ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಕೊಲ್ಹಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡ 75 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಭಾರತದ ಸಂವಿಧಾನವು ದೇಶದ ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ ಎಂದರು.
ನಮ್ಮ ದೇಶವು ಸ್ವಾತಂತ್ರ್ಯ ನಂತರ ಅನೇಕ ಸವಾಲುಗಳನ್ನು ಎದುರಿಸಿತು. ಈ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸುವುದು, ಸಂಸ್ಥಾನಗಳ ವಿಲಿನೀಕರಣ, ಕಾನೂನು ಸುವ್ಯವಸ್ಥೆಗೊಳಿಸುವುದು ಹೀಗೆ ಮುಂತಾದ ಸಾವಲುಗಳಿದ್ದವು. ಸಂಸ್ಥಾನಗಳ ವಿಲಿನೀಕರಣವನ್ನು ವಲ್ಲಾಬಾಯಿ ಪಟೇಲರು ಯಶಸ್ವಿಯಾಗಿ ನಿಭಾಯಿಸಿದರು ಎಂದು ಹೇಳಿದರು.ಇಡೀ ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂದು ತಿಳಿಸಿ ಕೊಡುವ ವ್ಯವಸ್ಥೆಯನ್ನು ಸಂವಿಧಾನ ಎನ್ನುತ್ತಾರೆ. ಡಾ.ಬಾಬು ರಾಜೇಂದ್ರ ಪ್ರಸಾದ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು. ಈ ಸಭೆಯಲ್ಲಿ ಜವಾಹರಲಾಲ ನೆಹರು, ವಲ್ಲಾಭಭಾಯಿ ಪಟೇಲ, ಡಾ.ಬಿ ಆರ್.ಅಂಬೇಡ್ಕರ, ಮೌಲಾನಾ ಅಬ್ದುಲ್ ಕಲಾಂ ಸಜಾದ್, ಸಿ.ರಾಜಗೋಪಾಲಚಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಅನೇಕ ಸಭೆಗಳನ್ನು ನಡೆಸಿ ಒಂದು ಸುಭದ್ರ ಸಂವಿಧಾನ ಕೊಟ್ಟರು. ಅದು ಜ.26 ,1950 ರಂದು ಜಾರಿಗೆ ಬಂದಿತು ಎಂದರು.
ಪಟ್ಟಣದ ಎ.ಪಿ.ಜೆ.ಅಬ್ದುಲ್ ಕಲಾಂ ಕಿರಿಯ ಪ್ರಾಥಮಿಕ ಶಾಲೆ,ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಕೆ.ಜಿ.ಎಸ್.ಶಾಲೆ, ಸಂಗಮೇಶ್ವರ ಪ್ರೌಢ ಶಾಲೆ ಹಾಗೂ ಸಿಕ್ಯಾಬ್ ಪ್ರೌಢ ಶಾಲೆಯ ಮಕ್ಕಳಿಂದ ದೇಶಭಕ್ತಿ ಮೂಡಿಸುವ ಸಾಂಸ್ಖತಿಕ ಕಾರ್ಯಕ್ರಮಗಳು ಜರುಗಿದವು.
ಪ.ಪಂ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ವಿಜಯಮಹಾಂತೇಶ ಗಿಡ್ಡಪ್ಪಗೋಳ, ನಿಂಗಪ್ಪ ಗಣಿ, ಬಾಬು ಭಜಂತ್ರಿ, ಅಪ್ಪಾಸಿ ಮಟ್ಯಾಳ, ತೌಸೀಪ್ ಗಿರಗಾಂವಿ, ಶಿಕ್ಷಣ ಸಂಯೋಜಕ ಜಿ.ಎಸ್.ಗಣಿಯವರ, ಸಿಆರ್‌ಪಿ ಜಿ.ಐ.ಗೊಡ್ಯಾಳ ಎಂ,,ಆರ್.ಕಲಾದಗಿ.ದಸ್ತಗೀರ ಕಲಾದಗಿ ಸೇರಿದಂತೆ ಪಟ್ಟಣದ ಗಣ್ಯಮಾನ್ಯರು ಇದ್ದರು.