ರಾಣಿಬೆನ್ನೂರು: ಸಮಾಜಮುಖಿ ಕಾರ್ಯಗಳಲ್ಲಿ ಸಂಘ, ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ವಲಯ ಉಪಾಧ್ಯಕ್ಷ ಮಧುಸೂದನ ನವಡ ಮಾತನಾಡಿ, ಜೀವ ನಮ್ಮ ಮಾತು ಕೇಳುವುದಿಲ್ಲ, ಬದಲಾಗಿ ಜೀವನ ನಮ್ಮ ಮಾತು ಕೇಳುತ್ತದೆ. ಈ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಜೆಸಿಐ ಸಂಸ್ಥೆ ದಾರಿದೀಪವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷ ಕೆ. ಶಿವಶಂಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ಜೆಸಿಐ ಘಟಕದ 2025ನೇ ವರ್ಷದ ನೂತನ ಪದಾಧಿಕಾರಿಗಳಿಗೆ ಜೆಎಸಿ ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ವಲಯ ಉಪಾಧ್ಯಕ್ಷ ಮಧುಸೂದನ ನವಡ ಹಾಗೂ ಜೆಸಿಐ ವಲಯ-24ರ ಅಧ್ಯಕ್ಷ ಗೌರೀಶ ಭಾರ್ಗವ ಪ್ರಮಾಣ ವಚನ ಬೋಧಿಸಿದರು.ನೂತನ ಅಧ್ಯಕ್ಷ ಕುಮಾರ ಎಸ್. ಬೆಣ್ಣಿ, ಉಪಾಧ್ಯಕ್ಷ ಅಶೋಕ ದುರ್ಗದಶೀಮಿ, ಚಂದನ ಹಿತ್ತಲಮನಿ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ಆಕರ್ಷ ಬಸ್ಮಾಂಗಿಮಠ, ವಿನಾಯಕ ಗುಲಗಂಜಿ, ರೇಖಾ ಬೆಣ್ಣಿ, ಕಾರ್ಯದರ್ಶಿ ಇಮ್ರಾನ್ ನೀಲಗಾರ, ಸಹ ಕಾರ್ಯದರ್ಶಿ ವಿನಾಯಕ ಯಕನಹಳಿ, ಖಜಾಂಚಿ ವಿದ್ಯಾಧರ ಹಲಗೇರಿ, ತಾಂತ್ರಿಕ ವಿಭಾಗದ ಮಂಜುನಾಥ ಹೊಸಪೇಟೆ, ಮಲ್ಲಿಕಾರ್ಜುನ ತಾವರಗೊಂದಿ, ನಾರಾಯಣ ಪವಾರ, ನಾಗರಾಜ ಬೆಣ್ಣಿ, ವಿಜಯ ಮಾಳೋದೆ, ರೂಪಾ ಕಾಕಿ, ಆಕಾಶ ಕೊಟ್ಟೂರ, ಲಕ್ಷ್ಮೀ ಕಾಕಿ, ರೇಖಾ ಬೆಣ್ಣಿ, ಅಂಕಿತಾ ಕಾಕಿ ಅಧಿಕಾರ ಸ್ವೀಕಾರ ಮಾಡಿದರು.