ಗ್ರಾಮಮಟ್ಟದಲ್ಲೂ ಲಿಂಗಾಯತ ಪಂಚಮಸಾಲಿ ಸಮಾಜ ಸಂಘಟಿತವಾಗಲಿ

KannadaprabhaNewsNetwork |  
Published : Jun 01, 2025, 11:58 PM IST
1ಎಚ್‌ಯುಬಿ23ಕಾರ್ಯಕ್ರಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟಿನ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ  ರಾಜಶೇಖರ ಮೆಣಸಿನಕಾಯಿ ಅವರನ್ನುಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲಸಂಗಮದಲ್ಲಿ ಸ್ಥಾಪನೆಯಾಗಿ 17 ವರ್ಷ ಪೂರೈಸಿದೆ. ಆದರೆ ಯಾವುದೇ ತರಹನಾದ ಅಭಿವೃದ್ಧಿಯಾಗದಿರುವುದು ವಿಷಾಧನೀಯ. ಇತ್ತೀಚಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ 2ಎ ಮೀಸಲಾತಿ ಹೋರಾಟ ಕೇವಲ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದೆ, ಇಲ್ಲಿ ವರೆಗೂ ಗ್ರಾಮ ಮಟ್ಟದಲ್ಲಿ ಸಮಾಜ ಸಂಘಟನೆಯಾಗಿಲ್ಲ.

ಹುಬ್ಬಳ್ಳಿ: ನೊಂದ ಹೃದಯಗಳಿಗೆ ಸಾಂತ್ವನ, ಯುವಕರಿಗೆ ಮಾರ್ಗದರ್ಶನ ಮತ್ತು ಸಮಾಜ ಸಂಘಟನೆಗೆ ಸಂಪೂರ್ಣ ಒತ್ತು ನೀಡುವ ಸದುದ್ದೇಶದಿಂದ ರಚಿಸಿರುವ ಟ್ರಸ್ಟ್ ಪಂಚಮಸಾಲಿ ಸಮಾಜವನ್ನು ಹಂತ ಹಂತವಾಗಿ ವೈಚಾರಿಕ - ಜಾಗ್ರತ ಸ್ಥಿತಿಗೆ ತರಲು ಪ್ರಯತ್ನಿಸಲಾಗುವುದು ಎಂದು ಪಂಚಮಸಾಲಿ ಪೀಠದ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರಾಜಶೇಖರ ಮೆಣಸಿನಕಾಯಿ ಹೇಳಿದರು.

ತಾಲೂಕಿನ ಕೋಳಿವಾಡ ಗ್ರಾಮದ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟಿನ ತಾಲೂಕು ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಟ್ರಸ್ಟಿನ ನೂತನ ಕಾರ್ಯಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲಸಂಗಮದಲ್ಲಿ ಸ್ಥಾಪನೆಯಾಗಿ 17 ವರ್ಷ ಪೂರೈಸಿದೆ. ಆದರೆ ಯಾವುದೇ ತರಹನಾದ ಅಭಿವೃದ್ಧಿಯಾಗದಿರುವುದು ವಿಷಾಧನೀಯ. ಇತ್ತೀಚಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ 2ಎ ಮೀಸಲಾತಿ ಹೋರಾಟ ಕೇವಲ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದೆ, ಇಲ್ಲಿ ವರೆಗೂ ಗ್ರಾಮ ಮಟ್ಟದಲ್ಲಿ ಸಮಾಜ ಸಂಘಟನೆಯಾಗಿಲ್ಲ. ಕಾರಣ ಮುಂಬರುವ ದಿನಗಳಲ್ಲಿ ಟ್ರಸ್ಟನ್ ಅಧ್ಯಕ್ಷರೊಂದಿಗೆ ರಾಜ್ಯಾದ್ಯಂತ ಸಂಚರಿಸಿ ಸಮಾಜವನ್ನು ಸಂಘಟಸುವುದಲ್ಲದೆ ಅತಿ ಶೀಘ್ರದಲ್ಲಿ ತಾಲೂಕು ಹಾಗೂ ಜಿಲ್ಲಾ ಘಟಕಗಳಿಗೆ ಹೊಸ ಅಧ್ಯಕ್ಷ ಪದಾಧಿಕಾರಿಗಳನ್ನು ನೇಮಿಸಿ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ಮಹಾನಗರದ ಮಧ್ಯಭಾಗದಲ್ಲಿ ಚೆನ್ನಮ್ಮನ ಭವನ ನಿರ್ಮಾಣಕ್ಕಾಗಿ ಭೂಮಿ ಖರೀದಿಸಿದ್ದು, ಅತಿ ಶೀಘ್ರದಲ್ಲಿ ಅಡಿಗಲ್ಲು ಸಮಾರಂಭವನ್ನು ಏರ್ಪಡಿಸಲಾಗುವುದು. ಈ ಹಿಂದೆ ಸಹಕರಿಸಿದಂತೆ ಮುಂದೆಯೂ ಸಮಾಜದ ಸಂಘಟನೆಗೆ ಹಿರಿಯರು ಮಾರ್ಗದರ್ಶನ ಮಾಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಘಟಕದ ಅಧ್ಯಕ್ಷ ಶೇಖಣ್ಣ ಕಣಿವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸಾಮಾಜಿಕ ಹೋರಾಟಗಾರ ರಾಜಶೇಖರ ಮೆಣಸಿನಕಾಯಿ ಅವರನ್ನು ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಶಂಕ್ರಪ್ಪ ಯಳವತ್ತಿ, ಬಸಪ್ಪ ಸೊರಟೂರ, ಮುತ್ತಣ್ಣ ಬಾಡಿನ, ಮಲ್ಲಪ್ಪ ಕಣವಿ, ರಮೇಶ್ ಭಾರಿಕಾಯ, ಶ್ರೀಶೈಲಪ್ಪ ಗುಡ್ಡೀನ, ರುದ್ರಪ್ಪ ಕಗ್ಗಣ್ಣವರ, ಈಶ್ವರಪ್ಪ ಮಾಡಿಹಾಳ, ಚೆನ್ನಪ್ಪ ಮೇಟಿ, ಶಿವಾನಂದ ಕಿರೆಸೂರ್ ಹಾಗೂ ವಿವಿಧ ಗ್ರಾಮ ಘಟಕಗಳ ಅಧ್ಯಕ್ಷ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಬಸವರಾಜ್ ಬಾಡಿನ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಫಕೀರೇಶ್ ಬಕ್ಕಸದ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ