ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸರ್ವಪಲ್ಲಿ ರಾಧಾಕೃಷ್ಣ ಅವರು ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಶಿಕ್ಷಣದ ಪರಿವರ್ತನಾ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದ ಅವರು ವ್ಯಕ್ತಿ ಮತ್ತು ಸಮಾಜವನ್ನು ರೂಪಿಸುವಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನ ಪ್ರತಿಪಾದಿಸಿದರು. ಶಿಕ್ಷಣದ ದೃಷ್ಟಿಕೋನವು ಸಮಗ್ರ ಅಭಿವೃದ್ಧಿಯನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಸಾರಿದರು ಎಂದರು.ಡಾ. ರಾಧಾಕೃಷ್ಣನ್ ಅವರ ಪ್ರಭಾವ ಭಾರತದ ಗಡಿಯನ್ನು ಮೀರಿ ವಿಸ್ತರಿಸಿತ್ತು. ಅವರಲ್ಲಿದ್ದ ತಾತ್ವಿಕ ಒಳನೋಟಗಳು ವಿಶ್ವಾದಾದ್ಯಂತ ಮನ್ನಣೆಗಳಿಸಿ ಭಾರತಕ್ಕೆ ಗೌರವವನ್ನು ತಂದು ಕೊಟ್ಟಿತು. ಭಾರತದ ರಾಷ್ಟ್ರಪತಿಯಾದ ನಂತರವೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಅಪಾರ ಶಿಷ್ಯರ ಬಳಗವನ್ನು ಹೊಂದಿದ್ದ ಅವರು ಬದುಕಿನುದ್ದಕ್ಕೂ ಸರಳಯಿಂದಲೇ ಬದುಕಿದರು. ಅವರ ತತ್ವ ಮತ್ತು ಆದರ್ಶಗಳು ಎಲ್ಲಾ ಶಿಕ್ಷಕರಿಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಗೋವಿಂದಪ್ಪ ಮಾತನಾಡಿ, ಬರದ ನಾಡಿನಲ್ಲಿ ಪರಮಪೂಜ್ಯ ಸಿದ್ದಯ್ಯನ ಕೋಟೆಯ ಶ್ರೀಗಳು ಹಿಂದುಳಿದಿರುವ ತಾಲೂಕಿನಲ್ಲಿ ತ್ರಿವಿಧ ದಾಸೋಹಿಗಳಾಗಿದ್ದಾರೆ. ಬಸವಾದಿ ಶಿವಶರಣರ ತತ್ವವನ್ನ ಅಳವಡಿಸಿಕೊಂಡು ತಮ್ಮ ಜೀವನದಕ್ಕೂ ಜನರಲ್ಲಿರುವ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕಿ ಎಂದು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಜನರನ್ನು ಜಾಗೃತರನ್ನಾಗಿಸಿದ್ದಾರೆ ಎಂದು ತಿಳಿಸಿದರು.ಸ್ವತಃ ಅನ್ನದಾಸೋಹ, ಜ್ಞಾನ ದಾಸೋಹ ನೀಡುವ ಮೂಲಕ ಈ ಭಾಗದ ಜನತೆಗೆ ಬಸವಾದಿ ಶಿವ ಶರಣರ ಆಶಯಗಳನ್ನು ಉಣಬಡಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕೆ. ಚಂದ್ರಪ್ಪ ನಿವೃತ್ತ ಉಪನ್ಯಾಸಕ ಬಿಎಸ್. ವೀರಭದ್ರಪ್ಪಶ್ರೀಮಠದ ಕಾರ್ಯದರ್ಶಿ ಪಿಆರ್. ಕಾಂತರಾಜ್, ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಈಶ್ವರಮ್ಮ ನಳಿನಾಕ್ಷಿ, ಎಸ್ಪಿ ಲಕ್ಷ್ಮಣ, ಮುಖ್ಯ ಶಿಕ್ಷಕ ಮಂಜಯ್ಯ, ಲೋಕಮ್ಮ ,ಕಾಂತಪ್ಪ, ರೂಪ, ಚೇತನ, ನಾಗಮ್ಮ, ಮಂಜಮ್ಮ, ಮಹಾಂತಮ್ಮ ಇದ್ದರು.