ಇದೇನು ಪಾಕ್‌, ಅಪಘಾನ್ ಅಲ್ಲ; ಮುಸ್ಲಿಂ ಗೂಂಡಾಗಿರಿಗೆ ಪೊಲೀಸರು ಅಂತ್ಯ ಹಾಡಲಿ

KannadaprabhaNewsNetwork |  
Published : Feb 12, 2025, 12:33 AM IST
(ಫೋಟೋ: ಪ್ರಮೋದ್‌ ಮುತಾಲಿಕ್‌) | Kannada Prabha

ಸಾರಾಂಶ

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರುವ ಮುಸ್ಲಿಮರು ಗೂಂಡಾಗಿರಿ ನಿಲ್ಲಿಸಲಿ. ಇದೇನು ಪಾಕಿಸ್ತಾನ, ಅಪಘಾನಿಸ್ಥಾನವಲ್ಲ. ಪೊಲೀಸ್‌ ಇದೆ, ಕಾನೂನು ಇದೆ ಎಂಬುದನ್ನು ಮರೆಯಬೇಡಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ದಾವಣಗೆರೆಯಲ್ಲಿ ಎಚ್ಚರಿಸಿದ್ದಾರೆ.

- ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರುವ ಮುಸ್ಲಿಮರು ಗೂಂಡಾಗಿರಿ ನಿಲ್ಲಿಸಲಿ. ಇದೇನು ಪಾಕಿಸ್ತಾನ, ಅಪಘಾನಿಸ್ಥಾನವಲ್ಲ. ಪೊಲೀಸ್‌ ಇದೆ, ಕಾನೂನು ಇದೆ ಎಂಬುದನ್ನು ಮರೆಯಬೇಡಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಮುಸ್ಲಿಮರು, ಇಂತಹ ಗೂಂಡಾಗಿರಿ ನಿಲ್ಲಿಸಬೇಕು. ನೀವು ಹಿಂದು ಸಮಾಜ, ಹಿಂದು ದೇವರುಗಳ ಬಗ್ಗೆ ಎಷ್ಟೊಂದು ಅವಹೇಳನ ಮಾಡಿದ್ದೀರಿ. ನಾವೂ ಏನಾದರೂ ಇದೇ ರೀತಿ ಎದ್ದರೆ ಏನಾಗಬಹುದು ಎಂದು ಪ್ರಶ್ನಿಸಿದರು.

2047ಕ್ಕೆ ಇಡೀ ದೇಶವನ್ನು ಇಸ್ಲಾಂ ದೇಶ, ಎರಡನೇ ಪಾಕಿಸ್ತಾನವೆಂದು ಮುಸ್ಲಿಮರು ಘೋಷಣೆ ಮಾಡಿದ್ದಾರೆ. ಇಂತಹ ಘೋಷಣೆಗಳಿಂದಾಗಿಯೇ ಮುನ್ನುಗ್ಗಿ ಬರುತ್ತಿದ್ದಾರೆ. ಮುಸ್ಲಿಂ ಓಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ ಸರ್ಕಾರ ಇಂತಹವರನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಮೈಸೂರಿನಲ್ಲಿ ಆದ ಘಟನೆಗೆ ಮುಸ್ಲಿಮರಿಗಿಂತಲೂ ಕಾಂಗ್ರೆಸ್ ಸರ್ಕಾರವೇ ಜಾಸ್ತಿ ಹೊಣೆಯಾಗಿದೆ ಎಂದು ಮುತಾಲಿಕ್‌ ಕಿಡಿಕಾರಿದರು.

ಶಾಸಕನ ವಿರುದ್ಧ ಕ್ರಮ ಕೈಗೊಳ್ಳಿ:

ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ, ಕೇವಲವಾಗಿ ನಿಂದನೆ ಮಾಡಿ ದರ್ಪ ಮೆರೆದಿರುವ ಭದ್ರಾವತಿ ಶಾಸಕನ ಪುತ್ರನ ಮೇಲಲ್ಲ, ಶಾಸನ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರದಲ್ಲಿರುವ ಜನಪ್ರತಿನಿಧಿಗಳ ಮಕ್ಕಳು ಹೀಗೆಯೇ ಸೊಕ್ಕಿನಿಂದ ವರ್ತಿಸುತ್ತಿದ್ದಾರೆ. ಒಬ್ಬ ಮಹಿಳಾ ಅಧಿಕಾರಿ ವಿರುದ್ಧ ಭದ್ರಾವತಿ ಶಾಸಕ ಸಂಗಮೇಶ ಪುತ್ರನ ವರ್ತನೆ ನಿಜಕ್ಕೂ ಅಕ್ಷಮ್ಯವಾದುದು ಎಂದು ಮುತಾಲಿಕ್‌ ತಾಕೀತು ಮಾಡಿದರು.

ಸ್ವರ್ಗ ನೋಡಿದಂತಾಗುತ್ತದೆ:

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ನೋಡಿದರೆ ಸ್ವರ್ಗವನ್ನೇ ನೋಡಿದಂತಾಗುತ್ತದೆ. ನಾನೂ ಸಹ ಎರಡು ದಿನ ಕುಂಭಮೇಳಕ್ಕೆ ಹೋಗಿದ್ದೆ. 45 ಕೋಟಿ ಜನರು ಅಲ್ಲಿಗೆ ಬರುತ್ತಿದ್ದಾರೆ. ಇಂತಹ ಮಹಾನ್ ಜನಸಾಗರ ನೋಡಿ, ಕಾಂಗ್ರೆಸ್ಸಿಗರು ಟೀಕಿಸುತ್ತಿದ್ದಾರೆ. ಆನೆ ಮುಂದೆ ಹೊರಟಿದ್ದರೆ ಹಿಂದೆ ನಾಯಿ ಬೊಗಳಿದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

- - - (ಫೋಟೋ: ಪ್ರಮೋದ್‌ ಮುತಾಲಿಕ್‌)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ