ಶಿಕ್ಷಣದ ಜತೆ ಕ್ರೀಡಾ ಸಾಧಕರಾಗಲಿ: ಕೃಷ್ಣ ಬೈರೇಗೌಡ

KannadaprabhaNewsNetwork |  
Published : Dec 15, 2025, 02:45 AM IST
ಬ್ಯಾಟರಾಯನಪುರ | Kannada Prabha

ಸಾರಾಂಶ

ಕಳೆದ ಹಲವು ದಿನಗಳಿಂದ ಬೆಟ್ಟಹಲಸೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಆಟದ ಮೈದಾನ, ತೆರೆದ ವ್ಯಾಯಾಮ ಶಾಲೆ, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಹಲವು ಕಾಮಗಾರಿಗಳನ್ನು ಕಾಲ ಕಾಲದಲ್ಲಿ ಬಂದು ವೀಕ್ಷಿಸುವ ಕೆಲಸವನ್ನು ನಾನು ಮೇಲುಸ್ತುವಾರಿ ಮಾಡಿಸಿದ್ದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡಾ ಸಾಧಕರಾಗಿ ಹೊರಹೊಮ್ಮಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದದರು.

ಕನ್ನಡಪ್ರಭ ವಾರ್ತೆ ಬ್ಯಾಟರಾಯನಪುರ

ಕಳೆದ ಹಲವು ದಿನಗಳಿಂದ ಬೆಟ್ಟಹಲಸೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಆಟದ ಮೈದಾನ, ತೆರೆದ ವ್ಯಾಯಾಮ ಶಾಲೆ, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಹಲವು ಕಾಮಗಾರಿಗಳನ್ನು ಕಾಲ ಕಾಲದಲ್ಲಿ ಬಂದು ವೀಕ್ಷಿಸುವ ಕೆಲಸವನ್ನು ನಾನು ಮೇಲುಸ್ತುವಾರಿ ಮಾಡಿಸಿದ್ದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡಾ ಸಾಧಕರಾಗಿ ಹೊರಹೊಮ್ಮಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದದರು.ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ಹಲವು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಏನೇನು ಉದ್ಘಾಟನೆ:

ಬೆಟ್ಟಹಲಸೂರು ಗ್ರಾಮದ ನಮ್ಮೂರ ಸರ್ಕಾರಿ ಶಾಲೆ ಆಟದ ಮೈದಾನದ ಆವರಣದಲ್ಲಿ ನಿರ್ಮಾಣಗೊಂಡಿದ್ದ ಹುಣಸಮಾರನಹಳ್ಳಿ ಶ್ರೀ ಮಠದ ಹಿರಿಯ ಸ್ವಾಮೀಜಿ ಶ್ರೀ ಪಟ್ಟದ ಶ್ರೀ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳ‌ ಕಂಚಿನ ಪುತ್ಥಳಿ ಅನಾವರಣ, ನೂತನ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್, ತೆರೆದ ವ್ಯಾಯಾಮ ಶಾಲೆ, ಆಟದ ಮೈದಾನ, ನೆಲಸಂಪು, ಸೌರದೀಪಗಳ‌‌ ಉದ್ಘಾಟನೆ, ಕಾಂಕ್ರೀಟ್ ಫೆವರ್ಸ್ ರಸ್ತೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಹುಣಸಮಾರನಹಳ್ಳಿ ಶ್ರೀ ಮಠದ ಪಟ್ಟದ ಶ್ರೀ ಗುರು ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಹತ್ವದ ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದು, ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ಎಸ್.ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್‌ನ ನಿರ್ಮಾತೃ ಪಂಚಮಿ ಶ್ರೀನಿವಾಸ್ ಬಿ.ಎನ್., ತಾ.ಪಂ‌.ಮಾಜಿ ಸದಸ್ಯ ನಾಗರಾಜ್ ಬಾಬು, ಬೆಟ್ಟಹಲಸೂರು ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಬಿ.ಎಂ.ನಾಗೇಶ್, ಬಿ.ಎಸ್.ಅನಿಲ್ ಕುಮಾರ್, ಶಾಲಾ ಮೈದಾನ ಅಭಿವೃದ್ಧಿ ಪ್ರೋತ್ಸಾಹಕರು, ಪಡುಕೋಣೆ ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನ ಸಂಸ್ಥಾಪಕ ನಿರ್ದೇಶಕ ವಿವೇಕ್ ಕುಮಾರ್, ತಾ.ಪಂ‌.ಇಓ ಮಧು, ಪಿಡಿಓ. ಲೋಕನಾಥ್ ಪಿ.ಎಸ್., ಗ್ರಾ.ಪಂ.ಸದಸ್ಯರು ಹಾಗೂ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ