ಕಲಿತ ವಿದ್ಯೆ ಬದುಕಿಗೆ ದಾರಿಯಾಗಲಿ: ಡಾ. ಶ್ರೀಧರ

KannadaprabhaNewsNetwork |  
Published : Apr 09, 2024, 12:45 AM IST
ತರಬೇತಿ ಶಿಬಿರ  | Kannada Prabha

ಸಾರಾಂಶ

ಕ್ರೀಡೆ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿ.

ಸಿದ್ದಾಪುರ: ಯಾವುದೇ ವಿಷಯ ಕಲಿತದ್ದು ಜೀವನಕ್ಕೆ ಆಸರೆಯಾಗಬೇಕು, ದಾರಿಯಾಗಬೇಕು. ಹೆಚ್ಚು ಅಂಕ ಪಡೆದು ಉನ್ನತ ಹುದ್ದೆ ಪಡೆಯುವ ಮನೋಭಾವದ ಬದಲು ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಮನಸ್ಸು ಬರಬೇಕು ಎಂದು ಖ್ಯಾತ ವೈದ್ಯ ಡಾ. ಶ್ರೀಧರ ವೈದ್ಯ ತಿಳಿಸಿದರು.ಪಟ್ಟಣದ ಬಾಲಭವನದಲ್ಲಿ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಕ್ರೀಡಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿ. ಇಲ್ಲಿ ಕ್ರೀಡಾ ಅಕಾಡೆಮಿ ಆರಂಭಿಸಿ ಆಸಕ್ತ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯ. ಕೇವಲ ಮಕ್ಕಳು ಮಾತ್ರವಲ್ಲದೇ ಪಾಲಕರು ಇದರ ಸದುಪಯೋಗಪಡೆಯಲು ಮುಂದಾಗಬೇಕು ಎಂದರು.ಮುಖ್ಯ ಅತಿಥಿ ಲಯನ್ಸ್‌ ಕ್ಲಬ್ ಅಧ್ಯಕ್ಷ ರವಿ ಎಂ. ಪಾಟೀಲ ಮಾತನಾಡಿ, ಸಮರ್ಪಕವಾದ ತರಬೇತಿ ದೊರೆತರೆ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಹಿಂದಿನ ವರ್ಷದಲ್ಲಿ ನಮ್ಮ ಅಕಾಡೆಮಿಯಿಂದ ತರಬೇತಿ ನೀಡುತ್ತಿರುವ ತರಬೇತುದಾರರು ಯಾವ ಫಲಾಪೇಕ್ಷೆಯಿಲ್ಲದೇ ತರಬೇತಿ ನೀಡುತ್ತ ಬಂದಿದ್ದು ಶಿಬಿರದ ಯಶಸ್ಸಿಗೆ ಕಾರಣವಾಗಿದೆ ಎಂದರು.ಮುಖ್ಯ ಅತಿಥಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ, ಕ್ರೀಡೆ ಅತ್ಯಂತ ಮಹತ್ವದ್ದು. ಎಲ್ಲ ಕ್ಷೇತ್ರಗಳಲ್ಲಿಯೂ ಕ್ರೀಡಾ ಮನೋಭಾವ ಇರಬೇಕು ಎನ್ನುವ ಮಾತಿನಲ್ಲೇ ಅದರ ಮಹತ್ವವಿದೆ. ಏಕಾಗ್ರತೆ, ಶ್ರಮ ಕ್ರೀಡಾ ಸಾಧನೆಗೆ ಅನಿವಾರ್ಯ. ಅರೆನಗರ- ಗ್ರಾಮೀಣ ಕ್ಷೇತ್ರವಾದ ಇಲ್ಲಿ ಕ್ರೀಡಾ ಅಕಾಡೆಮಿ ಸಂಘಟಿಸಿ, ಮುಂದಿನ ತಲೆಮಾರಿನ ಕಿರಿಯ ಆಸಕ್ತರಿಗೆ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿದ್ದರ ಅತ್ಯುತ್ತಮ ಫಲಿತಾಂಶ ಮುಂದಿನ ವರ್ಷಗಳಲ್ಲಿ ಕಾಣುತ್ತದೆ ಎಂದರು.

ಮುಖ್ಯ ಅತಿಥಿ ಅಕಾಡೆಮಿಯ ನಿರ್ದೇಶಕ ಡಾ. ನಂದಕುಮಾರ ಪೈ ಮಾತನಾಡಿ, ಭರವಸೆಯ ಬೆಳಕು ನಮ್ಮ ಅಕಾಡೆಮಿಯ ಘೋಷವಾಕ್ಯ. ಆಸಕ್ತ ಮಕ್ಕಳಿಗೆ ಸಮರ್ಪಕ ತರಬೇತಿ ನೀಡಿ ಕ್ರೀಡಾರಂಗದಲ್ಲಿ ಸಾಧನೆ ಮಾಡುವಂತೆ ಪ್ರೆರೇಪಿಸುವುದು ನಮ್ಮ ಉದ್ದೇಶ ಎಂದರು.

ಮುಖ್ಯ ಅತಿಥಿ ಅಕಾಡೆಮಿಯ ಉಪಾಧ್ಯಕ್ಷ ಪಿ.ಬಿ. ಹೊಸೂರ ಮಾತನಾಡಿ, ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳಲಿ ಎನ್ನುವ ಸದುದ್ದೇಶದಿಂದ ಆಸಕ್ತ ಬಾಲ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸುತ್ತಿದ್ದೇವೆ ಎಂದರು. ಅಕಾಡೆಮಿಯ ಖಜಾಂಚಿ ಸುದರ್ಶನ ಪಿಳ್ಳೆ ಮಾತನಾಡಿ, ನಮ್ಮಲ್ಲಿ ಉತ್ತಮ ಕ್ರೀಡಾ ತರಬೇತುದಾರರಿದ್ದಾರೆ. ಪ್ರೋತ್ಸಾಹಕರಿದ್ದಾರೆ. ಮುಂದಿನ ಪೀಳಿಗೆ ಉತ್ತಮ ತರಬೇತಿ ಪಡೆದು ಕ್ರೀಡಾರಂಗದಲ್ಲಿ ಸಾಧನೆ ಮಾಡಬೇಕು ಎನ್ನುವದು ನಮ್ಮ ಕಾಳಜಿ ಎಂದರು.ಅಧ್ಯಕ್ಷತೆ ವಹಿಸಿದ್ದ ಸ್ಪೋರ್ಟ್ಸ್‌ ಅಕಾಡೆಮಿ ಅಧ್ಯಕ್ಷ ವಿನಾಯಕ ಶೇಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಕ್ರೀಡಾ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ೨ ವರ್ಷದ ಹಿಂದೆ ಸಮಾನಮನಸ್ಕರು ಕೂಡಿ ಆರಂಭಿಸಿದ ಅಕಾಡೆಮಿಯ ೨ನೇ ವರ್ಷದ ಶಿಬಿರ ಇದು. ಇದಕ್ಕೆ ಸಾರ್ವಜನಿಕರು ಮುಖ್ಯವಾಗಿ ಮಕ್ಕಳ ಪಾಲಕರ ಸಹಕಾರ ಬೇಕು ಎಂದರು. ಅ

ಕಾಡೆಮಿ ನಿರ್ದೇಶಕ ಮಹೇಶ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳ ತರಬೇತುದಾರರಾದ ಮಾಧವ ನಾಯ್ಕ(ವಾಲಿಬಾಲ್), ಡೊಮೆನಿಕ್ ಫರ್ನಾಂಡಿಸ್(ಕ್ರಿಕೆಟ್), ಆನಂದ ನಾಯ್ಕ(ಕರಾಟೆ), ಸಂಕೇತ ವೈದ್ಯ(ಬಾಡ್ಮಿಂಟನ್), ಆನಂದ ಸ್ವಾಮಿ(ಚೆಸ್), ಮಂಜುನಾಥ ನಾಯ್ಕ(ಯೋಗ), ಹರ್ಷ ಚಂದಾವರಕರ್ ಹಾಗೂ ಅನಿಲ್ ಅಲ್ಮೇಡಾ(ಅಥ್ಲೆಟಿಕ್ಸ್‌) ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿ ನಿರ್ದೇಶಕ ಪ್ರಶಾಂತ ಶೇಟ್ ನಿರೂಪಿಸಿದರು. ಚಂದನ ಕೇರಕರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ