ಪುಟ್ಟರಾಜರ ಭಾವೈಕ್ಯತಾ ಹೆಬ್ಬಾಗಿಲು ಶೀಘ್ರ ನಿರ್ಮಾಣಗೊಳ್ಳಲಿ

KannadaprabhaNewsNetwork |  
Published : Sep 15, 2024, 01:45 AM IST
ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಕರ್ನಾಟಕದ ಕಾಶ್ಮೀರ ಎಂದೇ ಹೆಸರಾದ ಗದಗ ಜಿಲ್ಲೆಯ ಕಪ್ಪತ್ತಗುಡ್ಡ, ಸಮನ್ವಯ ಸಾಧಕರು, ಭಾವೈಕ್ಯತಾ ಮಠವಾದ ಶಿರಹಟ್ಟಿ ಫಕೀರಶ್ವರಮಠ

ಗದಗ: ಸಂಗೀತ ಹಾಗೂ ಭಾವೈಕ್ಯತೆ ತಮ್ಮ ಉಸಿರಾಗಿಸಿಕೊಂಡಿದ್ದ ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಹೆಸರಿನಲ್ಲಿ ನಾಗಾವಿ ಕ್ರಾಸ್‌ನಲ್ಲಿ ಭಾವೈಕ್ಯತಾ ಹೆಬ್ಬಾಗಿಲನ್ನು ಶೀಘ್ರದಲ್ಲೇ ನಿರ್ಮಾಣ ಮಾಡಬೇಕೆಂದು ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಹೇಳಿದರು.

ಅವರು ಗದಗ-ಲಕ್ಷ್ಮೇಶ್ವರ ಮಾರ್ಗದ ನಾಗಾವಿ ಕ್ರಾಸ್‌ನ ಶಿವಯೋಗಿ ಶ್ರೀಗುರು ಪುಟ್ಟರಾಜ ಸರ್ಕಲ್ ಹತ್ತಿರದ ವಿಮಲ್ ಲೇಔಟ್‌ನಲ್ಲಿ ಸೋಮೇಶ ಹಿರೇಮಠ ಪ್ರತಿಷ್ಠಾನ ನಾಗಾವಿ ಹಾಗೂ ಸರ್ವ ಸದ್ಭಕ್ತರಿಂದ ಜರುಗಿದ ಲಿಂ. ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದ ಕಾಶ್ಮೀರ ಎಂದೇ ಹೆಸರಾದ ಗದಗ ಜಿಲ್ಲೆಯ ಕಪ್ಪತ್ತಗುಡ್ಡ, ಸಮನ್ವಯ ಸಾಧಕರು, ಭಾವೈಕ್ಯತಾ ಮಠವಾದ ಶಿರಹಟ್ಟಿ ಫಕೀರಶ್ವರಮಠ, ಮಹಾನ್ ಸಂತರು ನೆಲೆಸಿದ್ದ ವರವಿ ಮೌನೇಶ್ವರಮಠ, ಶಿವಾಜಿ ಮಹಾರಾಜರಿಗೆ ಖಡ್ಗ ನೀಡಿದ ಇತಿಹಾಸವುಳ್ಳ ಹೊಳಲಮ್ಮದೇವಿ ದೇವಸ್ಥಾನ, ಕೋಟಿ ಕೋಟಿ ಜನ ಸೇರುವ ಮೈಲಾರಲಿಂಗೇಶ್ವರ ದೇವಸ್ಥಾನ, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಗಾಂಧೀಜಿ ಸಬರಮತಿ ಆಶ್ರಮ, ಸುಕ್ಷೇತ್ರ ನಾಗಾವಿ ರೇಣುಕಾದೇವಿ ದೇವಸ್ಥಾನ, ನಾಗಾರ್ಜುನ, ಕನ್ನೂರ ಬಸವಣ್ಣ, ಮಹಾಬಲೇಶ್ವರ ದೇವಸ್ಥಾನ, ಜಲಶಂಕರ, ನಾಗದೇವತಾ ದೇವಾಲಯ, ಬೆಳದಡಿಯ ಶ್ರೀರಾಮ ಮಂದಿರ, ಸೊರಟೂರ ಕಾಲಭೈರವ ದೇವಸ್ಥಾನಗಳಿಗೆ ಹೋಗುವ ಯಾತ್ರಿಕರಿಗೆ ನಾಗಾವಿಯ ಕ್ರಾಸ್ ಹೆಬ್ಬಾಗಿಲು ಆಗಿರುವುದರಿಂದ ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಇಲ್ಲಿ ಭಾವೈಕ್ಯತಾ ಹೆಬ್ಬಾಗಿಲು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ನಾಗಾವಿ ಗ್ರಾಮದ ಗಂಗಾಧರೇಶ್ವರ ಮಠದ ಪೀಠಾಧಿಪತಿ ಶ್ರೀಮೃತ್ಯುಂಜಯ ಸ್ವಾಮಿಗಳು ಹಿರೇಮಠ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ, ಗ್ರಾಪಂ ಸದಸ್ಯರಾದ ಉಳವಪ್ಪ ಶಿಗ್ಲಿ, ಅಲ್ಲಾಸಾಬ್‌ ಪೀರಖಾನವರ, ಅಲ್ತಾಫ್ ಕಾಗದಗಾರ, ತಾಪಂ ಮಾಜಿ ಸದಸ್ಯ ಮೈಲಾರಪ್ಪ ತಾಮರಗುಂಡಿ, ಯಲ್ಲಪ್ಪ ಹಡಗಲಿ, ಶಿವಾನಂದ ಶಿಗ್ಲಿ, ತೋಟಯ್ಯ ಮುತ್ತಿನಪೆಂಡಿಮಠ, ನಾಗೇಶ ಕಮತರ, ಉಳವಪ್ಪ ಮಡಿವಾಳರ, ಫಕೀರಸಾಬ್ ಕಾರಡಗಿ, ಸುನೀಲ ಕುಲಕರ್ಣಿ, ಪ್ರಭುಗೌಡ ಪಾಟೀಲ, ಕಿರಣಗೌಡ ಪಾಟೀಲ, ಕುಮಾರಗೌಡ ಪಾಟೀಲ, ರಾಜಶೇಖರಯ್ಯ ನಮಸ್ತೆಮಠ, ಸಂತೋಷ ಮಡಿವಾಳರ, ಮಹಾಂತೇಶ ಹಾದಿಮನಿ, ನಾಗಪ್ಪ ಕೆಂಚಣ್ಣವರ, ಬಸವರಾಜ ಕೆಂಚಣ್ಣವರ, ಹನುಮಂತಪ್ಪ ಅಸುಂಡಿ, ಧೀರಜ್ ನಂದಿಕೋಲಮಠ, ಬಸವರಾಜ ಕುರಿ, ರಮೇಶ ಗೋಲಪ್ಪನವರ, ಶರಣಪ್ಪ ಬಳಾರದ, ರವಿ ಮರಡ್ಡಿ, ಶಿವಾನಂದ ಹವಳೆಪ್ಪನವರ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ