ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳ ಜ್ಞಾನದ ಹಸಿವು ತಣಿಸುವ ನಿಸ್ವಾರ್ಥ ಸಂಸ್ಥೆಗಳ ಬಲು ಅವಶ್ಯವಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಹೇಳಿದರು.ಸಮೀಪದ ಹೊನ್ನೇನಹಳ್ಳಿ ಹಾಗೂ ಆಲೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಚಂದಾಪುರದ ರಾಜಲಾಂಛನಯುಕ್ತಿ ಸಂಸ್ಥಾನ ಏರ್ಪಡಿಸಿದ್ದ ಶಾಲೆಗೆ ಪ್ರಿಂಟರ್ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಶಾಲಾ ಬ್ಯಾಗ್ ಮತ್ತಿತರ ಪಠ್ಯೋಪಕರಣ ಸಾಮಗ್ರಿ ವಿತರಿಸಿ ಮಾತನಾಡಿದರು.
ದಾನದಲ್ಲಿ ಶ್ರೇಷ್ಟವಾದ ವಿದ್ಯಾದಾನಕ್ಕೆ ನೆರವು ಅವಶ್ಯಕ. ಸರ್ಕಾರಿ ಶಾಲೆ ಬಲವರ್ಧನೆ ಜತೆ ಶಾಲೆ ಮಕ್ಕಳಿಗೆ ಜ್ಞಾನಕ್ಕೆಉತ್ತೇಜನ ನೀಡುವುದು ಸತ್ಕಾಯ. ಸರ್ಕಾರಿ ಶಾಲೆ ಉಳಿದರೆ ದುರ್ಬಲ ಸಮುದಾಯದ ಮಕ್ಕಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.ಗ್ರಾಮೀಣ ಪ್ರದೇಶದ ಇಲ್ಲಿನ 150 ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿ ವಿತರಣೆ, ಶಾಲೆಗೆ ಅಗತ್ಯವಾದ ಪ್ರಿಂಟರ್ ನೀಡಿ ಸಂಸ್ಥೆ ಮಾದರಿಯಾಗಿದೆ. ಶಿಕ್ಷಣ, ಪರಿಸರ, ಅರಿವುಧ್ಯೇಯಒತ್ತುಕೊಂಡು ಸಂಸ್ಥೆ ರಾಜ್ಯಾದ್ಯಂತ ಅವಿರತವಾಗಿ ದುಡಿಯುವಂತೆ ಇತರೆ ಸಂಸ್ಥೆಗಳು ಮಾದರಿಯಾಗಬೇಕಿದೆ ಎಂದು ಆಶಿಸಿದರು.
ಸಂಸ್ಥೆ ಉಪಾಧ್ಯಕ್ಷ ಹೊನ್ನೇನಹಳ್ಳಿ ಶೇಖರ್ ಮಾತನಾಡಿ, ಪೊಲೀಸ್ ಇಲಾಖೆಯ ಎಸಿಪಿ ರಾಜೇಶ್ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಗತ್ಯ ಸೇವೆ ಮಾಡಲಾಗುತ್ತಿದೆ. ಆರೋಗ್ಯಕರ ಸಮಾಜಕ್ಕಾಗಿ 3 ಸಾವಿರಕ್ಕೂ ಹೆಚ್ಚು ವಿವಿಧಜಾತಿಯ ಹಣ್ಣು, ಹೂವಿನ ಗಿಡ ನೆಟ್ಟು ಪ್ರಾಣಿ, ಪಕ್ಷಿ, ಜೀವಸಂಕುಲಕ್ಕೆ ಹಸಿರುಮನೆ ಆಸರೆಯಾಗಿದೆ. ಪರಿಸರ, ಶಿಕ್ಷಣ ಹಾಗೂ ಅರಿವು ನಮ್ಮ ಸಂಸ್ಥೆಯ ಮುಖ್ಯಧ್ಯೇಯವಾಗಿದೆ ಎಂದು ಮಾಹಿತಿ ನೀಡಿದರು.ಮಕ್ಕಳು ವಿವಿಧ ಸಾಂಸ್ಕೃತಿಕಕಾರ್ಯಕ್ರಮ ಪ್ರದರ್ಶಿಸಿದರು. ಮಕ್ಕಳಿಗೆ ಸಿಹಿ ತಿನಿಸು ವಿತರಿಸಲಾಯಿತು.
ಆಲೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ತುಳಸಿರಾಮ್, ವಕೀಲರ ಸಂಘದ ಕಾರ್ಯದರ್ಶಿ ಮಂಜೇಗೌಡ, ರಾಜಲಾಂಛನ ಸಂಸ್ಥೆ ಕಾರ್ಯದರ್ಶಿ ಭಾರತಿ, ಸದಸ್ಯರಾದ ವಿದ್ಯಾ, ಅಡವಪ್ಪ, ಪಶು ವೈದ್ಯಕೀಯ ಇಲಾಖೆ ಹೆಚ್.ಎನ್.ರಾಮಚಂದ್ರ, ನಿವೃತ್ತ ಶಿಕ್ಷಕರಾದ ದೊಡ್ಡೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ಶಿಕ್ಷಣ ಸಂಯೋಜಕಜಯರಾಂ, ಶಿಕ್ಷಕರಾದ ರಾಜಣ್ಣ, ಸಂತೋಷ ಇದ್ದರು.