ಕನ್ನಡಪ್ರಭ ವಾರ್ತೆ ಮಂಡ್ಯ
ವಿಕಲಚೇತನರಲ್ಲಿ ಅಗಾಧ ಶಕ್ತಿ ಇದ್ದು ಉನ್ನತ ಸೌಕರ್ಯ ಕಲ್ಪಿಸಿದ್ದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ನಗರಸಭೆ ಅಧ್ಯಕ್ಷ ಎಂ.ವಿ ಪ್ರಕಾಶ್ (ನಾಗೇಶ್) ಹೇಳಿದರು.ಗಾಂಧಿನಗರದ ವಿಶೇಷ ಚೇತನರ ಕಚೇರಿಯಲ್ಲಿ ಸ್ನೇಹ ಚಾರಿಟಬಲ್ ಟ್ರಸ್ಟ್ ಅಂಧರು ಮತ್ತು ವಿಶೇಷ ಚೇತನರಿಗೆ ಉಚಿತ ಕಂಪ್ಯೂಟರ್ ಸಂಗೀತ ತರಬೇತಿಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಚೇತನರಿಗೆ ಹಲವು ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿ ಜಾಗೃತಿ ಮೂಡಿಸುತ್ತಿದೆ ಸರ್ಕಾರದ ಸೌಲಭ್ಯವನ್ನು ಫಲಾನುಭವಿಗಳಿಗೆ ಸಿಗುವ ಹಾಗೆ ಎಲ್ಲರೂ ಗಮನ ಹರಿಸಬೇಕು. ಇದರಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿದಂತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಅರುಣ್ ಕುಮಾರ್ ಸ್ನೇಹ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ಸುಧೀರ್ ಕುಮಾರ್, ರೋಟರಿ ಅಧ್ಯಕ್ಷ ರಾಜೇಶ್, ಸ್ನೇಹ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಮಹೇಶ್, ಸದಸ್ಯರಾದ ಮಂಜು, ವಿನುತಾ, ಸೌಮ್ಯ, ಭಾಗ್ಯಮ್ಮ, ಶೃತಿ, ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ ಬಿ.ಎಸ್.ಅನುಪಮ ಭಾಗವಹಿಸಿದ್ದರು.
ಇಂದು ವಿದ್ಯುತ್ ವ್ಯತ್ಯಯಮಂಡ್ಯ:
ತಾಲೂಕಿನ ವಿ.ಸಿ.ಫಾರ್ಮ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-7 ಚಂದಗಾಲು, ಎನ್ ಜೆವೈ ಫೀಡರ್‌ನಲ್ಲಿ ತುರ್ತು ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜ.9 ರಂದು ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ವಿ.ಸಿ.ಫಾರ್ಮ್ ವಿದ್ಯುತ್ ವಿತರಣಾ ಕೇಂದ್ರದ ಎಫ್ 7 ಚಂದಗಾಲು ಎನ್ ಜೆವೈ ಫೀಡರ್‌ನ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ಚಂದಗಾಲು, ಮಲ್ಲನಾಯಕನಕಟ್ಟೆ, ಗಾಣದಾಳು, ಬಿಳಿಗುಲಿ, ವಡ್ಡರಹಳ್ಳಿಕೊಪ್ಪಲು, ಕುರಿಕೊಪ್ಪಲು, ಪುಟ್ಟಿಕೊಪ್ಪಲು, ಮಾರಚಾಕನಹಳ್ಳಿ, ಮಾದೇಗೌಡನಕೊಪ್ಪಲು, ಚಿಕ್ಕಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳುವುದರಿಂದ ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.ನಾಳೆ ಉದ್ಯೋಗಾಕಾಂಕ್ಷಿತರ ನೇರ ಸಂದರ್ಶನಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಮಣಪುರಂ ಫೈನಾನ್ಸ್ ಲಿ., ಮೆ.ಸ್ಟೋರ್‌ಕಿಂಗ್ & ಮೆ.ಭರತ್ ಫೈನಾನ್‌ಷಿಯಲ್ ಇನ್‌ಕ್ಲೂಷನ್ ಲಿ, ಸಂಸ್ಥೆಗಳ ಸಹಯೋಗದಲ್ಲಿ ನೇರಸಂದರ್ಶನ ನಡೆಯಲಿದೆ. ತಮ್ಮ ಸಂಸ್ಥೆಯಲ್ಲಿ ಖಾಲಿಯಿರುವ ಸೇಲ್ಸ್ ಎಕ್ಸಿಕ್ಯೂಟಿವ್, ಸ್ಟೋರ್ ಇನ್‌ಚಾರ್ಜ್, ಅಸೋಸಿಯೇಟ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಯಾವುದೇ ಪದವಿ & ಸ್ನಾತಕೊತ್ತರ ಪದವಿ ಉತ್ತೀರ್ಣರಾದ 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಜ.10 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಆರ್ ಟಿಒ ಕಚೇರಿ ಎದುರು ಇಲ್ಲಿ ತಮ್ಮ ರೆಸ್ಯೂಮೆ/ ಬಯೋಡೇಟಾಗಳೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಿ ಉದ್ಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ-08232-295124, ಮೊ-9164642684, ಮೊ-8970646629, ಮೊ-8660061488ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.