ಮೋಚಿಗಾರ ಸಮಾಜ ರಾಜಕೀಯವಾಗಿ ಬೆಳೆಯಲಿ

KannadaprabhaNewsNetwork |  
Published : Jul 24, 2025, 12:45 AM IST
ವಿಜಯಪುರದಲ್ಲಿ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮೋಚಿಗಾರ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಜೊತೆ ನಾನು ಸದಾ ಬೆಂಬಲವಾಗಿ ನಿಲ್ಲುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೋಚಿಗಾರ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಜೊತೆ ನಾನು ಸದಾ ಬೆಂಬಲವಾಗಿ ನಿಲ್ಲುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.

ನಗರದ ಹಾನಗಲ್ ಕುಮಾರಸ್ವಾಮಿ ಸಭಾಂಗಣದಲ್ಲಿ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೋಚಿಗಾರ ಸಮಾಜ ಸೌಮ್ಯ ಸ್ವಭಾವಕ್ಕೆ ಇನ್ನೊಂದು ಹೆಸರಾಗಿದೆ. ಸಮುದಾಯಕ್ಕೆ ಸೌಲಭ್ಯಗಳು ದೊರಕದೇ ಹೋದರೂ ಸಹ ಅದನ್ನು ಸಹಿಸಿಕೊಂಡಿದೆ ಹೊರತು ಯಾವತ್ತೂ ಬಂಡಾಯ ಪ್ರದರ್ಶನ ಮಾಡಿಲ್ಲ. ಇಂದಿಗೂ ಮೋಚಿಗಾರ ಸಮಾಜಕ್ಕೆ ನ್ಯಾಯಯುತವಾದ ಸೌಲಭ್ಯಗಳು ದೊರಕಿಲ್ಲ. ಹೀಗಾಗಿ ಸಮಾಜದ ಪ್ರಗತಿಗೆ ಸಂಪೂರ್ಣ ಬದ್ಧವಾಗಿದ್ದು, ಸಮಾಜದ ಪರವಾಗಿ ಪ್ರಾಮಾಣಿಕವಾಗಿ ಅವರ ಬೆಂಬಲಕ್ಕೆ ನಿಲ್ಲುವೆ ಎಂದು ಧೈರ್ಯ ನೀಡಿದರು.

ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಎಲ್ಲ ಸಮುದಾಯಗಳ ಪ್ರಗತಿಯೇ ನನ್ನ ಗುರಿ. ಎಲ್ಲ ಸಮುದಾಯಗಳು ಎಲ್ಲ ರಂಗದಲ್ಲಿಯೂ ಪ್ರಗತಿ ಕಾಣಬೇಕು. ಸರ್ಕಾರದ ಪ್ರತಿನಿಧಿಯಾಗಿ ಈ ಎಲ್ಲ ಸಮಾಜಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.ತ್ರಿಮತಸ್ಥ ಗುರು ರವಿದಾಸ್ ಪರಿಷತ್ ಪ್ರಧಾನ ಸಂಚಾಲಕ ಡಾ.ಗುರುರಾಜ್ ಬೀಡಿಕರ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ತ್ರಿಮತಸ್ಥ ಸಮುದಾಯವು ಎದುರಿಸುತ್ತಿರುವ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ವಿಶ್ಲೇಷಿಸಿದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ತ್ರಿಮತಸ್ಥ ಸಮುದಾಯವು ಒಳ ಮೀಸಲಾತಿಗಾಗಿ ತುರ್ತಾಗಿ ಮಾದಿಗ ಸಮುದಾಯದಿಂದ ಬೇರ್ಪಟ್ಟು ಸಮುದಾಯದ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿಯನ್ನು ಆಯೋಗ ಹಾಗೂ ರಾಜ್ಯ ಸರ್ಕಾರಗಳು ನಿಗದಿಪಡಿಸಬೇಕು. ಅಲ್ಲದೇ, ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವ ತ್ರಿಮತಸ್ಥ ಸಮುದಾಯಕ್ಕೆ ಅತಿ ಅಗತ್ಯವಾಗಿ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಸ್ಥಾಪಿಸಬೇಕು ಎಂದರು.ಜ್ಞಾನಯೋಗಾಶ್ರಮದ ಸಂಗಮೇಶ್ವರ ಮಹಾಸ್ವಾಮಿಗಳು, ಡಾ.ವಿರುಪಾಕ್ಷ ದೇವರು ಓಂಕಾರಾಶ್ರಮ ವಿಜಯಪುರ ಮತ್ತು ಹಿರೇಮಠ ಗೊರನಾಳ ಸಾನಿಧ್ಯ ವಹಿಸಿದ್ದರು. ಮಹಾಜ್ಞಾನಿ ಗೌತಮ ಬುದ್ಧ, ಭಕ್ತಿ ಭಂಡಾರಿ ಬಸವಣ್ಣನವರು, ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಮಹಾಶರಣ ಕಕ್ಕಯ್ಯನವರು ಮತ್ತು ಮಹಾಶರಣ ಹರಳಯ್ಯನವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾಂಜಲಿ ಸಲ್ಲಿಸಿ ಗೌರವಿಸಿದರು.ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸುನೀಲ್ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ವಿ.ಸಿ.ನಾಗಠಾಣ, ಚಿದಾನಂದ ಪೋಳ, ಸಿದ್ದರಾಮ ಹತ್ತರಕರ, ಸಿದ್ದಪ್ಪಾ ಆವಜಿ, ರೇವಣ್ಣ ಕಡೆಮನಿ, ಜಗನ್ನಾಥ ಅಳವಂಡಿ, ರೇಖಾ ನಾಗರಾಜ್, ಅಶೋಕ ನಿಡಗಲ, ಸಿದ್ದಪ್ಪ ಕಮ್ಮಾರ, ಡಾ.ಪ್ರಕಾಶ ಇನಾಮದಾರ, ಪ್ರಶಾಂತ್ ಕಿರಣಗಿ, ಅನುಸೂಯ, ರೇಣುಕಾ ಹೊನಕೇರಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?