ಮಡಿವಂತಿಕೆ ಇಲ್ಲದ ಸಾಹಿತ್ಯ ಸಮ್ಮೇಳನ ಇಂದಿನ ಅಗತ್ಯ

KannadaprabhaNewsNetwork | Published : Nov 21, 2023 12:45 AM

ಸಾರಾಂಶ

ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಮಾತನಾಡಿ, ಶಾಸಕರು ಅನುಮಾನ ವ್ಯಕ್ತಪಡಿಸಿದಂತೆ ಯಾವುದೇ ವಿವಾದಾತ್ಮಕ ಸಂಗತಿಗಳಿಗೆ ಅವಕಾಶ ನೀಡಿಲ್ಲ. ಸಮ್ಮೇಳನದ ಗೋಷ್ಠಿಯಲ್ಲಿ ಕೇವಲ ಮಲೆನಾಡಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ನೀಡಲಾಗಿದೆ. ಸದಸ್ಯರೆಲ್ಲರೂ ಸೇರಿಕೊಂಡು ವಿವಾದ ಆಗದಂತೆ ಜಾಗೃತಿ ವಹಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಮಡಿವಂತಿಕೆ ಇಲ್ಲದ ಎಲ್ಲರನ್ನು ಒಳಗೊಂಡ ಸಾಹಿತ್ಯ ಸಮ್ಮೇಳನಗಳ ಆಯೋಜಿಸಬೇಕು. ಅಸಹಿಷ್ಣುತೆ, ಪಥ್ಯೆ, ಅಪಥ್ಯೆಗಳಿಲ್ಲದ ಕೇವಲ ಶುದ್ಧ ಸಾಹಿತ್ಯ ಮಾತ್ರ ಚರ್ಚಿತ ವಿಷಯವಾಗಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸೋಮವಾರ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಿರುವ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ, ವಿರೋಧ ಚರ್ಚೆಗೆ ಮುಕ್ತ ಅವಕಾಶವಿದೆ. ಬಹುತೇಕ ಸಾಹಿತ್ಯ ಸಮ್ಮೇಳನಗಳು ವಿವಾದಗಳಲ್ಲಿ ಕೊನೆಗೊಳ್ಳುತ್ತಿದೆ. ಆರೋಗ್ಯ ಪೂರ್ಣ ಚರ್ಚೆಯಾಗಬೇಕು. ವಿಷಯ ಮಂಡನೆ ಮಾಡುವ ಸಾಹಿತಿಗಳು ವಿಷಯಾಂತರ ಮಾಡದಂತೆ ಎಚ್ಚರಿಕೆ ವಹಿಸಬೇಕು. ಎಡ, ಬಲ ಸಿದ್ಧಾಂತವಿಲ್ಲದ ಸಮಿತಿ ರಚನೆಗೆ ಅವಕಾಶ ನೀಡಬೇಕು. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಸರಿಮಾಡಿಕೊಳ್ಳಿ ಎಂದು ಹೇಳಿದರು.

ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಮಾತನಾಡಿ, ಶಾಸಕರು ಅನುಮಾನ ವ್ಯಕ್ತಪಡಿಸಿದಂತೆ ಯಾವುದೇ ವಿವಾದಾತ್ಮಕ ಸಂಗತಿಗಳಿಗೆ ಅವಕಾಶ ನೀಡಿಲ್ಲ. ಸಮ್ಮೇಳನದ ಗೋಷ್ಠಿಯಲ್ಲಿ ಕೇವಲ ಮಲೆನಾಡಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ನೀಡಲಾಗಿದೆ. ಸದಸ್ಯರೆಲ್ಲರೂ ಸೇರಿಕೊಂಡು ವಿವಾದ ಆಗದಂತೆ ಜಾಗೃತಿ ವಹಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಗ್ರಾಮ ಪಂಚಾಯಿತಿ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಯು.ಡಿ. ವೆಂಕಟೇಶ್, ತಾಲೂಕು ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್, ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೆಗ್ಡೆ, ತಹಸೀಲ್ದಾರ್ ಜಕ್ಕನ ಗೌಡರ್, ತಾಪಂ ಇಒ ಶೈಲಾ ಎನ್., ಮುಖ್ಯಾಧಿಕಾರಿ ಸಿ.ಕುರಿಯಕೋಸ್, ಆರೋಗ್ಯಾಧಿಕಾರಿ ನಟರಾಜ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಟಿ.ವಿ. ಸತೀಶ್ ಇದ್ದರು.

- - - -20ಟಿಟಿಎಚ್‌01:

ತೀರ್ಥಹಳ್ಳಿಯಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.

Share this article