ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದ ಜಮಖಂಡಿ ಸಿಟಿಇ ಸಹ ನಿರ್ದೇಶಕ
ವಿಜ್ಞಾನ ಮಾದರಿಗಳು ಮೂಢನಂಬಿಕೆ ಹೋಗಲಾಡಿಸಿ, ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಿರಬೇಕು ಎಂದು ಜಮಖಂಡಿ ಸಿಟಿಇ ಸಹ ನಿರ್ದೇಶಕ ವೈ.ಬಿ. ಬಾದವಾಡಗಿ ಹೇಳಿದರು.
ನಗರದ ಶಾಸ್ತ್ರೀಜಿ ಬಿಇಡಿ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸ ನೀಡಿದ ಪ್ರಾಚಾರ್ಯ ಈಶ್ವರ ಪಟ್ಟಣಶೆಟ್ಟಿ, ಜಲಜನಕ ಇಂಧನ ಹಾಗೂ ಗುರುತ್ವಾಕರ್ಷಣೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಅಧಿಕಾರಿ ಜಿ.ಡಿ. ದಾಸರ, ಪೌಷ್ಟಿಕ ಆಹಾರದ ಮಹತ್ವ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕೆ.ಡಿ. ಬಡಿಗೇರ, ನಂಬಿಕೆ ಇರಲಿ, ಮೂಢನಂಬಿಕೆ ಬೇಡ ಎಂದರು. ಇದೇ ವೇಳೆ ವೈ.ಬಿ. ಬಾದವಾಡಗಿ, ಕೆ.ಡಿ. ಬಡಿಗೇರ ಹಾಗೂ ಜಿ.ಡಿ. ದಾಸರ ಅವರನ್ನು ಸನ್ಮಾನಿಸಲಾಯಿತು.
ವೈಯಕ್ತಿಕ ವಿಭಾಗ: ನರಗುಂದ ಎ.ಬಿ. ಲಯನ್ಸ್ ಶಾಲೆ (ಪ್ರಥಮ), ಇಟಗಿ ಪಿಎಂ ಶ್ರೀ ಆದರ್ಶ ವಿದ್ಯಾಲಯ (ದ್ವಿತೀಯ), ಹಳ್ಳಿಗುಡಿ ಸರ್ಕಾರಿ ಪ್ರೌಢಶಾಲೆ (ತೃತೀಯ). ಗುಂಪು ವಿಭಾಗ: ಗಜೇಂದ್ರಗಡ ಓಂ ಸಾಯಿ ಶಾಲೆ (ಪ್ರಥಮ), ಹೆಸರೂರ ಸರ್ಕಾರಿ ಪ್ರೌಢಶಾಲೆ (ದ್ವಿತೀಯ), ಶಿರಂಜ ಸರ್ಕಾರಿ ಪ್ರೌಢಶಾಲೆ (ತೃತೀಯ). ಶಿಕ್ಷಕರ ವಿಭಾಗ: ಜಯಶ್ರೀ ಕುಂದರಗಿ (ಅಂತೂರಬಾದವಾಡಗಿ ಸ.ಪ್ರೌ. ಶಾಲೆ).