ಧಾರವಾಡ: ವಿಕಲತೆ ಶಾಪವಲ್ಲ, ಅದು ವರದಾನ ಎಂದು ಭಾವಿಸಬೇಕು. ತಮ್ಮ ವಿಶೇಷ ಶಕ್ತಿಯಿಂದ ಸಾಧನೆ ಮಾಡಿ, ಮುಖ್ಯ ವಾಹಿನಿಗೆ ಬರಬೇಕು ಎಂದು ವಿರೋಧ ಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದರು.
ಸ್ವತಂತ್ರ ಹೋರಾಟಗಾರರ ಸಮೃದ್ಧ ಮತ್ತು ಸ್ವಾಭಿಮಾನಿ ರಾಷ್ಟ್ರದ ಕನಸು ನನಸು ಮಾಡಲು ದಿವ್ಯಾಂಗರಿಗೆ ಸಾಕಷ್ಟು ಸೌಲಭ್ಯ ಹಾಗೂ ಯೋಜನೆಗಳು ನೀಡಿದ್ದಾಗಿ ತಿಳಿಸಿದರು.
ದಿವ್ಯಾಂಗರು ಸಂಗೀತ, ಶಿಕ್ಷಣ, ಕ್ರೀಡೆ ಅನೇಕ ಕ್ಷೇತ್ರಗಲ್ಲಿ ಸಾಧನೆ ಮಾಡಿದ್ದಾರೆ. ಅವರಂತೆ ಸಾಧಿಸಲು ಕರೆ ನೀಡಿ, ಸಕ್ಷಮ ಜಿಲ್ಲಾ ಘಟಕದ ಕಚೇರಿ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ₹10 ಲಕ್ಷ ನೆರವು ನೀಡುವುದಾಗಿಯೂ ಭರವಸೆ ನೀಡಿದರು.ಸಕ್ಷಮ ಉತ್ತರ ಪ್ರಾಂತ ಅಧ್ಯಕ್ಷ ಎಸ್.ಬಿ. ಶೆಟ್ಟಿ, ದಿವ್ಯಾಂಗರ ಶ್ರೇಯೋಭಿವದ್ಧಿಗೆ ಉತ್ತರದ 14 ಜಿಲ್ಲೆಗಳಲ್ಲಿ ಸಕ್ಷಮ ಸಂಘಟನೆ ಸ್ಥಾಪಿಸಬೇಕಿದೆ. ಈ ಪೈಕಿ ಎಂಟು ಜಿಲ್ಲೆಗಳಲ್ಲಿ ಸಂಘಟನೆ ಇದೆ. ಇನ್ನೂ ಆರು ಜಿಲ್ಲೆಗಳಲ್ಲಿ ಸಂಘಟನೆ ಸ್ಥಾಪಿಸಬೇಕಿದೆ. ಸಂಘಟನೆಯು ದಿವ್ಯಾಂಗರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ್ಯಾಭಿವೃದ್ಧಿ ತರಬೇತಿ, ಅಂಧತ್ವ ನಿವಾರಣೆಗೆ ಜಾಗೃತಿ ಜಾಥಾ, ರಕ್ತದಾನ ಶಿಬಿರ, ದಾನಿಗಳ ಸಹಕಾರದಿಂದ ಶಿಕ್ಷಣಕ್ಕೆ ಧನಸಹಾಯ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಇಟಲಿ ಮನಸ್ಥಿತಿಯವರಿಂದ ರಾಮನ ಬಗ್ಗೆ ಅಪೇಕ್ಷೆ ಅಸಾಧ್ಯಧಾರವಾಡ: ಕಾಂಗ್ರೆಸ್ ಮುಖಂಡರ ಮನಸ್ಥಿತಿ ಇಟಲಿಯದ್ದು. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದರು.ಇಟಲಿಯ ಕ್ಯಾಥೊಲಿಕ್ ಮೂಲದ ಅಧ್ಯಕ್ಷರನ್ನು ಕಾಂಗ್ರೆಸ್ ಸಾಕುತ್ತಿದೆ. ರಾಹುಲ್ ಮತ್ತು ಸೋನಿಯಾ ಗಾಂಧಿ ರೀತಿಯಲ್ಲಿಯೇ ಕಾಂಗ್ರೆಸ್ ಮುಖಂಡರ ಮನಸ್ಥಿತಿ ಬೆಳೆದಿದ್ದು, ಅವರನ್ನು ಮೆಚ್ಚಿಸಲು ರಾಮ ಮಂದಿರದ ಬಗ್ಗೆ ಕೆಟ್ಟ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ ರಾಮ ಕಾಲ್ಪನಿಕ ಎಂದರು. ರಾಮಸೇತು ತೆಗೆಯಬೇಕು ಎಂದರು. ರಾಮ ಹುಟ್ಟಿದ ನೆಲದಲ್ಲಿ ರಾಮ ಏಕೆ ಬೇಕು ಎಂದಿದ್ದರು. ಈಗ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರದ್ದು ಹಿಂದೂ ವಿರೋಧಿ ಅಜೆಂಡಾ ಎಂದು ಬೆಲ್ಲದ ಟೀಕಿಸಿದರು.