ಕನ್ನಡಪ್ರಭ ವಾರ್ತೆ ಬೆಂಗಳೂರು:
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಅನ್ಯಭಾಷೆಗಳು ಅತಿಥಿಯಾಗಬೇಕು. ಕನ್ನಡ ಭಾಷೆಯು ಅಧಿಪತಿಯಾಗಬೇಕು. ಕಚೇರಿ, ವ್ಯಾಪಾರ, ಸಾರ್ವಜನಿಕ ಜೀವನ ಸೇರಿ ಎಲ್ಲ ಕಡೆಯೂ ಕನ್ನಡ ಸಹಜವಾಗಿ ಬಳಕೆಯಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮನಾಗಿರಬೇಕು. ಎಐ, ಡಿಜಿಟಲ್ ಯುಗದ ಭಾಷೆಯಾಗಿಯೂ ಕನ್ನಡ ಬಳಕೆಯಾಗಬೇಕು ಎಂದು ಕರೆ ನೀಡಿದರು.ಭಾರತದ ಬಲ ಕರ್ನಾಟಕ ಎಂಬ ಪರಿಕಲ್ಪನೆಯೊಂದಿಗೆ ನಾವು ಬೆಳೆಯಬೇಕು. ಕರ್ನಾಟಕ ಅದರಲ್ಲೂ ಬೆಂಗಳೂರು ದೇಶದ ಹೆಬ್ಬಾಗಿಲಾಗಿ ಪರಿವರ್ತನೆಯಾಗಿದೆ. ನುಡಿ ಉಳಿದರೆ ನಾಡು ಉಳಿಯಲಿದೆ. ಹಾಗೆಯೇ, ನಾಡು ಉಳಿದರೆ ನುಡಿಯೂ ಉಳಿಯಲಿದೆ. ಕನ್ನಡಿಗರ ಹಕ್ಕಿನ ಪ್ರಶ್ನೆ ಬಂದಾಗ ಪಕ್ಷಭೇದ ಇರಬಾರದು. ಕನ್ನಡದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದರು.-ಬಾಕ್ಸ್-ಉದ್ಯೋಗದಲ್ಲಿ ಕನ್ನಡಿಗರ ನಿರ್ಲಕ್ಷಿಸಿದರೆ ಕ್ರಮ: ತಂಗಡಗಿಕನ್ನಡ ಮಾತೃಭಾಷೆ ಎಂಬ ಕಾರಣಕ್ಕಾಗಿ ಉದ್ಯೋಗ ನಿರಾಕರಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಕೇವಲ ಮಾತನಾಡುವ ಭಾಷೆಯಾಗದೆ ಅನ್ನದ ಭಾಷೆಯೂ ಆಗಬೇಕು. ಕನ್ನಡ ಮಾತೃ ಭಾಷೆ ಎಂದು ಉದ್ಯೋಗ ನಿರಾಕರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಮಹಿಳೆಯೊಬ್ಬರು ಕನ್ನಡದಲ್ಲಿ ವ್ಯಕ್ತಿ ಪರಿಚಯ ನೀಡಿದ್ದಕ್ಕೆ ಉದ್ಯೋಗ ನಿರಾಕರಿಸಿದರು ಎಂದು ಹೇಳಿಕೆ ಕೊಟ್ಟಿದ್ದರು. ನಮ್ಮ ಸರ್ಕಾರ ಇಂಥದ್ದನ್ನೆಲ್ಲ ಸಹಿಸುವುದಿಲ್ಲ. ಕನ್ನಡವನ್ನು ನಿರ್ಲಕ್ಷಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.