ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಲಕ್ಷ್ಮೀನಗರದ(ಕೆಂಗೇರಿ ಮಡ್ಡಿ) ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಚಲನಚಿತ್ರ ಮತ್ತು ಧಾರಾವಾಹಿ ನಿರ್ಮಾಪಕ ಶ್ರೀಶೈಲ ಭಜಂತ್ರಿ, ಮಹಾಲಕ್ಷ್ಮೀ ಸೊಸೈಟಿ ಕಾರ್ಯದರ್ಶಿ ಸಿದ್ದಪ್ಪ ರಾಮೋಜಿ ಮಾತನಾಡಿದರು.ಶ್ರೀಲಕ್ಷ್ಮೀ ದೇವಿ ಜಾತ್ರೆ ನೂರಾರು ಭಕ್ತರ ನಡುವೆ ಅದ್ಧೂರಿಯಿಂದ ಜರುಗಿತು. ಈಚೆಗೆ ವಡ್ಡಿನ ಲಕ್ಷ್ಮೀದೇವಿ ಜಾತ್ರೆ ನಡೆದಿತ್ತು. ಗುರುವಾರ ಕಾರ್ತಿಕೋತ್ಸವ ಮತ್ತು ಶುಕ್ರವಾರ ಜಾತ್ರೆಯಲ್ಲಿ ಕಿಚ್ಚು ಹಾಯುವ ದೃಶ್ಯ ಭಕ್ತರನ್ನು ಭಕ್ತಿಯ ಸಾಗರದಲ್ಲಿ ಮುಳುಗಿಸಿತ್ತು. ಕಬ್ಬೂರಿನ ಶ್ರೀ ಬೀರಲಿಂಗೇಶ್ವರ ದೇವರ ಭೇಟಿಯಿಂದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಬಂಡಾರದ ಮಳೆ ಸುರಿದಂತಾಯಿತು. ಸಂಜೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಮತ್ತು ಸಿನಿಪ್ರಿಯರು ವೀಕ್ಷಿಸಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಈರಪ್ಪ ದಿನ್ನಿಮನಿ, ಪಪಂ ಸದಸ್ಯ ಮುತ್ತಪ್ಪ ಸನ್ನಟ್ಟಿ, ಆಶ್ರಯ ಕಮಿಟಿ ಸದಸ್ಯ ವಿಠ್ಠಲ ಕುಳಲಿ, ಯುವ ಮುಖಂಡ ಮಹಾಲಿಂಗ ಶಿವಣಗಿ, ಪ್ರಭು ಬಂದಕ್ಕನವರ, ಮಹಾದೇವ ಸಾವಂತ, ಶ್ರೀಶೈಲ ದೊಡಮನಿ, ತಿಪ್ಪಣ್ಣ ಬಂಡಿವಡ್ಡರ, ರಾಮಣ್ಣ ಹಟ್ಟಿ, ರಾಜು ಪಾತ್ರೋಟ, ಡಾ.ಶಂಕರ ಹುಕ್ಕೇರಿ, ಸಂತೋಷ ಬರಗಿ, ರಾಮು ಬಂಡಿವಡ್ಡರ, ಸಂಗಪ್ಪ ಪಟ್ಟಣಕೋಡಿ, ಚೆನ್ನಪ್ಪ ಬಳಗಾರ, ಚೇರಮನ್ ಜತ್ತಿ, ಪರಶುರಾಮ ಅಮರಾವತಿ, ನಾಗಲಿಂಗ ಬಡಿಗೇರ, ಕಾಡು ನಾವಿ, ಕಿರಣ ಶಿರೋಳ ಸೇರಿದಂತೆ ಲಕ್ಷ್ಮೀದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಮತ್ತು ನೂರಾರು ಸದ್ಭಕ್ತರು ಭಾಗಿಯಾಗಿದ್ದರು. ಉಪನ್ಯಾಸಕ ನಾರಣಗೌಡ ಉತ್ತಂಗಿ ನಿರೂಪಿಸಿ, ವಂದಿಸಿದರು.