ಮಾಧ್ಯಮದಿಂದ ಸಮಾಜ ಬೆಸೆಯುವ ಕಾರ್ಯವಾಗಲಿ: ಪುತ್ತಿಗೆ ಶ್ರೀ

KannadaprabhaNewsNetwork |  
Published : Dec 09, 2025, 02:00 AM IST
07ಮಾಧ್ಯಮಪತ್ರಕರ್ತರಿಗೆ ವಿವಿಧ ಸ್ಮಾರಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು | Kannada Prabha

ಸಾರಾಂಶ

‘ಸುಗುಣಮಾಲಾ’ ಮಾಸಪತ್ರಿಕೆ ಹಾಗೂ ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ‘ವಿಕಾಸ’ ನೇತೃತ್ವದಲ್ಲಿ ಗೀತಾ ಮಂದಿರದ ಪುತ್ತಿಗೆ ಶ್ರೀನೃಸಿಂಹ ಸಭಾಭವನದಲ್ಲಿ ‘ಕರಾವಳಿ ವಿಕಾಸ ಸಂಭ್ರಮ’ ಕಾರ್ಯಕ್ರಮ ಸಂಪನ್ನಗೊಂಡಿತು.

ಉಡುಪಿ: ಮಾಧ್ಯಮಗಳು ಸದ್ವಿಚಾರಗಳನ್ನು ಪ್ರಸಾರ ಮಾಡುವ ಮೂಲಕ ಸಮಾಜ ಬೆಸೆಯುವ ಕಾರ್ಯ ಮಾಡಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ‘ಸುಗುಣಮಾಲಾ’ ಮಾಸಪತ್ರಿಕೆ ಹಾಗೂ ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ‘ವಿಕಾಸ’ ನೇತೃತ್ವದಲ್ಲಿ ಗೀತಾ ಮಂದಿರದ ಪುತ್ತಿಗೆ ಶ್ರೀನೃಸಿಂಹ ಸಭಾಭವನದಲ್ಲಿ ನಡೆದ ‘ಕರಾವಳಿ ವಿಕಾಸ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ ಕಾರ್ಣಿಕ್, ಉದ್ಯಮಿ ರಘುನಾಥ ಸೋಮಯಾಜಿ, ಪತ್ರಕರ್ತರಾದ ಪ್ರಕಾಶ್ ಇಳಂತಿಲ ಮತ್ತು ಜಿತೇಂದ್ರ ಕುಂದೇಶ್ವರ ಅಭ್ಯಾಗತರಾಗಿದ್ದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಹಾಗೂ ಆಸ್ಟ್ರೇಲಿಯಾದ ಉಮೇಶ್ ದತ್ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಿದರು.

ಸುಗುಣಮಾಲಾ ಸಂಪಾದಕೀಯ ಸಲಹಾ ಮಂಡಳಿ ಸದಸ್ಯ ಓಂ ಪ್ರಕಾಶ್ ಭಟ್, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಎಂ. ಪ್ರಸನ್ನ ಆಚಾರ್ಯ, ಸಂಪಾದಕ ಮಹಿತೋಷ ಆಚಾರ್ಯ, ವಿಕಾಸ ಅಧ್ಯಕ್ಷ ಶ್ರೀನಾಥ ಜೋಶಿ. ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್ ವೇದಿಕೆಯಲ್ಲಿದ್ದರು. ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸ್ವಾಗತಿಸಿದರು.

‘ವಿಕಾಸ ಉಡುಪಿ ಶ್ರೀಕೃಷ್ಣ ಸದ್ಭಾವನಾ ಪ್ರಶಸ್ತಿ’ಯನ್ನು ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಗಾಯತ್ರಿ ಚಂದ್ರಶೇಖರ್ ಮತ್ತು ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ. ಬಿ.ಎಸ್. ಶಿವಕುಮಾರ್ ಅವರಿಗೆ, ವೈದ್ಯಲೋಕ- ಹೆಲ್ತ್ ವಿಷನ್ ಪ್ರಾಯೋಜಿತ ‘ವಿಕಾಸ ವೈದ್ಯರತ್ನ’ ಪ್ರಶಸ್ತಿಯನ್ನು ಡಾ.ಆನಂದ ಶೇಡ್ಬಾಳ, ಸಂಪದ ಸಾಲು ಪ್ರಾಯೋಜಿತ ‘ವಿಕಾಸ ಸಂಗೀತ ರತ್ನ’ ಪ್ರಶಸ್ತಿಯನ್ನು ವಿದುಷಿ ಪವನಾ ಬಿ. ಆಚಾರ್ ಮಣಿಪಾಲ ಅವರಿಗೆ ನೀಡಿ ಪುರಸ್ಕರಿಸಲಾಯಿತು.ಪತ್ರಕರ್ತರಿಗೆ ಪ್ರಶಸ್ತಿ:ಹಲವಾರು ಹಿರಿಯ ಪತ್ರಕರ್ತರ ಸ್ಮರಣಾರ್ಥ ನೀಡುವ ‘ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ’ಗಳಾದ ಪಾ.ವೆಂ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಕಿರಣ್ ಮಂಜನಬೈಲು ಉಡುಪಿ, ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಡಾ.ಮಂದಾರ ರಾಜೇಶ ಭಟ್ ಮೂಡುಬಿದಿರೆ, ಬನ್ನಂಜೆ ರಾಮಾಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಸಾಂತೂರು ಶ್ರೀನಿವಾಸ ತಂತ್ರಿ ಉಜಿರೆ, ದಾಮೋದರ ಕಕ್ರಣ್ಣಾಯ ಸ್ಮರಣಾರ್ಥ ಪ್ರಶಸ್ತಿ ಚಂದ್ರಶೇಖರ ಕುಳಮರ್ವ ಮಂಗಳೂರು, ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ ಪ್ರಶಸ್ತಿ- ವೆಂಕಟೇಶ ಪೈ ಬೆಂಗಳೂರು, ದಾಮೋದರ ಐತಾಳ ಸ್ಮರಣಾರ್ಥ ಪ್ರಶಸ್ತಿ- ಶ್ವೇತ ಇಂದಾಜೆ ಮಂಗಳೂರು, ಕೊಡೆತ್ತೂರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ ಪ್ರಶಸ್ತಿ- ಶ್ಯಾಮ್ ಹೆಬ್ಬಾರ್ ಬೆಂಗಳೂರು, ಈಶ್ವರಯ್ಯ ಅನಂತಪುರ ಸ್ಮರಣಾರ್ಥ ಪ್ರಶಸ್ತಿ- ಶ್ರೀಕೃಷ್ಣ ಭಟ್ ಮಾಯ್ಲೆಂಗಿ ಹಾಗೂ ಮಂಜುನಾಥ ಭಟ್ ಸ್ಮರಣಾರ್ಥ ಪ್ರಶಸ್ತಿ- ಹರೀಶ್ ಕೆ. ಆದೂರು ಮೂಡುಬಿದಿರೆ ಅವರಿಗೆ ಸಾಹಿತಿ ಡಾ. ವೀಣಾ ಬನ್ನಂಜೆ ಮತ್ತು ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರದಾನಿಸಿದರು.

ಕ್ಯಾ. ಗಣೇಶ ಕಾರ್ಣಿಕ್, ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಸುಧೀಂದ್ರಪ್ರಸಾದ್ ಇದ್ದರು. ‘ನಮ್ಮ ಹಿರಿಯರು- ನಮ್ಮ ಹೆಮ್ಮೆ’ ವಿಭಾಗದಲ್ಲಿ ವಿಜಯಕುಮಾರ್ ಹೊಳ್ಳ ಕೋಟ, ರಾಮಕೃಷ್ಣ ಮೈರುಗ ಕಾಸರಗೋಡು, ಜಿ.ಕೆ. ಭಟ್, ರಾಮಚಂದ್ರ ಆಚಾರ್ಯ ಪಡುಬಿದ್ರಿ, ಲಕ್ಷ್ಮಿ ಮಚ್ಚಿನ ಕುಂದಾಪುರ ಅವರನ್ನು ಗೌರವಿಸಲಾಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಕಾಂಗ್ರೆಸ್‌-ಬಿಜೆಪಿ ಜಿದ್ದಾಜಿದ್ದಿನ ಹೋರಾಟ
ಜಿಲ್ಲಾಡಳಿತದಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ