ಒಣಮೀಸಲಾತಿಗಾಗಿ ಒಂದಾಗೋಣ-ಬಸವರಾಜ ದಡೆಸೂಗುರ

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಒಳ ಮೀಸಲಾತಿ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಒಳಮೀಸಲಾತಿ ಹೋರಾಟವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು, ಇದರ ಜಾರಿಗಾಗಿ ಒಂದಾಗಿ ಹೋರಾಟ ಮಾಡೋಣ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಕರೆ ನೀಡಿದ್ದಾರೆ. ನಗರದ ಖಾಸಗಿ ಹೋಟೆಟ್‌ನಲ್ಲಿ ಬುಧವಾರ ನಡೆದ ಮಾದಿಗ ಮುನ್ನಡೆ ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ಬಹುಪಾಲು ಜನಸಂಖ್ಯೆ ಹೊಂದಿದ್ದು, ಜನಸಂಖ್ಯಾ ಅನುಗುಣವಾಗಿ ಮೂರು ದಶಕಗಳ ಮೀಸಲಾತಿ ವರ್ಗೀಕರಣ ಹೋರಾಟವನ್ನು ನಿರ್ಲಕ್ಷ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಮಾದಿಗ ಮುನ್ನಡೆ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಒಳ ಮೀಸಲಾತಿ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಒಳಮೀಸಲಾತಿ ಹೋರಾಟವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು, ಇದರ ಜಾರಿಗಾಗಿ ಒಂದಾಗಿ ಹೋರಾಟ ಮಾಡೋಣ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಕರೆ ನೀಡಿದ್ದಾರೆ.ನಗರದ ಖಾಸಗಿ ಹೋಟೆಟ್‌ನಲ್ಲಿ ಬುಧವಾರ ನಡೆದ ಮಾದಿಗ ಮುನ್ನಡೆ ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ಬಹುಪಾಲು ಜನಸಂಖ್ಯೆ ಹೊಂದಿದ್ದು, ಜನಸಂಖ್ಯಾ ಅನುಗುಣವಾಗಿ ಮೂರು ದಶಕಗಳ ಮೀಸಲಾತಿ ವರ್ಗೀಕರಣ ಹೋರಾಟವನ್ನು ನಿರ್ಲಕ್ಷ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಮಾದಿಗ ಮುನ್ನಡೆ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದರು.

ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದರೂ ಒಳ ಮೀಸಲಾತಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸಿ ಸಮುದಾಯವನ್ನು ದಿಕ್ಕು ತಪ್ಪಿಸುವ ಎಲ್ಲ ಪ್ರಯತ್ನ ನಡೆಯಿತು ಎಂದರು.ಮಾದಿಗ ಸಮುದಾಯ ಸರಿಯಾಗಿ ಅರ್ಥೈಸಿಕೊಳ್ಳದೇ ರಾಜಕೀಯವಾಗಿ ಬಲಿಪಶುವಾದರು. ಇನ್ನು ಮುಂದೆ ನಾವು ಎಲ್ಲರೂ ಸಂಘಟಿತರಾಗಬೇಕು. ಸಮುದಾಯದ ಯುವಕರು ಶಿಕ್ಷಣ ಪಡೆಯಬೇಕು. ಆರ್ಥಿಕವಾಗಿ ಸಬಲರಾಗಬೇಕು. ರಾಜಕೀಯವಾಗಿ ಸಂಘಟಿತರಾದಾಗ ಮಾತ್ರ ಸಮುದಾಯ ಅಭಿವೃದ್ಧಿ ಆಗಲು ಸಾಧ್ಯವಿದೆ ಎಂದರು.ಡಿ.17ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಮಾದಿಗ ಸಮಾವೇಶಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಸೇರಿ ಯಶಸ್ವಿ ಗೊಳಿಸಬೇಕು. ಸಂಘಟನಾ ಸಹ ಪ್ರಭಾರಿ ಪೂಜಪ್ಪ ಮಾತನಾಡಿ, ಸಮಾವೇಶದ ರೂಪುರೇಷೆ, ಒಳಮೀಸಲಾತಿ ನ್ಯಾಯಾಂಗ ಹೋರಾಟದ ಬಗ್ಗೆ ಸವಿಸ್ತಾರವಾಗಿ ತಿಸಿದರು. ಸಮಾವೇಶಕ್ಕೆ ಹೆಚ್ಚಿನ ಯುವಕರು ಮತ್ತು ಮಹಿಳೆಯರನ್ನು ಕರೆ ತರಬೇಕು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ನಾಗಲಿಂಗ ಮಾಳೆಕೊಪ್ಪ ಮಾತನಾಡಿ, ಒಳಮೀಸಲಾತಿ ಇಂತದ್ದೇ ಸರ್ಕಾರ ಮಾಡಬೇಕು ಎಂದು ನಿಯಮವಿಲ್ಲ. ಒಳಮೀಸಲಾತಿ ಯಾವುದೇ ಸರ್ಕಾರ ಮಾಡಿದರೂ ನಾವು ಸ್ವಾಗತ ಮಾಡುತ್ತೇವೆ ಎಂದರು.ಗಣೇಶ್ ಹೊರತಟ್ನಾಳ ಮಾತನಾಡಿ, ಮಾದಿಗ ಸಮಾಜ ಬಹುದೊಡ್ಡ ಜನಸಂಖ್ಯೆ ಹೊಂದಿದೆ. ಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಭಾಜಪ ಅತಿ ಹೆಚ್ಚು ಒತ್ತು ನೀಡಿ, ಸಾಮಾಜಿಕ ನ್ಯಾಯ ನೀಡುವಲ್ಲಿ ಸಂಘ ಪರಿವಾರ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ನಾವೆಲ್ಲರೂ ಬೆಂಬಲವಾಗಿ ಕೈ ಜೋಡಿಸಿ ಒಗ್ಗಟ್ಟಾಗಿ ಒಂದಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಂದಾಗೋಣ ಎಂದರು.ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಹಿರಿಯ ಮುಖಂಡ, ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ, ಮಂಜುನಾಥ ಮೂಸಲಾಪುರ, ಸುಭಾಷ್ ಕನಕಗಿರಿ, ಹನುಮಂತಪ್ಪ ಡಗ್ಗಿ, ಮಹಾಲಕ್ಷ್ಮಿ ಕಂದಾರಿ, ಮೈಲಾರಪ್ಪ, ಧರ್ಮಣ್ಣ ಸುರಪುರ, ಯಲ್ಲಪ್ಪ ಕಟ್ಟಿಮನಿ, ಪರಶುರಾಮ ಕೀಡದಾಳ, ಶಿವಪ್ಪ ಮಾದಿಗ, ಮರಿಸ್ವಾಮಿ ಕುಷ್ಟಗಿ, ಗವಿಸಿದ್ದಪ್ಪ ಗಿಣಿಗೇರಿ, ಮರಿಸ್ವಾಮಿ ಬೇವೂರ್, ರಮೇಶ್ ಬೇಳೂರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.

Share this article