ಕನ್ನಡಪ್ರಭ ವಾರ್ತೆ ಸುರಪುರಘನತಾಜ್ಯ ನಿರ್ವಹಣೆ ಮಾಡುವ ನಗರಸಭೆಯೊಂದಿಗೆ ಸಮುದಾಯ ಕೈಜೋಡಿಸಿದಾಗ ಮಾತ್ರ ಸರ್ಮಕವಾಗಿ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಕಾನೂನು ಸೇವಾ ಸಮೀತಿ ಸದಸ್ಯ ಕಾರ್ಯದರ್ಶಿಯಾದ ನ್ಯಾ.ಮಾರುತಿ.ಕೆ. ಹೇಳಿದರು.
ಮಹಾನಗರಗಳಲ್ಲಿ ದಿನಕ್ಕೆ 11 ರಿಂದ 16 ಟನ್ ಕಸ ಉತ್ಪತ್ತಿಯಾದರೆ, ಸುರಪುರದಲ್ಲಿ ದಿನಕ್ಕೆ 2 ರಿಂದ 3 ಟನ್ ಕಸ ಉತ್ಪತ್ತಿಯಾಗಿತ್ತಿದೆ. ತಂಬಾಕು ಸೇವೆನೆಯಿಂದ 6 ಲಕ್ಷ ಬಿಲಿಯನ್ ಜನ ಮರಣಹೊಂದುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮತ್ತು ಗುಟ್ಕಾ ಸೇವಿಸಿದರೆ ಕೋಟ್ಪಾದಡಿ ದಂಡ ವಿಧಿಸಬೇಕು ಎಂದು ತಿಳಿಸಿದರು.
ವಡಗೇರಿಯ ದಂತ ವೈದ್ಯೆ ಡಾ. ಭವಾನಿ ಮಾತನಾಡಿ, ವಿಶ್ವದಲ್ಲಿ 138 ಕೋಟಿ ಧೂಮಪಾನ ಮಾಡುವರ ಸಂಖ್ಯೆ ಕಂಡುಬಂದಿದೆ. ಭಾರತದಲ್ಲಿ 28.7 ಕೋಟಿ ಜನ ಸಿಗರೇಟ್ ಸೇದುತ್ತಾರೆ. ಧೂಮಪಾನದಿಂದ ಪ್ರತಿ ಸೆಕೆಂಡಿಗೆ 6 ಜನ ಸಾವನ್ನಪ್ಪುತ್ತಿದ್ದಾರೆ ಎಂಬ ವರದಿ ತಿಳಿದುಬಂದಿದೆ. ದೂಮಪಾನ ಮಾಡುವುದರಿಂದ ರಕ್ತನಾಳ ಹಾಗೂ ರಕ್ತ ಕಣಗಳು ಹೆಪ್ಪುಗಟ್ಟಿ, ಹೃದಯಾಘಾತ, ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ಆರೋಗ್ಯಕರ ಜೀವನಕ್ಕೆ ತಂಬಾಕು ಸೇವನೆ ತ್ಯಜಿಸಬೇಕು ಎಂದು ಕರೆ ನೀಡಿದರು.ಇದೇ ವೇಳೆ ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಪರಿಸರ ಅಭಿಯಂತರ ಹರೀಶ ಸಜ್ಜನ್ ಮಾತನಾಡಿದರು.
ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ದಂತ ವೈದ್ಯ ಡಾ. ಹರ್ಷವರ್ಧನ್, ಸಹಾಯಕ ಸರಕಾರಿ ಅಭಿಯೋಜಕ ಮರೆಪ್ಪ ಹೊಸಮನಿ, ಸುರೇಶ ಪಾಟೀಲ್, ವಕೀಲರಾದ ನಂದಕುಮಾರ ಪಿ. ಕನ್ನಳ್ಳಿ, ಎಂ.ಟಿ.ಮಂಗಿಹಾಳ, ಯಲ್ಲಪ್ಪ ಹುಲಿಕಲ್, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ, ಆರೋಗ್ಯ ನಿರೀಕ್ಷಕ ಹಣಮಂತ ಯಾದವ, ಕಂದಾಯ ನಿರೀಕ್ಷಕ ಸಲೀಮ್ ಮಾಲಿಕ್, ಕಂದಾಯ ಅಧಿಕಾರಿ ವೆಂಕಟೇಶ ಸೇರಿ ಇತರರಿದ್ದರು.