- ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿಯಲ್ಲಿ ಹಿರೇಮಠದ ಶ್ರೀ ಸಲಹೆ
ಚನ್ನಗಿರಿ: ಕನ್ನಡ ಸಾಹಿತ್ಯ ಉಳಿದು, ಇನ್ನಷ್ಟು ಬೆಳೆಯಬೇಕಾದರೆ ಕನ್ನಡ ಭಾಷೆಯ ಸಾಹಿತ್ಯದ ಕಂಪನ್ನು ಸೂಸುವಂತಹ ಇಂತಹ ಕವಿಗೋಷ್ಠಿಗಳು, ವಿಚಾರ ಸಂಕಿರಣಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಸ್ಥಳೀಯ ಹಿರೇಮಠದ ಶ್ರೀ ಡಾ.ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಹಿರೇಮಠ, ತಾಲೂಕು ಪತ್ರಕರ್ತರ ಸಂಘ, ರಂಗಸೌರಭ ನಾಟ್ಯ ಕಲಾ ಹವ್ಯಾಸಿ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ತ್ರಿಪದಿ ಕವಿ ಮಳಲಕೆರೆ ಗುರುಮೂರ್ತಿ ಅವರ ಸವಿನೆನಪಿಗಾಗಿ ದಾವಣಗೆರೆ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.ಕನ್ನಡ ಭಾಷೆಯಲ್ಲಿನ ಸಾಹಿತ್ಯವು ಬೇರೆ ಯಾವುದೇ ಭಾಷೆಗಳಲ್ಲಿ ಕಾಣಲು ಸಾಧ್ಯವಿಲ್ಲ. ಇಂತಹ ಮಾತೃಭಾಷೆಯಲ್ಲಿನ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಇಂದಿನ ಯುವಜನಾಂಗ ಮಾಡಬೇಕಾಗಿದೆ. ಕಲ್ಲು ಹೃದಯಗಳನ್ನು ಅರಳಿಸುವ ಶಕ್ತಿ ಕನ್ನಡ ಸಾಹಿತ್ಯಕ್ಕೆ ಇದೆ ಎಂದರು.
ಅಧ್ಯಕ್ಷತೆಯನ್ನು ಹಿರಿಯಕವಿ ಡಾ.ಆನಂದ್ ಋಗ್ವೇದಿ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ ಕುರಿತಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಶಿವಯೋಗಿ ಹಿರೇಮಠ್, ಬ್ರಹ್ಮಕುಮಾರಿ ಸಮಾಜದ ಮಹಾಲಕ್ಷ್ಮಿಅಕ್ಕ, ಡಾ.ನಮಿತ ಸತೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರೇಶ್ ಗಂಗಗೊಂಡನಹಳ್ಳಿ, ಜ್ಯೋತಿ ಕೊಟ್ರೇಶ್ ಕೋರಿ, ಅಣ್ಣೋಜಿರಾವ್, ಸತೀಶ್, ಕೆಪಿಎಂ ಸ್ವಾಮಿ ಉಪಸ್ಥಿತರಿದ್ದರು.
- - -
-11ಕೆಸಿಎನ್ಜಿ2: ಚನ್ನಗಿರಿಯ ಹಿರೇಮಠದ ಶ್ರೀಗಳು ಕವಿಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.