ಕಲಿತ ವಿಷಯ ಜೀವನದಲ್ಲಿ ಅಳವಡಿಕೆಯಾಗಲಿ

KannadaprabhaNewsNetwork |  
Published : Nov 04, 2025, 12:30 AM IST
3ಡಿಡಬ್ಲೂಡಿ10ಕರ್ನಾಟಕ ವಿಶ್ವವಿದ್ಯಾಲಯ ಗಣಿತಶಾಸ್ತ್ರ ಅಧ್ಯಯನ ವಿಭಾಗವು ಆಯೋಜಿಸಿದ ಅಧ್ಯಾಪಕರ ಪುನಶ್ಚೇತನ ಕಾರ್ಯಾಗಾರದ ಸಮಾರೋಪದಲ್ಲಿ ಕವಿವಿ ಹಣಕಾಸು ಅಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಗಣಿತಶಾಸ್ತ್ರ ಅಧ್ಯಯನ ವಿಭಾಗವು ಆಧುನಿಕ ಸಾಫ್ಟವೇರ್ ಹಾಗೂ ಗಣಿತೀಯ ಟೂಲ್ಸ್‌ಗಳ ಪರಿಚಯಾತ್ಮಕ ಕಾರ್ಯಕ್ರಮ ಆಯೋಜಿಸಿದ್ದು ವಿಶ್ವವಿದ್ಯಾಲಯದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.

ಧಾರವಾಡ:

ವಿದ್ಯಾರ್ಥಿಗಳು ಕಲಿತ ವಿಷಯಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕವಿವಿಯ ಹಣಕಾಸು ಅಧಿಕಾರಿ ಪ್ರದೀಪಕುಮಾರ ಹೇಳಿದರು. ಕವಿವಿಯ ಗಣಿತಶಾಸ್ತ್ರ ಅಧ್ಯಯನ ವಿಭಾಗ, ಪಾವಟೆ ಇನ್ಸ್ಟಿಟ್ಯೂಟ್ ಆಫ್ ಮೆಥೆಮೆಟಿಕಲ್ ಸೈನ್ಸ್ ಹಾಗೂ ಪ್ರೊ. ಆರ್. ಬಾಲಕೃಷ್ಣನ್ ಎಂಡೋವ್ ಮೆಂಟ್ ಟ್ರಸ್ಟ್ ತಿರುಚನಾಪಳ್ಳಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಗಣಿತಶಾಸ್ತ್ರ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಗಣಿತಶಾಸ್ತ್ರ ಅಧ್ಯಯನ ವಿಭಾಗವು ಆಧುನಿಕ ಸಾಫ್ಟವೇರ್ ಹಾಗೂ ಗಣಿತೀಯ ಟೂಲ್ಸ್‌ಗಳ ಪರಿಚಯಾತ್ಮಕ ಕಾರ್ಯಕ್ರಮ ಆಯೋಜಿಸಿದ್ದು ವಿಶ್ವವಿದ್ಯಾಲಯದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು. ಕವಿವಿಯ ಪಿ.ಎಂ. ಉಷಾ ಯೋಜನೆಯ ನೋಡಲ್ ಅಧಿಕಾರಿ ಪ್ರೊ. ಆರ್.ಎಫ್. ಭಜಂತ್ರಿ ಮಾತನಾಡಿ, ಗಣಿತಶಾಸ್ತ್ರ ಅಧ್ಯಯನ ವಿಭಾಗವು ಪಿ.ಎಂ. ಉಷಾ ಯೋಜನೆಯ ಅಡಿಯಲ್ಲಿ 3ನೇ ಯಶಸ್ವಿ ಕಾರ್ಯಕ್ರಮ ಮಾಡಿದ್ದು, ವಿಭಾಗದ ಕ್ರಿಯಾಶೀಲತೆಯನ್ನು ಪ್ರತಿನಿಧಿಸುತ್ತದೆ. ಈ ವಿಭಾಗವು ಜ್ಞಾನದ ಕಣಜ. ಈಗಾಗಲೇ ವಿಭಾಗದ ಲ್ಯಾಬೋರೇಟರಿಯಲ್ಲಿ 50 ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕವಿವಿಯ ಯೋಜನೆ-ಮೇಲ್ವಿಚಾರಣೆ-ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ. ಎಂ. ಡೇವಿಡ್ ಮಾತನಾಡಿ, ವಿಭಾಗದ ಸಂಘಟನಾತ್ಮಕ ಕಾರ್ಯದಿಂದ ಕಾರ್ಯಕ್ರಮವು ಯಶಸ್ವಿಯಾಗಿದೆ. ವಿಭಾಗವು ನಿರಂತರವಾಗಿ ಜ್ಞಾನಾಧಾರಿತ ಹಾಗೂ ವಿಷಯಾಧಾರಿತ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ ಎಂದರು.

ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಸಿ. ಶಿರಾಳಶೆಟ್ಟಿ, ಪ್ರಾಧ್ಯಾಪಕರಾದ ಡಾ. ಪವಿತ್ರಾ ಸಿ.ಜಿ., ಡಾ. ಶಶಿಕಾಂತ, ಡಾ. ಕೆ. ರಮೇಶ, ಡಾ. ಬಿ. ಪರ್ವತಲು ಮಾತನಾಡಿದರು. ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು. ಪ್ರೊ.ಎಚ್.ಎಸ್. ರಮಾನೆ ವರದಿ ಪ್ರಸ್ತುತಪಡಿಸಿದರು. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ