ಪುಣ್ಯಕೋಟಿ ಮಠ ಎಲ್ಲಾ ಜನಾಂಗದವರ ಮಠವಾಗಲಿ

KannadaprabhaNewsNetwork |  
Published : Oct 25, 2024, 12:47 AM ISTUpdated : Oct 25, 2024, 12:48 AM IST
24 ಹೆಚ್.ಆರ್.ಆರ್ 124 ಹೆಚ್.ಆರ್.ಆರ್ 1 ಎ ಹರಿಹರ ಸಮೀಪದ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿರುವ ಪುಣ್ಯಕೋಟಿಮಠದ ತಪೋ ಮಂದಿರದಲ್ಲಿ ಮುಕ್ತಿಮಂದಿರದ ಲಿಂ. ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ 36 ಅಡಿ ಎತ್ತರದ ಸಿಮೆಂಟ್ ಮಹಾಮೂರ್ತಿ ನಿರ್ಮಾಣ  ಕಾರ್ಯಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಪುಣ್ಯಕೋಟಿ ಎಂಬ ಹೆಸರಿನಿಂದ ಕರೆಯುವ ಈ ಮಠವು ನಾಡಿನ ಸಮಸ್ತ ಜಾತಿ-ಜನಾಂಗದವರ ಮಠವಾಗಿ ಬೆಳೆಯಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಪುಣ್ಯಕೋಟಿ ಎಂಬ ಹೆಸರಿನಿಂದ ಕರೆಯುವ ಈ ಮಠವು ನಾಡಿನ ಸಮಸ್ತ ಜಾತಿ-ಜನಾಂಗದವರ ಮಠವಾಗಿ ಬೆಳೆಯಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಸಮೀಪದ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿರುವ ಪುಣ್ಯಕೋಟಿಮಠದ ತಪೋ ಮಂದಿರದಲ್ಲಿ ಮುಕ್ತಿ ಮಂದಿರದ ಲಿಂ. ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ 36 ಅಡಿ ಎತ್ತರದ ಸಿಮೆಂಟ್ ಮಹಾಮೂರ್ತಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತ ದೇಶದಲ್ಲಿ ಹೆಣ್ಣು ಹಾಗೂ ಮಣ್ಣಿಗೆ ಬಹು ಮಹತ್ವದ ಸ್ಥಾನ ನೀಡಲಾಗಿದ್ದು, ಕೆಲವರು ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ಕಾಣುತ್ತಿರುವುದು ನೋವಿನ ಸಂಗತಿ. ಪ್ರಪಂಚದ ಅನೇಕ ರಾಷ್ಟ್ರಗಳ ಜನತೆಗೆ ನಮ್ಮ ದೇಶದ ಮಣ್ಣಿನ ಮಹತ್ವ ಅರ್ಥವಾಗಿದ್ದು, ಅನೇಕರು ಭಾರತಕ್ಕೆ ಬಂದು ನಮ್ಮ ತಾಯಿನಾಡಿನ ಮಣ್ಣಿನಲ್ಲಿ ಬಿದ್ದು ಒದ್ದಾಡಿ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ ಎಂದರು.ಮೈಸೂರು ಮುಕ್ತ ವಿವಿ ಕುಲಪತಿ ಡಾ. ಶರಣಬಸಪ್ಪ ಹಲಸೆ ಮಾತನಾಡಿ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಅವರ ಪಟ್ಟಾಧಿಕಾರ ಹಲವಾರು ಕಾರಣಗಳಿಂದ ಮುಂದೂಡಲ್ಪಟ್ಟಿದ್ದು, ಆದಷ್ಟು ಬೇಗ ಆ ಕಾರ್ಯ ಮಾಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಭಕ್ತರ ಸಹಕಾರ ಅತ್ಯಗತ್ಯವೆಂದು ತಿಳಿಸಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ನೆಗಳೂರು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಪುಣ್ಯಾಶ್ರಮದ ರೇವಣಸಿದ್ದೇಶ್ವರ ಸ್ವಾಮಿಜಿಗಳು ವೇದಿಕೆ ಮೇಲೆ ಇದ್ದರು. ಬಾಲಯೋಗಿ ಜಗದೀಶ್ವರ ಶ್ರೀ ಮಾತನಾಡಿದರು. ಕೋಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಂಜುನಾಥ್, ಶಿವಮೊಗ್ಗ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್ ಹೆಗ್ಗಪ್ಪನವರ, ಎಸ್.ಎಸ್.ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ವಾಣಿ ಬಕ್ಕೇಶ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಹೆಗ್ಗಪ್ಪನವರ, ಕರಿಯಪ್ಪ ಮಾಳಗಿ, ಕರಬಸಯ್ಯ ಶಂಕರಿಮಠ, ಮೂರ್ತಿ ತಯಾರಕ ಶಿಲ್ಪಿ ಜೇವನ್‍ಟಿ.ಡಿ, ಮಂಜುನಾಥ ನರಸಗೊಂಡರ, ಸಿದ್ದು ಚಿಕ್ಕಬಿದರಿ ಇತರರು ಭಾಗವಹಿಸಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ