ರಕ್ಷಣಾ ಶಿಬಿರ ನೌಕರರಿಗೆ ನ್ಯಾಯಯುತ ವೇತನ ಸಿಗಲಿ

KannadaprabhaNewsNetwork |  
Published : Jul 31, 2025, 12:46 AM IST
29ಸಿಎಚ್‌ಎನ್52ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ  ನೌಕರರ ಸಂಘದ ವತಿಯಿಂದ ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಆವರಣದಲ್ಲಿ ಪೂರ್ವಬಾವಿ ಸಭೆಯನ್ನು ನಡೆಸಲಾಯಿತು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು

ಕನ್ನಡಪ್ರಭ ವಾರ್ತೆ, ಹನೂರು

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಹೊರಗುತ್ತಿಗೆ ನೌಕರರು ಮಾತನಾಡಿ, ಅರಣ್ಯ ಇಲಾಖೆಯಲ್ಲಿ ದೀರ್ಘ ಕಾಲದ ಸೇವೆಗೆ ನ್ಯಾಯ ಸಮ್ಮತವಾದ ಸೇವಾ ಭದ್ರತೆ ವೇತನ ಯಾವುದು ಸರಿಯಾಗಿ ಸಿಗುತ್ತಿಲ್ಲ. ದಿನದ 24 ಗಂಟೆ ರಕ್ಷಣಾ ಶಿಬಿರಗಳಲ್ಲಿ ಕೆಲಸ ಮಾಡುವ ನೌಕರರಿಗೆ ನ್ಯಾಯಯುತವಾದ ವೇತನ ಸಿಗಬೇಕು, 24 ಗಂಟೆ ಕೆಲಸ ಮಾಡುವ ನೌಕರರಿಗೆ 8 ಗಂಟೆಯ ಸಂಬಳ ನೀಡುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಬ್ರಿಟಿಷ್ ಕಾಲಕ್ಕೂ ಮೀರಿದ ದೌರ್ಜ್ಯನ್ಯಶೋಷಣೆ ನಡೀತಿದೆ. ಸಂಘಟನೆ ವತಿಯಿಂದ ಹಲವಾರು ಸಭೆಗಳನ್ನು ಮಾಡಿದ್ದೇವೆ. ವಿರಾಜಪೇಟೆಯಲ್ಲಿ ಕಾನೂನು ಸಲಹೆಗಾರರಾದ ಪೊನ್ನಣ್ಣ ನಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದರು.ಹುಲಿ ಸಾವಿನ ನಂತರ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಮತ್ತೆ ಮೈ ಮರೆತ್ತಿದ್ದಾರೆ. ಅವರು ಯಾವಾಗ ಜಾಗೃತರಾಗಿ ಇರ್ತಾರೆ ಎಂದರೆ ನಮ್ಮ ನೌಕರರು ಎಲ್ಲ ರಕ್ಷಣಾ ಶಿಬಿರಗಳನ್ನು ಬಂದ್ ಮಾಡಿದಾಗ ಸರ್ಕಾರದ ಕಡೆ ಮುಖ ಮಾಡುವುದು ನಮ್ಮ ಹಕ್ಕ್ಕುಗಳನ್ನು ಪಡೆಯುವುದು ಇಂದಿನ ಸಭೆಯ ಉದ್ದೇಶ. ಆಗಸ್ಟ್ ಅಧಿವೇಶನದ ವೇಳೆ ಎಲ್ಲಾ ನೌಕರರು ಒಂದು ದಿನಾಂಕ ನಿಗದಿ ಮಾಡಿ ನೌಕರರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ದಿನಾಂಕವನ್ನು ತಿಳಿಸುತ್ತೇವೆ ಎಂದರು. ವನ್ಯ ಜೀವಿ ಘಟಕ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಗೌರವಾಧ್ಯಕ್ಷ ನಾಗರಾಜ್‌ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಶೇಕಡಾ 50 ರಷ್ಟು ಮಾತ್ರ ಖಾಯಂ ಅಧಿಕಾರಿಗಳು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಪಾರದರ್ಶಕತೆಯಿಂದ ಪ್ರಾಣಿ-ಪಕ್ಷಿಗಳ ಹಾಗೂ ಪ್ರಕೃತಿಯನ್ನು ಕಾಯುವ ಕೆಲಸವನ್ನು ಮಾಡ್ತಾ ಇರೋದು ಇನ್ನು 50ರಷ್ಟು ಅಧಿಕಾರಿಗಳು ಸಂಘರ್ಷ ಹೆಚ್ಚು ಇರುವ ಜಾಗಗಳಿಗೆ ದೊಡ್ಡ ಅಧಿಕಾರಿಗಳು ಹತ್ತಿರ ಬೇಡಿ ವರ್ಗಾವಣೆ ಮಾಡಿಸ್ಕೊಂಡು ಬರ್ತಿದ್ದಾರೆ ಎಂದರು. 25 ವರ್ಷಗಳಿಂದ ನಡೀತಾ ಇದೆ ಚಾಮರಾಜನಗರ ಕೊಡಗು ಮಡಿಕೇರಿ ಹಾಸನ ಚಿಕ್ಕಮನಗಳು ಅವರು ಬಂದ ಮೇಲೆ ಕೆಲಸ ಮಾಡ್ತಾ ಇಲ್ಲ ವನ್ಯ ಜೀವಿಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿರುವವರು ದಿನಗೂಲಿ ನೌಕರರು ನಿಮ್ಮಿಂದ ಅವರಿಗೆ ಗೌರವ ಹೆಚ್ಚಿತ್ತಿದೆ ಆದರೆ ನಿಮಗೆ ಸರಿಯಾದ ವೇತನ ಸಿಗುತ್ತಿಲ್ಲ ಆಗಾಗಿ ಹೋರಾಟದ ಅಗತ್ಯವಿದೆ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳೋಣ ಎಂದು ಇದೇ ವೇಳೆಯಲ್ಲಿ ಮಾತನಾಡಿದರು.ವಿವಿಧ ವಲಯಗಳಿಂದ ಇಂದಿನ ಸಭೆಯಲ್ಲಿ ಭಾಗವಹಿಸಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ