ಜಿಲ್ಲೆಯಲ್ಲಿ ಔದ್ಯೋಗೀಕರಣ ಯುಗ ಆರಂಭವಾಗಲಿ: ಎಸ್.ಜಿ.ನಂಜಯ್ಯನಮಠ

KannadaprabhaNewsNetwork |  
Published : Feb 17, 2025, 12:32 AM IST
ಬಾಗಲಕೋಟೆ ನಗರದ ಪ್ರೆಸ್ಕ್ಲಬ್ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಇನ್ವೆಸ್ಟ್ ಕರ್ನಾಟಕ ಆಯೋಜಿಸಿ ಸರ್ಕಾರ ಕೈಗಾರಿಕೆ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಮುಳಗಡೆಯಾಗಿರುವ ಬಾಗಲಕೋಟೆ ಜಿಲ್ಲೆಗೂ ಔದ್ಯೋಗೀಕರಣ ಯುಗ ಆರಂಭವಾಗಬೇಕು. ಇದಕ್ಕೆ ಉದ್ಯಮಗಳು ನಮ್ಮ ಭಾಗದತ್ತ ಗಮನ ಹರಿಸಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ಕನ್ನಡಪ್ರಭ ವಾತೆ ಬಾಗಲಕೋಟೆ

ಇನ್ವೇಸ್ಟ್ ಕರ್ನಾಟಕ ಆಯೋಜಿಸಿ ಸರ್ಕಾರ ಕೈಗಾರಿಕೆ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಮುಳಗಡೆಯಾಗಿರುವ ಬಾಗಲಕೋಟೆ ಜಿಲ್ಲೆಗೂ ಔದ್ಯೋಗೀಕರಣ ಯುಗ ಆರಂಭವಾಗಬೇಕು. ಇದಕ್ಕೆ ಉದ್ಯಮಗಳು ನಮ್ಮ ಭಾಗದತ್ತ ಗಮನ ಹರಿಸಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹11 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದೆ. ಈ ಹಿಂದೆ ನೀರಾವರಿ ಸಚಿವರಾಗಿದ್ದಗ ಹಸಿರು ಕ್ರಾಂತಿ ಮಾಡಿರುವ ಎಂ.ಬಿ.ಪಾಟೀಲ ಈಗ ಕೈಗಾರಿಕೆ ಸಚಿವರಾಗಿದ್ದು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ದಿಟ್ಟ ಹೆಜ್ಜೆ ಇಡಬೇಕು ಎಂದವರು ಆಗ್ರಹಿಸಿದರು.

ಜನರ ಈ ಕನಸನ್ನು ಕಾರ್ಯರೂಪಕ್ಕೆ ತರಲು ಸಚಿವ ಎಂ.ಬಿ. ಪಾಟೀಲರು ತಮ್ಮದೆ ಆದ ಯೋಜನೆ ರೂಪಿಸಬೇಕು. ಅಂತಹ ಸಾಮರ್ಥ್ಯ ಅವರಲ್ಲಿದೆ. ವಿಜಯಪುರ-ಬಾಗಲಕೋಟೆ ಮಧ್ಯೆ ಸಾಕಷ್ಟು ಬರಡು ಭೂಮಿ ಇದ್ದು, ಅಂತಹ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಆಗಬೇಕು. ಆ ಮೂಲಕ ನಿರುದ್ಯೋಗ ನಿವಾರಣೆಯಾಗಬೇಕು ಎಂದು ಹೇಳಿದರು.

ಬಾಗಲಕೋಟೆ ಮುಳುಗಡೆ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿದೆ. ಅದನ್ನು ಕಳಚುವ ನಿಟ್ಟಿನಲ್ಲಿ ಬಲವಾದ ಪ್ರಯತ್ನ ಮಾಡಬೇಕಿದೆ. ಕೋಲ್ಡ್ ಸ್ಟೋರೇಜ್ ಘಟಕ ಸೇರಿದಂತೆ ಸಣ್ಣ ಉದ್ದಿಮೆಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಗಳು ಇಲ್ಲಿ ಸ್ಥಾಪನೆ ಆಗಬೇಕು. ಉದ್ಯಮ ಸ್ಥಾಪನೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದ್ದು, ಅವರಿಗೆ ಸರ್ಕಾರ ಕೆಲ ರಿಯಾಯಿತಿ ನೀಡಿ ಆಕರ್ಷಣೆ ಮಾಡಬೇಕು. ಆ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ನಿವಾರಣೆಯಾಗಲು ಶ್ರಮಿಸಬೇಕು. ಔದ್ಯೋಗೀಕರಣ ಬೆಳೆದಾಗ ಸಹಜವಾಗಿ ಜನರ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತದೆ ಎಂದು ಹೇಳಿದರು.ಮುಖಂಡರಾದ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅಧ್ಯಕ್ಷ ನಾಗರಾಜ ಹದ್ಲಿ, ಮುಖಂಡರಾದ ಶ್ರೀನಿವಾಸ ಬಳ್ಳಾರಿ, ರಾಜು ಮನ್ನಿಕೇರಿ ಇದ್ದರು.ಜಿಲ್ಲೆಯ ಮಟ್ಟಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಜ್ವಲಂತ ಸಮಸ್ಯೆಯಾಗಿದ್ದು, ಸರ್ಕಾರ ಬಜೆಟ್‌ ನಲ್ಲಿ ಸೂಕ್ತ ಅನುದಾನ ಒದಗಿಸುವ ಮೂಲಕ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಬಜೆಟ್‌ ನಲ್ಲಿ ಘೋಷಣೆ ಮಾಡಿರುವ ಸರ್ಕಾರಿ ಮೆಡಿಕಲ್ ಕಾಲೇಜು, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು. ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಬಜೆಟ್‌ ನಲ್ಲಿ ಘೋಷಿಸಿದ ಅಂಶಗಳು ಮುಂದಿನ ಬಜೆಟ್ ಒಳಗೆ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು.

- ಎಸ್.ಜಿ. ನಂಜಯ್ಯನಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ