ಹುಬ್ಬಳ್ಳಿ: ಕನ್ನಡ ಅಭಿಮಾನದ ಆಡಳಿತ ಭಾಷೆಯಾಗಬೇಕು ಮತ್ತು ದೈನಂದಿನ ಆಡು ಭಾಷೆಯಾಗಿ ಹೆಚ್ಚು ಕನ್ನಡವನ್ನು ಬಳಿಸಿದಾಗ ಮಾತ್ರ ಮುಂದಿನ ಯುವ ಪೀಳಿಗೆ ಕನ್ನಡ ಭಾಷೆಯನ್ನು ಉಳಿಸಿ, ಬೆಳಿಸಲು ಸಾಧ್ಯ ಎಂದು ಹುಬ್ಬಳ್ಳಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಕರೆ ನೀಡಿದರು.
ನಗರದ ಚೇತನ ವಾಣಿಜ್ಯ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ಜರುಗಿದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ವಿವಿಧ ಶಾಲಾ ಕಾಲೇಜುಗಳಿಗಾಗಿ ಆಯೋಜಿಸಿದ್ದ ಜಾನಪದ, ಭಾವಗೀತೆ ಮತ್ತು ನಾಡಗೀತೆ ಸ್ಪರ್ಧೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಚೇತನ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ವಿ.ಎಂ. ಕೊರವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದಿಂದ ಭಾವಗೀತೆ ಸ್ಪರ್ಧೆಯಲ್ಲಿ ರಾಜೀವ್ ಗಾಂಧಿ ಸಿ.ಬಿ.ಎಸ್.ಸಿ. ಶಾಲೆ ಧಾರವಾಡ ಪ್ರಥಮ, ಕೆ.ಇ. ಬೋರ್ಡ್ ಶಾಲೆ ಧಾರವಾಡ ದ್ವಿತೀಯ, ಲೀಲಾಬಾಯಿ ಶ್ರೀ ನಗರ ಶಾಲೆ ಹುಬ್ಬಳ್ಳಿ ತೃತೀಯ ಬಹುಮಾನ ಪಡೆದವು. ಪದವಿಪೂರ್ವ ವಿಭಾಗದಿಂದ ನಾಡಗೀತೆ ಸ್ಪರ್ಧೆಯಲ್ಲಿ ಶಾಂತಿನಿಕೇತನ ಪಿ.ಯು. ಕಾಲೇಜು ಧಾರವಾಡ ಪ್ರಥಮ, ಚೇತನ ಪಿಯು ಕಾಲೇಜು ಹುಬ್ಬಳ್ಳಿ ದ್ವಿತೀಯ ಬಹುಮಾನ ಪಡೆದವು.ಪದವಿ ವಿಭಾಗದಿಂದ ಜಾನಪದ ಗೀತೆ ಸ್ಪರ್ಧೆಯಲ್ಲಿ ಧಾರವಾಡದ ಜೆ.ಎಸ್.ಎಸ್. ಕಾಲೇಜು ಪ್ರಥಮ, ಧಾರವಾಡದ ಕೆ.ಎಲ್.ಇ. ಬಿಸಿಎ ಕಾಲೇಜು ದ್ವಿತೀಯ, ಹುಬ್ಬಳ್ಳಿಯ ಕನಕದಾಸ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ತೃತೀಯ ಬಹುಮಾನ ನೀಡಲಾಯಿತು.
ಈ ವೇಳೆ ಪ್ರಾಚಾರ್ಯರಾದ ಡಾ. ಅಶೋಕ್ ವಡಕಣ್ಣವರ್, ಡಾ. ಕೆ.ಸಿ. ಪಾಂಗಿ, ಪ್ರೊ. ಭಾಗ್ಯಶ್ರೀ ಬಳಿಗಾರ್, ಡಾ ಅನ್ನಪೂರ್ಣ, ಡಾ ಪ್ರಶಾಂತ್ ಗಾಮನಗಟ್ಟಿ, ಡಾ. ಶಿಲ್ಪಾ ಕುಲಕರ್ಣಿ, ಪ್ರೊ. ನಿಧಿ ದೇಶಪಾಂಡೆ, ಪ್ರೊ. ಭಾರತಿ ಬಡಿಗೇರ, ಪ್ರೊ. ಮಹಾಬಲೇಶ್ವರ್ ಸೇರಿದಂತೆ ಹಲವರಿದ್ದರು.