ವಿಶ್ವಕರ್ಮ ಸಮಾಜಕ್ಕೆ ಸರ್ಕಾರ ಸೂಕ್ತ ಸೌಲಭ್ಯ ನೀಡಲಿ

KannadaprabhaNewsNetwork |  
Published : Sep 18, 2024, 01:55 AM IST
ಪೊಟೋ-ಪಟ್ಟಣದ ತಹಸೀಲ್ದಾರ ಕಚೇರಯಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಅಂಗವಾಗಿ ನಡದ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಬಡಿಗೇರ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವಕರ್ಮ ಸಮಾಜದ ಜನರು ಸ್ವಾಭಿಮಾನಿಗಳಾಗಿದ್ದು. ತಮ್ಮ ಸ್ವಂತ ದುಡಿಮೆಯಿಂದಲೆ ಜೀವನ ಸಾಗಿಸುತ್ತಿದ್ದಾರೆ

ಲಕ್ಷ್ಮೇಶ್ವರ: ವಿಶ್ವಕರ್ಮ ಸಮಾಜವು ತನ್ನದೇ ಆದ ವಿಶಿಷ್ಟತೆ ಹೊಂದಿದ ಸಮಾಜವಾಗಿದೆ. ಸರ್ಕಾರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕ ಪ್ರಾತಿನಿಧ್ಯವನ್ನು ವಿಶ್ವಕರ್ಮ ಸಮಾಜಕ್ಕೆ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕು ಎಂದು ಭಾಗ್ಯಶ್ರೀ ಬಡಿಗೇರ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ವಿಶ್ವಕರ್ಮ ದಿನಾಚರಣೆ ಅಂಗವಾಗಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ವಿಶ್ವಕರ್ಮ ಸಮಾಜವು ತುಳಿತಕ್ಕೆ ಒಳಗಾದ ಸಮಾಜವಾಗಿದ್ದು. ವಿಶ್ವಕರ್ಮ ಸಮಾಜದ ಜನರು ಸ್ವಾಭಿಮಾನಿಗಳಾಗಿದ್ದು. ತಮ್ಮ ಸ್ವಂತ ದುಡಿಮೆಯಿಂದಲೆ ಜೀವನ ಸಾಗಿಸುತ್ತಿದ್ದಾರೆ. ಕಷ್ಟಸಹಿಷ್ಣುಗಳಾದ ವಿಶ್ವಕರ್ಮ ಸಮಾಜ ಬಾಂಧವರಿಗೆ ಸರ್ಕಾರ ಸೂಕ್ತ ಸೌಲಭ್ಯ ನೀಡುತ್ತಿಲ್ಲ, ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ನಾವುಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮುಂದೆ ಬರುವಂತ ಯೋಜನೆಗಳನ್ನು ಸರ್ಕಾರ ರೂಪಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ವೇಳೆ ತಾಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ವಿಶ್ವಕರ್ಮ ಸಮಾಜದ ಜನರು ಕಷ್ಟಸಹಿಷ್ಣುಗಳಾಗಿದ್ದು. ಶ್ರಮಜೀವಿಗಳಾಗಿದ್ದಾರೆ. ಜಗತ್ತಿನ ನಿರ್ಮಾತೃಗಳು ವಿಶ್ವಕರ್ಮ ಸಮಾಜದವರಾಗಿದ್ದಾರೆ ಎನ್ನುವ ಮಾತು ಇತಿಹಾಸದಿಂದ ತಿಳಿದು ಬರುತ್ತದೆ. ನಮ್ಮ ಪರಂಪರೆಗೆ, ಕಲಾ ವೈಭವಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಮಾಜಿ ಸೈನಿಕ ಮಾನಪ್ಪ ಬಡಿಗೇರ ಅವರಿಗೆ ಭಗವಾನ್ ವಿಶ್ವಕರ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈರಣ್ಣ ಬಡಿಗೇರ, ಭಾಸ್ಕರ ಸೊರಟೂರ, ಮೋಹನ ಸುತಾರ, ಮೌನೇಶ ಬಾಲೆಹೊಸೂರ, ಗಂಗಾಧರ ಬಾಲೆಹೊಸೂರ, ದೇವರಾಜ ಬಡಿಗೇರ, ಅಶೋಕ ಸೊರಟೂರ, ರಾಘವೇಂದ್ರ ಬಡಿಗೇರ, ರವಿ ಸುತಾರ, ಪ್ರೇಮಾ ಬಡಿಗೇರ, ಅಪ್ಪಣ್ಣ ಸೊರಟೂರ, ಜಯಪ್ಪ ಬೋರಗಾಂವಕರ್, ಮನೋಹರ ಪತ್ತಾರ, ರಮೇಶ ಬಡಿಗೇರ, ಶಕುಂತಲಾ ಬಡಿಗೇರ, ವಾಸಂತಿ ಪತ್ತಾರ, ಸ್ಮೀತಾ ಪೋತ್ದಾರ್, ಸರಸ್ವತಿ ದುದ್ದಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...