ರಾಘವೇಂದ್ರ ಖಾಸನೀಸರನ್ನು ಗುರುತಿಸುವ ಕಾರ್ಯ ನಡೆಯಲಿ

KannadaprabhaNewsNetwork |  
Published : Sep 03, 2024, 01:43 AM IST
2ಐಎನ್‌ಡಿ01,ಇಂಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್‌ ಸದಸ್ಯರಾಗಿ ನೇಮಕವಾದ ಡಾ.ಎಸ್‌.ಜೆ.ಮಾಡ್ಯಾಳ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ರಾಘವೇಂದ್ರ ಖಾಸನೀಸರು ಕನ್ನಡ ಕಥಾ ಜಗತ್ತಿನಲ್ಲಿ ಕನ್ನಡ ಕಥನ ಮಾರ್ಗದ ಹೊಸಪರಂಪರೆಯನ್ನು ಹುಲುಸಾಗಿ ಬೆಳೆಸಿದವರು. ಅವರನ್ನು ಗುರುತಿಸವ ಕಾರ್ಯ ಅಷ್ಟಾಗಿ ನಡೆಯದಿರುವುದು ವಿಷಾಧನೀಯ ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ರಾಘವೇಂದ್ರ ಖಾಸನೀಸರು ಕನ್ನಡ ಕಥಾ ಜಗತ್ತಿನಲ್ಲಿ ಕನ್ನಡ ಕಥನ ಮಾರ್ಗದ ಹೊಸಪರಂಪರೆಯನ್ನು ಹುಲುಸಾಗಿ ಬೆಳೆಸಿದವರು. ಅವರನ್ನು ಗುರುತಿಸವ ಕಾರ್ಯ ಅಷ್ಟಾಗಿ ನಡೆಯದಿರುವುದು ವಿಷಾಧನೀಯ ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಕನ್ನಡ ಕಥನ ಮಾರ್ಗ-ರಾಘವೇಂದ್ರ ಖಾಸನೀಸರ ಕತೆಗಳು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂಡಿ ನೆಲವು ಮಧುರಚೆನ್ನರ, ಕಾಪಸೆ ರೇವಪ್ಪನವರ, ಪಿ.ಧೂಲಾಸಾಹೇಬರ, ಸಿಂಪಿ ಲಿಂಗಣ್ಣನವರ ಹಲಸಂಗಿ ಗೆಳೆಯರ ಬಳಗದ ಕಾರ್ಯವನ್ನು ಈಗೀಗ ಸ್ಮರಿಸುತ್ತಿದ್ದೇವೆ. ಅಂತವರಲ್ಲಿ ಕತೆಗಾರ ರಾಘವೇಂದ್ರ ಖಾಸನೀಸರು ಹಾಗೂ ಶ್ರೀರಂಗರು ಸ್ಮರಣೆಯಲ್ಲಿ ಉಳಿಯದಿರುವುದು ಹಾಗೂ ಅವರ ಕತೆಗಳ ಕುರಿತು ಇಲ್ಲಿನವರಿಗೂ ತಿಳಿಯುವಲ್ಲಿ ಹಿಂದೆ ಉಳಿದ್ದಿದ್ದೇವೆ ಎಂದರು.ವಿಮರ್ಶಕ ಮನು ಪತ್ತಾರ ರಾಘವೇಂದ್ರ ಖಾಸನೀಸರ ಕತೆಗಳು ಕುರಿತಾಗಿ ಉಪನ್ಯಾಸ ಮಂಡಿಸಿ ಹೊಸ ತಲೆಮಾರಿನ ಕತೆಗಾರರು ಖಾಸನೀರ ಕತೆಗಳ ಕುರಿತು ಓದಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಇಂಡಿ ಪಟ್ಟಣದಲ್ಲಿ ಜನಿಸಿದ ರಾಘವೇಂದ್ರ ಖಾಸನೀಸರು ಅಲಕ್ಷಿತರಾಗಿದ್ದಾರೆ. ಅವರನ್ನು ಅವರ ಸಾಹಿತ್ಯವನ್ನು ಮುನ್ನೆಲೆಗೆ ತರುವ ಕಾರ್ಯವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಡಿದೆ ಎಂದರು. ಪ್ರಾಚಾರ್ಯ ಡಾ.ರಮೇಶ ಆರ್.ಎಚ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಓದುಗರ ಚಾವಡಿಯ ಅಧ್ಯಕ್ಷ ಶರಣು ಸಬರದ, ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಮೊದಲಾದವರು ಉಪಸ್ಥಿತರಿದ್ದರು.ಸಿಂಡಿಕೇಟ್ ಸದಸ್ಯರ ಸನ್ಮಾನ:

ಇದೇ ಸಮಾರಂಭದಲ್ಲಿ ನೂತನವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಡಾ. ಎಸ್.ಜೆ.ಮಾಡ್ಯಾಳ ಅವರನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಹಾಗೂ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಗೌರವ ಸನ್ಮಾನ ಮಾಡಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಕತ್ತಿ ಸ್ವಾಗತಿಸಿದರು. ಕು.ಪೂಜಾ ಸಾರವಾಡ ಪ್ರಾರ್ಥಿಸಿದರು. ಪ್ರೊ.ಕವೀಂದ್ರಕುಮಾರ ಚಾಬಕಸವಾರ ನಿರೂಪಿಸಿದರು. ಪ್ರೊ.ಕಾಶೀನಾಥ ಜಾಧವ ವಂದಿಸಿದರು.

PREV