ಭರತ ನಾಟ್ಯ ಕಲೆಯು ಬೆಳೆದು ಬಂದಿದೆ. ಭರತ ನಾಟ್ಯವು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಭರತನಾಟ್ಯ ಕಲೆಯು ಭಾರತೀಯ ಪರಂಪರೆ, ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವುದು ಸಂತೋಷದ ಸಂಗತಿಯಾಗಿದೆ. ಭಾರತೀಯ ನೃತ್ಯ ಪ್ರಕಾರಗಳಲ್ಲಿ ಭರರತ ನಾಟ್ಯ ಕಲೆಗೆ ವಿಶೇಷ ಗೌರವಿದೆ. ಇಂದು ಪ್ರಪಂಚದ ತುಂಬಾ ಭರತ ನಾಟ್ಯ ಕಲೆಯು ಉಳಿಸಿ ಬೆಳೆಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಈ ವೇಳೆ ಮಂಜುನಾಥ ಪುತ್ತೂರ ಹಾಗೂ ಸುನೀಲ ಮಹಾಂತಶೆಟ್ಟರ ಮಾತನಾಡಿ, ಭರತ ನಾಟ್ಯ ಕಲೆಯಿಂದ ಮಾನಸಿಕ ಸಂತೋಷ ಮತ್ತು ನೆಮ್ಮದಿ ದೊರಯುತ್ತದೆ. ನಮ್ಮ ಮಕ್ಕಳಿಗೆ ಭರತ ನಾಟ್ಯದಂತಹ ಕಲೆ ಕಲಿಸುವ ಮೂಲಕ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡೋಣ ಎಂದು ಹೇಳಿದರು.

ಈ ವೇಳೆ ಪಟ್ಟಣದ ವಿವಿಧ ಭರತ ನಾಟ್ಯ ತಂಡದ ವಿದ್ಯಾರ್ಥಿಗಳು ಅದ್ಭುತ ಭರತ ನಾಟ್ಯ ಪ್ರದರ್ಶನ ಮಾಡುವ ಮೂಲಕ ಸೇರಿದ್ದ ಸೋತೃಗಳನ್ನು ಮಂತ್ರ ಮುಗ್ದಗೊಳಿಸಿದರು.

ಈ ವೇಳೆ ಭವ್ಯಾ ಕತ್ತಿ, ಶಕ್ತಿ ಕತ್ತಿ, ವೀಣಾ ಪಾಟೀಲ, ಅಶ್ವಿನಿ ಅಂಕಲಕೋಟಿ, ಕಾವ್ಯಾ ವಡಕಣ್ಣವರ, ಎಚ್.ಡಿ. ನಿಂಗರೆಡ್ಡಿ, ವಿಜಯಾ ಯಲಿಶಿರೂರ, ನಿರ್ಮಲಾ ಗೌರಿ, ಬಿ.ಸಿ.ಪಟ್ಟೇದ, ಈಶ್ವರ ಮೆಡ್ಲೇರಿ, ಬಶೀರ್ ಅಹ್ಮದ್ ಚೌರಿ, ಪ್ರವೀಣ ಕತ್ತಿ, ಅಶೋಕ ಪೂಜಾ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ