ನಾಡು ನುಡಿ ಸಂರಕ್ಷಣೆಗೆ ಹೋರಾಡೋಣ: ಶಿವರಾಜ ವಗ್ಗರ

KannadaprabhaNewsNetwork |  
Published : Mar 04, 2025, 12:30 AM IST
ಸುರಪುರ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಸೋಮವಾರ ಜಯ ಕರ್ನಾಟಕ ರಕ್ಷಣಾ ಸೇನೆಯ ನಗರ ಘಟಕ ಪದಾಧಿಕಾರಿಗಳನ್ನು ನೇಮಿಸಲಾಯಿತು.  | Kannada Prabha

ಸಾರಾಂಶ

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಸೋಮವಾರ ಜಯ ಕರ್ನಾಟಕ ರಕ್ಷಣಾ ಸೇನೆಯ ನೂತನ ನಗರ ಘಟಕ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸುರಪುರ ಘಟಕದ ಪದಾಧಿಕಾರಿಗಳ ನೇಮಕ

ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಸೋಮವಾರ ಜಯ ಕರ್ನಾಟಕ ರಕ್ಷಣಾ ಸೇನೆಯ ನೂತನ ನಗರ ಘಟಕ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷ ಶಿವರಾಜ ವಗ್ಗರ ಮಾತನಾಡಿ, ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನವರ ಆದೇಶದ ಮೇರೆಗೆ ಜಿಲ್ಲಾ ಕಾರ್ಯಧ್ಯಕ್ಷ ಶರಣು ಬೈರಿಮರಡಿ ಹಾಗೂ ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಡಗೇರಾ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದರು.

ಕನ್ನಡ ನಾಡು-ನುಡಿ, ಜಲ-ನೆಲ ವಿಷಯ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಡೋಣ. ನಮ್ಮ ಸಂಘಟನೆಯು ಸದಾ ನ್ಯಾಯದ ಪರ ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದೆ ಎಂದು ಹೇಳಿದರು.

ತಾಲೂಕು ಕಾರ್ಯದರ್ಶಿ ಕೃಷ್ಣ ಹಾವಿನ ಬಾದ್ಯಪುರ, ಆಟೋ ಚಾಲಕರ ಘಟಕದ ಅಧ್ಯಕ್ಷ ಹನುಮಂತ ಬಂಡಾರಿ, ಮಂಜು ಸಂಗಟಿ, ಪಿಡ್ಡಪ್ಪ ಹೊಸಮನಿ, ಮುರಳೀಧರ ಅಂಬುರೆ, ವಿಶ್ವ ಟರ್ಕಿ, ನಿಂಗನಗೌಡ ಗೌಡೂರ ಇದ್ದರು.

ಪದಾಧಿಕಾರಿಗಳು:

ಶಿವಕುಮಾರ ಗಾಜಲದಿನ್ನಿ (ಅಧ್ಯಕ್ಷ), ವೀರೇಶ ಆಡಿನ್ ರತ್ತಾಳ, ಮೌನೇಶ್ ಕಟ್ಟಿಮನಿ (ಉಪಾಧ್ಯಕ್ಷರು), ಮಂಜು ಪಾಟೀಲ್ (ಪ್ರಧಾನ ಕಾರ್ಯದರ್ಶಿ), ಸಿದ್ದು ಮಡಿವಾಳ (ಖಜಾಂಚಿ), ಪ್ರವೀಣ್ ವಿಭೂತೆ (ಸಂಘಟನಾ ಕಾರ್ಯದರ್ಶಿ), ಸಿದ್ದು ತುಮಕೂರು (ಜಂಟಿ ಕಾರ್ಯದರ್ಶಿ), ಪರಶುರಾಮ ಕಟ್ಟಿಮನಿ (ಸಹ ಕಾರ್ಯದರ್ಶಿ), ಶಿವು ಮುಡ್ಡ (ಸಂಘಟನಾ ಸಂಚಾಲಕ), ನಾಗಲಿಂಗ ಕರಿಗೆರ್ (ಕಾರ್ಯದರ್ಶಿ), ಚನ್ನಬಸವ ಗುತ್ತಿ (ಸಹ ಕಾರ್ಯದರ್ಶಿ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ