ಧರ್ಮ ಸಮಾಜ ವಿಭಜನೆಯ ಸಾಧನವಾಗದಿರಲಿ: ರಂಭಾಪುರಿ ಜಗದ್ಗುರು

KannadaprabhaNewsNetwork |  
Published : Sep 22, 2026, 03:15 AM IST
ಜನಜಾಗೃತಿ ಧರ್ಮ ಸಮಾರಂಭ | Kannada Prabha

ಸಾರಾಂಶ

ಧರ್ಮವೆಂದರೆ ಕೇವಲ ಮಾತಲ್ಲ. ಆಡಿದಂತೆ ನಡೆದು ತೋರಿಸುವುದೇ ನಿಜವಾದ ಧರ್ಮ. ಅಸಹಾಯಕರ ಕಷ್ಟಕ್ಕೆ ಸ್ಪಂದಿಸುವುದೇ ಧರ್ಮದ ಜೀವಾಳ. ಧರ್ಮ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಬೇಕೇ ಹೊರತು ವಿಭಜಿಸುವ ಸಾಧನವಾಗಬಾರದೆಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಧರ್ಮವೆಂದರೆ ಕೇವಲ ಮಾತಲ್ಲ. ಆಡಿದಂತೆ ನಡೆದು ತೋರಿಸುವುದೇ ನಿಜವಾದ ಧರ್ಮ. ಅಸಹಾಯಕರ ಕಷ್ಟಕ್ಕೆ ಸ್ಪಂದಿಸುವುದೇ ಧರ್ಮದ ಜೀವಾಳ. ಧರ್ಮ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಬೇಕೇ ಹೊರತು ವಿಭಜಿಸುವ ಸಾಧನವಾಗಬಾರದೆಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ತಾಲೂಕಿನ ಕೋರವಾರ ಗ್ರಾಮದಲ್ಲಿ ಶ್ರಾವಣ ಪುರಾಣ ಮಂಗಲ ಮತ್ತು ನೂತನ ಕಲ್ಯಾಣ ಮಂಟಪ ಉದ್ಘಾಟನೆ ನಿಮಿತ್ತ ಸೋಮವಾರ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯುವ ಜನರು ಆಧುನಿಕತೆ ಶಿಕ್ಷಣ ಮತ್ತು ತಂತ್ರಜ್ಞಾನದ ಅರಿವಿನೊಂದಿಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಮರೆಯಬಾರದು. ಆಧುನಿಕತೆ ಬೇಕು. ಆದರೆ ಮೂಲ ಸಂಸ್ಕೃತಿ ಬೇರುಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಅತ್ಯಮೂಲ್ಯವಾದ ಜೀವನ ದರ್ಶನದ ಸಂದೇಶಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪ. ಮಠಾಧ್ಯಕ್ಷರಾದ ಬಸವಲಿಂಗ ಶಿವಾಚಾರ್ಯರು 21 ದಿನಗಳ ಇಷ್ಟಲಿಂಗ ಪೂಜಾನುಷ್ಠಾನ ನೆರವೇರಿಸಿ ನೂತನ ಕಲ್ಯಾಣ ಮಂಟಪದ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ. ಶ್ರೀಗಳವರ ಕ್ರಿಯಾಶೀಲ ಬದುಕು ಇನ್ನಿತರರಿಗೆ ಮಾದರಿಯಾಗಿದೆ. ನೂತನ ಕಲ್ಯಾಣ ಮಂಟಪದ ಮೂಲಕ ಸಾಮಾಜಿಕ ಸೇವೆ ನಡೆಯಲಿ. ವಿವಾಹಗಳ ಜೊತೆಗೆ ಧಾರ್ಮಿಕ ಉಪನ್ಯಾಸ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಬಡ ಕುಟುಂಬಗಳಿಗೆ ನೆರವು ಆರೋಗ್ಯ ಶಿಬಿರ ರಕ್ತದಾನ ಮೊದಲಾದ ಕಾರ್ಯಕ್ರಮಗಳಿಗೂ ಈ ಕಲ್ಯಾಣ ಮಂಟಪ ಬಳಕೆಯಾಗುವಂತಾಗಲೆಂದು ಶುಭ ಹಾರೈಸಿದರು.

ಉಪದೇಶಾಮೃತ ನೀಡಿದ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಜಾತಿ ಪಕ್ಷ ಭೇದಭಾವಗಳನ್ನು ಮೀರಿ ಗ್ರಾಮದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕೆಂದರು. ನೇತೃತ್ವ ವಹಿಸಿದ್ದ ಕೋರವಾರ ಶ್ರೀಗುರು ಮಹಾಂತೇಶ್ವರ ಮಠದ ಬಸವವಲಿಂಗ ಶಿವಾಚಾರ್ಯರು ಮಾತನಾಡಿ, ಡಂಬರ ಮತ್ತು ಅನಗತ್ಯ ಖರ್ಚಿನ ಬದಲು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ವಿವಾಹ ಮಾಡಿಕೊಳ್ಳುವ ಮನೋಭಾವ ಬೆಳೆಯಬೇಕು. ಉಳಿಸಿದ ಸಂಪತ್ತನ್ನು ಶಿಕ್ಷಣ ಆರೋಗ್ಯ ಮತ್ತು ಸಮಾಜ ಸೇವೆಗೆ ಬಳಸುವ ಚಿಂತನೆ ಬೆಳೆಯಬೇಕು ಎಂದರು.

ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬಿಲ್‌ಕೆರೂರು ಸಿದ್ಧಲಿಂಗ ಶಿವಾಚಾರ್ಯರು, ಮುಖೇಡ ವಿರೂಪಾಕ್ಷ ಶಿವಾಚಾರ್ಯರು, ಬರ್ದಾಪುರ ಚನ್ನಬಸವ ಶಿವಾಚಾರ್ಯರು, ಸಗರ ಮರುಳ ಮಹಾಂತ ಶಿವಾಚಾರ್ಯರು, ಯಂಕಂಚಿ ಅಭಿನವ ರುದ್ರಮುನಿ ಶಿವಾಚಾರ್ಯರು, ಕೋರವಾರ ಚೌಕಿಮಠದ ಮುರಘೇಂದ್ರ ಸ್ವಾಮಿಗಳು ಪಾಲ್ಗೊಂಡಿದ್ದರು. ಕೋರವಾರ ಖ್ಯಾತ ವೈದ್ಯರಾದ ಡಾ.ಎಸ್.ಎ. ಹಿರೇಮಠ ಖ್ಯಾತ ನೇತ್ರ ತಜ್ಞರಾದ ಡಾ.ಪ್ರಭುಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಟಂ.. ಮೈಸೂರು-ಚಾ.ನಗರ ಕೇಂದ್ರ ಬ್ಯಾಂಕ್‌ಗೆ ₹5.70 ಕೋಟಿ
ಎಂಎಸ್‌ಎಂಇ ಉದ್ಯಮಿಗಳು ಇ-ವಾಣಿಜ್ಯ ಬಳಸಿ