ಮಕ್ಕಳಿಗೆ ಬರಲಿ ಶರಣ-ಶರಣೆಯರ ನಡೆ, ನುಡಿ

KannadaprabhaNewsNetwork |  
Published : Oct 08, 2025, 01:01 AM IST
7ಡಿಡಬ್ಲೂಡಿ9ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಂಗ ಸಾಮ್ರಾಟ ಸಾಂಸ್ಕೃತಿಕ  ಶಿಕ್ಷಣ ಕ್ರೀಡಾ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಸಮಾರಂಭ ಉದ್ಘಾಟನೆ.  | Kannada Prabha

ಸಾರಾಂಶ

ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು, ಪಾಲಕರು ಹಾಗೂ ಸಮಾಜದ ಪಾತ್ರ ದೊಡ್ಡದು. ಮಕ್ಕಳ ನಾಳಿನ ಉತ್ತಮ ಭವಿಷ್ಯಕ್ಕಾಗಿ ಬಾಲ್ಯದಿಂದಲೇ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಬೆಳೆಸಬೇಕು.

ಧಾರವಾಡ:

ದೇಶದ ಉಜ್ವಲ ಭವಿಷ್ಯ ಮಕ್ಕಳ ಮೇಲಿದ್ದು ಅವರೇ ದೇಶದ ನಿಜವಾದ ಸಂಪತ್ತು. ಪಾಲಕರು ಮಕ್ಕಳಿಗೆ ಶರಣ-ಶರಣೆಯರ ನಡೆ-ನುಡಿ ಪರಿಪಾಲಿಸುವಂತೆ ಪ್ರೋತ್ಸಾಹಿಸಬೇಕು. ಆಗಲೇ ಅವರು ಸಂಸ್ಕಾರಯುತವಾಗಿ ಬೆಳೆಯಲು ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ. ಎಚ್. ನಾಯಕ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಂಗ ಸಾಮ್ರಾಟ್‌ ಸಾಂಸ್ಕೃತಿಕ ಶಿಕ್ಷಣ ಕ್ರೀಡಾ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಬಾಲ ಬಸವ ಪ್ರಶಸ್ತಿ 2025 ಉದ್ಘಾಟಿಸಿದ ಅವರು, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು, ಪಾಲಕರು ಹಾಗೂ ಸಮಾಜದ ಪಾತ್ರ ದೊಡ್ಡದು. ಮಕ್ಕಳ ನಾಳಿನ ಉತ್ತಮ ಭವಿಷ್ಯಕ್ಕಾಗಿ ಬಾಲ್ಯದಿಂದಲೇ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಬೆಳೆಸಬೇಕು. ಮಕ್ಕಳು ಶರಣ ಸಂಸ್ಕೃತಿಯ ಬಗ್ಗೆ ಮಹತ್ತರವಾದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಮಾಡಿದಾಗ ಅವರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯ ಎಂದರು.

ರಂಗ ಸಾಮ್ರಾಟ್‌ ಅಭಿನಯ ಶಾಲೆ ನಿರ್ದೇಶಕ ಸಿಕಂದರ ದಂಡಿನ ಮಾತನಾಡಿ, ಕಳೆದ ಹತ್ತು ವರ್ಷದಿಂದ ಮಕ್ಕಳ ಮನೋವಿಕಾಸಕ್ಕಾಗಿ ಪೂರಕವಾದ ಕಾರ್ಯಕ್ರಮ ಮಾಡುತ್ತಿದೆ. ಮಕ್ಕಳ ಮನಸ್ಸು ಹಸಿಗೋಡೆಯಂತೆ ಇದ್ದು ಅವರಲ್ಲಿ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರ ಬಿತ್ತಿದರೆ ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವೀರಣ್ಣ ಒಡ್ಡೀನ ಮಾತನಾಡಿದರು. ಬಾಲಬಸವ ಪ್ರಶಸ್ತಿಯನ್ನು ಅಯನ ಪಿ., ಆಶ್ನಲೇನ ಪಿರೇರಾ, ಪ್ರಣವ ಸತ್ಯಂಪೇಟೆ, ಕೃಷ್ನಂ ಬದಿ, ಆರುಷಿ ಜವಳಿ, ವಿಧಿತ್ ಬ್ಯಾಡಗಿ, ಆಕರ್ಷ ಜಿ, ಶ್ರೀನಿಧಿ ಜಕ್ಕಣ್ಣವರ, ಸಹನಾ ಯಡ್ರಾವಿ, ಲತೀಕಾ ಯರಗಟ್ಟಿ, ಅಂಜಲಿ ಚಕ್ರಸಾಲಿ, ಪೂರ್ವಿ ಹಲಗಿ, ಶ್ರೀನಿಧಿ ಗಾಣಿಗೇರ, ಚಿರಂತನರಾಜ ಬಾಸುರ್, ಶಿವಕುಮಾರ ನರಗುಂದ, ಶ್ರೀವತ್ಸ ಸೋಮನಖೋಟ್, ಆರಾಧ್ಯ ಪಾಟೀಲ, ವಿಭಾ ನಾಯಕ, ಶ್ರೀಕಾ ನಾಯಕ ಅವರಿಗೆ ಬಾಲ ಬಸವಾ ಪ್ರಶಸ್ತಿ ನೀಡಲಾಯಿತು.

ಆನಂತರದಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ ಕ್ರೀಡಾಪಟು ಪ್ರಮೋದಗೌಡ ದ್ಯಾಪುರಗೆ ರಂಗ ಸಾಮ್ರಾಟ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರುತಿ ಹುರಳಿಕೊಪ್ಪ ಸ್ವಾಗತಿಸಿದರು. ವಿ.ಎನ್. ಕೀರ್ತಿವತಿ ನಿರೂಪಿಸಿದರು. ಚಿದಾನಂದ ಭಜಂತ್ರಿ ವಂದಿಸಿದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ