- ಮಲೇಬೆನ್ನೂರು ಬಸವ ಮಂಟಪದಲ್ಲಿ ಜಿಲ್ಲಾ ಬಸವ ದಳದ ಶರಣರ ಸಭೆ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಲಿಂಗಾಯತರಿಗೆ ಒಡೆಯ ನಿಜವಾಗ್ಲೂ ಗಣಪತಿ. ಅಲ್ಲದೇ ಸಾಂಸ್ಕೃತಿಕ ನಾಯಕ ಬಸವೇಶ್ವರ ಎಂದು ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಚಂದ್ರಮೌಳಿ ಹೇಳಿದರು.
ಪಟ್ಟಣದ ಡಾ. ರಾಜ್‌ಕುಮಾರ್ ಬಡಾವಣೆಯ ಬಸವ ಮಂಟಪದಲ್ಲಿ ಭಾನುವಾರ ಜರುಗಿದ ದಾವಣಗೆರೆ ಜಿಲ್ಲಾ ಬಸವ ದಳದ ಶರಣರ ಸಭೆಯಲ್ಲಿ ಅವರು ಮಾತನಾಡಿದರು.ಶರಣರು ಲಿಂಗಾಯತ ಧರ್ಮ ಜಾರಿಗೆ ತಂದು ೯೦೦ ವರ್ಷವಾದರೂ ನಿದ್ರೆಯಿಂದ ಎಚ್ಚರವಾಗೊದು ಯಾವಾಗ? ದೂರದ ಊಟಿ ಮತ್ತು ನೇಪಾಳ ದೇಶದ ಜಗುಲಿಯಲ್ಲಿ ಬಸವೇಶ್ವರ ಭಾವಿಚಿತ್ರವನ್ನು ಇಟ್ಟು ಪೂಜಿಸುತ್ತಾರೆ. ಇಂಥ ಸಂದರ್ಭದಲ್ಲಿ ಲಿಂಗಾಯತರು ಎನ್ನಿಸಿಕೊಂಡವರು ಬೇರೆಲ್ಲ ದೇವರುಗಳನ್ನು ಇಟ್ಟು ಪೂಜಿಸುವರು ಎಂದು ವಿಷಾದಿಸಿದರು.
ಗುಳ್ಳಹಳ್ಳಿ ಮಲ್ಲಿಕಾರ್ಜುನಪ್ಪ ಮಾತನಾಡಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರಲ್ಲ ಎಂದು ಶಾಸಕ ಬಸನಗೌಡ ಯತ್ನಾಳ್ ಒಬ್ಬ ಮೂರ್ಖರಂತೆ ಮಾತಾಡಿದ್ದಾರೆ. ಅಂಥ ಗಾಳಿಮಾತುಗಳನ್ನು ಯಾರೂ ನಂಬದೇ ಯುವಕರನ್ನು ಸಂಘಟಿಸಿ ಪಂಚಾಚಾರ, ಅಷ್ಠಾವರಣ, ಲಿಂಗದೀಕ್ಷೆ, ಬಸವ ತತ್ವವನ್ನು ತಿಳಿಸಬೇಕಿದೆ ಎಂದು ಹೇಳಿದ ಅವರು, ಗಣೇಶ ಉತ್ಸವಕ್ಕೆ ಮಾಡುವ ಖರ್ಚುಗಳಲ್ಲಿ ಇಡೀ ಭಾರತದ ತುಂಬೆಲ್ಲಾ ನೀರಾವರಿ ಪ್ರದೇಶ ಮಾಡಬಹುದಿತ್ತು ಎಂದರು.
ಅಕ್ಕನಬಳಗದ ಶರಣೆಯರು ಇಂಪಾಗಿ ವಚನ ಗೀತೆ ಹಾಡಿದರು. ಮುಖಂಡ ಬಿ ಚಿದಾನಂದಪ್ಪ ಸಹೋದರರು ಪ್ರಸಾದ ವ್ಯವಸ್ಥೆ ಮಾಡಿದ್ದರು.
(ಟಾಪ್ ಕೋಟ್) ಲಿಂಗಾಯತರು ಸಂಘಟಿತರಾಗದಿದ್ದಲ್ಲಿ ಸಮಸ್ಯೆಯಾಗಲಿದೆ. ಬೇರೆಯವರಿಗೆ ೧೨ನೇ ಶತಮಾನದ ಪೂರ್ವದಲ್ಲಿನ ಜೀತರಾಗುವ ದಿನ ದೂರವಿಲ್ಲ. ಲಿಂಗಾಯತರ ಅಸ್ತಿತ್ವ ಉಳಿಯಲು ವಚನ ಸಾಹಿತ್ಯ, ಶರಣರ ಜೀವನ, ತ್ಯಾಗ ಭಾವನೆ ಇರಬೇಕು.
- - -