ಬ್ರಹ್ಮಾವರ : ಇಲ್ಲಿನ ಬ್ರಹ್ಮಾವರದ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.ಚಾಂತಾರು ಗ್ರಾಪಂನ ಮಾಜಿ ಅಧ್ಯಕ್ಷೆ, ಬಾರ್ಕೂರು ಅನ್ನಪೂರ್ಣೇಶ್ವರಿ ದೇವಸ್ಥಾನದ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಒಂದು ತಿಂಗಳಲ್ಲಿ ಇಷ್ಟೊಂದು ವಿಚಾರಗಳನ್ನು ಕಲಿತಿದ್ದೀರಿ, ಇಸ್ಟೊಂದು ಡಿಸೈನ್ ಗಳನ್ನು ಕಲಿತೀರಿ ಅನ್ನುವುದನ್ನು ನೀವು ಅಂದುಕೊಳ್ಳದೇ ಇರುವುದನ್ನು ಮಾಡಿ ತೋರಿಸಿದ್ದೀರಿ. ಹಾಗಾದ್ರೆ ತಮ್ಮಲ್ಲಿ ಪ್ರತಿಯೊಬರಲ್ಲಿನ ಸಾಮರ್ಥ್ಯವನ್ನು ಈಗ ಅವಲೋಕನ ಮಾಡಿಕೊಳ್ಳಿ, ಅದೇ ಸಾಮರ್ಥ್ಯವನ್ನು ಮುಂದಿನ ಜವಾಬ್ದಾರಿ ಯುತವಾಗಿ ನಿಮ್ಮ ಕನಸು ನನಸಾಗಿಸಲು ಪ್ರಯತ್ನವನ್ನು ತಪ್ಪದೆ ಮಾಡಿ ಎಂದರು. ತರಬೇತಿಯ ಸಂದರ್ಭದಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಇತರರೊಂದಿಗೆ ಹಂಚಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.ಸಂಸ್ಥೆಯ ಉಪನ್ಯಾಸಕಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.