ಕೂಡ್ಲಿಗಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಾನಾಮಡುಗು ದಾಸೊಹ ಮಠದ ಧರ್ಮಾಧಿಕಾರಿ ದಾ.ಮ. ಐಮುಡಿ ಶರಣಾರ್ಯರು ತಿಳಿಸಿದರು.
ಲೇಖಕ ಪತ್ರಕರ್ತ ಭೀಮಣ್ಣ ಗಜಾಪುರ ಮಾತನಾಡಿ, ನಿತ್ಯವೂ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪೂರಕ ಜ್ಞಾನ ಸಿಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಪತ್ರಿಕೆಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ಕೇವಲ ವಿಷಯಾಧಾರಿತ ಪುಸಕ್ತ ಅಧ್ಯಯನ ಮಾಡುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಸಹ ನಿಗದಿಪಡಿಸಿ ಪಾಠ ಪ್ರವಚನ ಮಾತ್ರ ಮಾಡುತ್ತಾರೆ. ಆದರೆ, ಪತ್ರಿಕೆಗಳು ನಿತ್ಯವೂ ಪ್ರಮುಖ ಘಟನೆ, ಸಾಮಾನ್ಯ ಜ್ಞಾನ ನೀಡುತ್ತವೆ. ಅವುಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಮತ್ತು ವಾರ್ಷಿಕ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಚಾರ್ಯ ಎಲ್.ಪಿ. ಸುಭಾ಼ಷಚಂದ್ರ, ಶ್ರೀ ಶರಣಬಸವೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಬೊಮ್ಮಣ್ಣ, ಪತ್ರಕರ್ತರಾದ ಹೂಡೇಂ ಕೃಷ್ಣಮೂರ್ತಿ, ಬಿ. ನಾಗರಾಜ, ಭೀಮಸಮುದ್ರ ರಂಗನಾಥ, ದಯಾನಂದ್ ಸಜ್ಜನ್, ಅಜೇಯ್, ಶಿಕ್ಷಕರಾದ ಆನಂದ ಪಾಟೀಲ್, ವಿರುಪಾಕ್ಷಪ್ಪ, ವಾಣಿ, ಶರತ್, ಸಿಬ್ಬಂದಿ ರುದ್ರೇಶ್, ಐಟಿಐ ಕಾಲೇಜಿನ ಪ್ರಾಚಾರ್ಯ ವಿರುಪಾಕ್ಷಪ್ಪ, ಸುಭಾಷ್ಚಂದ್ರ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಸಂತೋಷ ನಿರೂಪಿಸಿದರು. ಭದ್ರಪ್ಪ ಸ್ವಾಗತಿಸಿದರು.