ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಡಾ. ಬಿ.ಅರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕು ಸರ್ವೋದಯ ಮಂಡಲ ಆಯೋಜಿಸಿದ್ದ ಗಾಂಧಿ ತತ್ವ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಭಗತ್ ಸಿಂಗ್ ಸೇರಿದಂತೆ ಕೋಟ್ಯಾಂತರ ಜನರು ಈ ದೇಶದ ಬಿಡುಗಡೆಗಾಗಿ ಜೀವತೆತ್ತಿದ್ದಾರೆ. ಧ್ವಜಕ್ಕೆ ಅವಮಾನ ಮಾಡಿದರೆಂಬ ಕಾರಣಕ್ಕೆ ನಾನಿ ಪಾಲ್ ಬ್ರಿಟಿಷರಿಗೆ ತಕ್ಕ ಪಾಠ ಕಲಿಸುತ್ತಾಳೆ. ಔದ್‌ನ ನವಾಬ ಶಾಲೆ ತೆರೆಯಲು ನಿರಾಕರಿಸಿ ಎಸೆದ ಚಪ್ಪಲಿಯನ್ನೇ ಮೂಲವಾಗಿಟ್ಟುಕೊಂಡು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕಟ್ಟಿದ ಮದನ ಮೋಹನ ಮಾಳವೀಯರ ಹೋರಾಟ, ಗಾಂಧೀಜಿಯವರ ಸತ್ಯಾಗ್ರಹ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಕಾರಣವಾಗಿದೆ. ಶಿವಪುರದ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥ ಹೋರಾಟ, ಅರಣ್ಯ ಸತ್ಯಾಗ್ರಹ, ದಂಡಿಯಾತ್ರೆ, ಕ್ವಿಟ್ ಇಂಡಿಯಾ ಚಳುವಳಿ, ಈಸೂರು ಹೋರಾಟ, ಪಾನ ನಿಷೇಧ ಚಳುವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಗಾಂಧಿಯವರು ಹೋರಾಟ ರೂಪಿಸಿದರು ಎಂದು ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು. ಕೆ.ಕೆ ಕಾನ್ವೆಂಟ್‌ನ ಅಧ್ಯಕ್ಷ ತನ್ವೀರುಲ್ಲಾ ಷರೀಫ್, ಶರಣ ಸಾಹಿತ್ಯ ಪರಿಷತ್ತು ತಾ. ಅಧ್ಯಕ್ಷ ಪಿ.ಆರ್. ಗುರುಸ್ವಾಮಿ, ಗೋವಿಂದರಾಜು, ಶೋಭಾ ಜಯದೇವ್, ಶಾಂತಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ, ತೀರ್ಪುಗಾರರಾದ ನಂ. ಶಿವಗಂಗಪ್ಪ, ವಿ.ಆರ್. ಅಂಗಡಿ, ಕಮಲಾ ಯಾಳಗಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ವ್ಯವಸ್ಥಾಪಕಿ ರುಕ್ಮಿಣಿ, ನಾಗರತ್ನಮ್ಮ, ನಿವೃತ್ತ ಶಿಕ್ಷಕ ಮಡೆನೂರು ಸೋಮಶೇಖರ್, ಸರ್ವೋದಯ ಮಂಡಲ ಪ್ರಧಾನ ಕಾರ್ಯದರ್ಶಿ ಓಂಕಾರಮೂರ್ತಿ, ಕಸಾಪ ಕಾರ್ಯದರ್ಶಿ ಎಚ್.ಎಸ್. ಮಂಜಪ್ಪ ಮತ್ತಿತರಿದ್ದರು.