ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಭವಿಷ್ಯ ರೂಪಿಸಿಕೊಳ್ಳಲಿ: ಜೆ.ಆರ್‌. ಬಾಳೇರಿ

KannadaprabhaNewsNetwork | Published : Mar 12, 2025 12:47 AM

ಸಾರಾಂಶ

ವಿದ್ಯಾರ್ಥಿ ಜೀವನ ಅಮೂಲ್ಯ. ಅದರಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ತಮ್ಮ ಜೀವನದ ದಿಕ್ಕನ್ನು ಬದಲಿಸುವ ಸಂದರ್ಭ. ಈ ಹಿನ್ನೆಲೆಯಲ್ಲಿ ಉತ್ತಮ ಅಂಕ ಪಡೆದು ಉತ್ತಮ ಭವಿಷ್ಯ ಕಂಡುಕೊಳ್ಳಲು ಮನಗುಂಡಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಜೆ.ಆರ್‌. ಬಾಳೇರಿ ಹೇಳಿದರು.

ಧಾರವಾಡ: ವಿದ್ಯಾರ್ಥಿ ಜೀವನ ಅಮೂಲ್ಯ. ಅದರಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ತಮ್ಮ ಜೀವನದ ದಿಕ್ಕನ್ನು ಬದಲಿಸುವ ಸಂದರ್ಭ. ಈ ಹಿನ್ನೆಲೆಯಲ್ಲಿ ಉತ್ತಮ ಅಂಕ ಪಡೆದು ಉತ್ತಮ ಭವಿಷ್ಯ ಕಂಡುಕೊಳ್ಳಲು ಮನಗುಂಡಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಜೆ.ಆರ್‌. ಬಾಳೇರಿ ಹೇಳಿದರು.

ಮನಗುಂಡಿ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿ ಎಷ್ಟೇ ಜಾಣ ಇದ್ದರೂ ಆತನಲ್ಲಿ ಉತ್ತಮ ನಡೆ-ನುಡಿ ಇಲ್ಲದೇ ಹೋದಲ್ಲಿ ಜಾಣತನ ಶೂನ್ಯವಾಗುತ್ತದೆ. ಉತ್ತಮ ಅಂಕ ಜೀವನಕ್ಕೆ ನೆರವಾದರೆ, ಉತ್ತಮ ಮೌಲ್ಯ ಬದುಕನ್ನು ರೂಪಿಸುವುದು. ಗುರು ಹಿರಿಯರ ಮಾತು ಪಾಲಿಸಿ ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಬದುಕು ನಿರ್ವಹಿಸಿ ಎಂದರು.

ಇದೇ ವೇಳೆ ಕಳೆದ ವರ್ಷ ವಾರ್ಷೀಕ ಪರೀಕ್ಷೆಯಲ್ಲಿ ಎಂಟು, ಒಂಬತ್ತು , ಹತ್ತನೆಯ ತರಗತಿಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಸ್ಫೂರ್ತಿ ಬಡಿಗೇರ, ಚೇತನಾ ಸಂಕೀನ, ಚೈತ್ರಾ ವಾಲೀಕಾರ, ಕಲ್ಮೇಶ ಹೊಸಂಗಡಿ, ಸಿದ್ದಲಿಂಗ ಗುಂಡಗೋವಿ, ಸೃಷ್ಟಿ ಮರಿತಮ್ಮನವರ, ಅನ್ನಪೂರ್ಣಾ ಹೊಸಂಗಡಿ, ವಿಜಯಲಕ್ಷ್ಮೀ ದುಪ್ಲಾಪೂರ, ಸವಿತಾ ಗಂಡೂಡಿ ಅವರಿಗೆ ಪ್ರೋತ್ಸಾಹಕವಾಗಿ ಬಹುಮಾನ ನೀಡಲಾಯಿತು. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 100ಕ್ಕೆ 100 ಪೂರ್ಣಾಂಕ ಗಳಿಸಿ ವಿಶೇಷ ಸಾಧನೆ ಮಾಡಿದ ವಿಜಯಲಕ್ಷ್ಮೀ ದುಪ್ಲಾಪೂರ, ಉಮಾ ಗೋರೋಜನವರ, ಸವಿತಾ ಗಂಡೂಡಿ, ಸವಿತಾ ಮುಶೆಲ್ಲನವರ, ಕಲ್ಪನಾ ರಾಮಣ್ಣಿಯವರ, ಆಕಾಶ ದುಪ್ಲಾಪೂರ, ಪ್ರಿಯಾಂಕ ಹುತ್ತಕ್ಕನವರಗೆ ಕನ್ನಡ ವಿಷಯ ಬೋಧಕ ರಂಗನಾಥ ವಾಲ್ಮೀಕಿ ಪ್ರತಿ ವಿದ್ಯಾರ್ಥಿಗಳಿಗೆ ತಲಾ ₹1000 ಪ್ರೋತ್ಸಾಹದಾಯಕ ನಗದು ನೀಡಿದರು.

ಬದುಕಿನಲ್ಲಿ ಸಂಕಷ್ಟಗಳು ಎಲ್ಲರಿಗೂ ಬರುತ್ತವೆ. ಕಷ್ಟ ನಷ್ಟ ಏನೇ ಬರಲಿ ಸಮಚಿತ್ತದಿಂದ ಎದುರಿಸಬೇಕು. ಉತ್ತಮ ಅಂಕ ಗಳಿಸುವುದಷ್ಟೇ ಅಲ್ಲದೇ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಸಾಧಕನಿಗೆ ಗೌರವ ಅಧಿಕ. ಹೀಗಾಗಿ, ನಾವು ಸಾಧನಾ ಪಥದಲ್ಲಿ ಸಾಗಬೇಕು. ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳದೇ ನಮ್ಮ ಸಾಧನೆಯನ್ನು ಉನ್ನತೀಕರಿಸುತ್ತ ಹೋಗಬೇಕು ಎಂಬ ಸಲಹೆ ಸಹ ನೀಡಿದರು.

ಶಿಕ್ಷಕರಾದ ಉಷಾ ಶಿವಣ್ಣನವರ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಶ್ರದ್ಧೆಯಿಂದ ಅಧ್ಯಯನದಲ್ಲಿ ತೊಡಗಿ ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿದರು. ಇದಕ್ಕೂ ಮುನ್ನ ಶಾಲಾ ಮಕ್ಕಳು ಅನಿಸಿಕೆ ವ್ಯಕ್ತಪಡಿಸಿದರು. ವರ್ಗವಾದ ರವಿ ಕೆಲೂಡಿ ಅವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಆಲೂರ, ಸದಸ್ಯರಾದ ಬಸವರಾಜ ಗುಂಡಗೋವಿ, ಬಿ.ಪಿ. ಜೋಶಿ, ಪ್ರಮೋದ ವಾದಿರಾಜ, ಸಿ.ಸಿ. ಹಿರೇಮಠ, ಎಸ್.ಜೆ. ಜೋಶಿ, ಎನ್.ಜಿ. ಭಾಗವಾನ್ ಇದ್ದರು.

Share this article