ಪರಿಸರ ಪ್ರೀತಿ ಪ್ರತಿಯೊಬ್ಬರ ಜೀವನದ ಭಾಗವಾಗಿರಲಿ

KannadaprabhaNewsNetwork |  
Published : Oct 23, 2026, 02:00 AM IST
ಫೋಟೋವಿವರ- (22ಎಚ್‌ಪಿಟಿ2)  ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಪೌರತ್ವ ತರಬೇತಿ ಶಿಬಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ ಮಾತನಾಡಿದರು | Kannada Prabha

ಸಾರಾಂಶ

ಇಂದು ನಮ್ಮ ಪರಿಸರಕ್ಕೆ ಕುತ್ತು ಬಂದಿದೆ.ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ವಿನಾಶ ಮಾಡುತ್ತಿದ್ದೇವೆ.

ಹೊಸಪೇಟೆ: ಪರಿಸರ ಸ್ವಚ್ಛವಾಗಿದ್ದರೆ ನಾವು ಸ್ವಸ್ಥವಾಗಿರುತ್ತೇವೆ. ಪರಿಸರ ಪ್ರೀತಿ ಮತ್ತು ಕಾಳಜಿ ಪ್ರತಿಯೊಬ್ಬರ ಜೀವನದ ಭಾಗವಾಗಿರಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೈ.ಎ.ಕಾಳೆ ಹೇಳಿದರು.

ತಾಲೂಕಿನ ತಿಮ್ಮಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಥಳೀಯ ವಿನಾಯಕ ಎಜುಕೇಶನ್ ಸೊಸೈಟಿ ಅಂಗ ಸಂಸ್ಥೆಯಾದ ನ್ಯಾಷನಲ್ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಲಾಗಿದ್ದ ಪೌರತ್ವ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದರು.

ಇಂದು ನಮ್ಮ ಪರಿಸರಕ್ಕೆ ಕುತ್ತು ಬಂದಿದೆ.ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ವಿನಾಶ ಮಾಡುತ್ತಿದ್ದೇವೆ. ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ, ಮಳೆ ಅನಿಶ್ಚಿತತೆ. ಇವೆಲ್ಲ ಅದರ ದುಷ್ಪರಿಣಾಮಗಳೇ. ಕಾರಣ ನಾವು ಪ್ರಕೃತಿಯೊಂದಿಗೆ ಹೆಜ್ಜೆ ಹಾಕಬೇಕಿದೆ. ಪರಿಸರವನ್ನು ನಾವು ಸುಂದರವಾಗಿ ಇಟ್ಟುಕೊಂಡರೆ ನಮ್ಮ ಜೀವನ ಸುಂದರವಾಗಿರುತ್ತದೆ ಈ ಭೂಮಿ ಸೇರಿದಂತೆ ಪ್ರಕೃತಿಯ ಸಂಪನ್ಮೂಲ ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸಿದರೆ ಸಾಕು. ಅದುವೇ ನಾವು ಅವರಿಗೆ ಕೊಡುವ ದೊಡ್ಡ ಕೊಡುಗೆ ಎಂದರು.

ಸೊಸೈಟಿ ಅಧ್ಯಕ್ಷ ಜಾಲಿ ಬಸವರಾಜ್ ಮಾತನಾಡಿ, ಸಮಾಜದಲ್ಲಿ ಶಿಕ್ಷರ ಪಾತ್ರ ಹಿರಿದು. ನೀವು ನಿಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ. ಉತ್ತಮ ಮಕ್ಕಳನ್ನು ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದರೆ ಸಮಾಜವೂ ಸಹಜವಾಗಿ ಆರೋಗ್ಯ ಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಶ್ರಮ, ತ್ಯಾಗ, ಸಮರ್ಪಣಾ ಭಾವ ಅಪಾರ ಎಂದರು.

ಶಿಬಿರಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದ ಪೊಲೀಸ್ ಹೆಡ್ ಕಾನ್ಸ್ ಟೇಬಲ್, ಹವ್ಯಾಸಿ ಬರಹಗಾರ ಸ್ವರೂಪ್ ಕೊಟ್ಟೂರು ಮಾತನಾಡಿ,ಆರೋಗ್ಯವು ನಮ್ಮ ಎಲ್ಲ ಗುರಿ ಸಾಧನೆಗೆ ತಳಹದಿ, ಆರೋಗ್ಯವಿದ್ದರೆ ಸಾಧನೆಯ ಹಾದಿಯಲ್ಲಿ ಭಾಗಶಃ ಯಶಸ್ಸು ಸಿಕ್ಕಂತೆ. ಕಾರಣ ಆರೋಗ್ಯ ಜೋಪಾನ. ಯೋಗ, ಪ್ರಾಣಾಮಯವು ನಿಮ್ಮನ್ನು ಸರ್ವ ರೀತಿಯಲ್ಲೂ ಸಧೃಢವಾಗಿಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಡಾ. ಅಯ್ಯುಬ್ ಖಾನ್, ಸಂಯೋಜಕ ವಿಕ್ರಂ ಬಾಳಿಕಟ್ಟಿ, ಶಿಬಿರದ ಅಧಿಕಾರಿ ರಾಮಸ್ವಾಮಿ, ಶಂಕರ ಕೆಂಚನ ಗೌಡ್ರು, ಕಾರ್ತಿಕ್, ಗಂಗೂಲಿ ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಶಿಬಿರಾರ್ಥಿಗಳಾದ ಎಸ್.ಎಂ. ಜಯಲಲಿತಾ, ಅನಿತಾ ಬಾಯಿ, ದೇವಕಿ, ಇಲಿಯಾಸ್, ತನುಜಾ, ಶಶಾಂಕ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸ್ ಹುತಾತ್ಮರ ತ್ಯಾಗ, ಕರ್ತವ್ಯನಿಷ್ಠೆ ಸಮಾಜಕ್ಕೆ ಸದಾ ಪ್ರೇರಣೆ: ನ್ಯಾ. ಗಂಗಾಧರ
ಚಾಟ್‌ಜಿಪಿಟಿ, ಎಐ ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕುಂಠಿತ: ವಾಣಿ ಕಲಬುರ್ಗಿ