ಚಿತ್ರದುರ್ಗ: ಶಿಕ್ಷಣ ಸಂಸ್ಥೆಗಳು ಯಾವ ಮಟ್ಟದಲ್ಲಿ ಹಾಳಾಗುತ್ತಿದೆ. ಹೇಗೆ ಬೆಳೆಯುತ್ತಿದೆ ಎನ್ನುವುದರ ಕಡೆ ನಿಗಾ ಇಡಲು ನ್ಯಾಕ್ ಕಮಿಟಿಯ ಪಾತ್ರ ದೊಡ್ಡದು ಎಂದು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.ನ್ಯಾಕ್-ಬೈನರಿ ಅಕ್ರಿಡೇಷನ್ ಫ್ರೇಂ ವರ್ಕ್ ಅಂಡ್ ರಿಫಾರಮ್ಸ್-2024 ಕುರಿತು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಗಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆ ಮಾನವೀಯತೆ, ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದರು.1983-84ರಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಆರಂಭಗೊಂಡಿತು. 42 ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರ ಹಿಂದೆ ಸಂಸ್ಥೆಯ ಸಂಸ್ಥಾಪಕರಾದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರ ಪರಿಶ್ರಮ ಅಪಾರ. ಐದು ಸಾವಿರ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿದ್ದಾರೆ. ಬಿ.ಎ., ಬಿ.ಕಾಂ, ಬಿಸಿಎ. ಬಿಬಿಎ. ಫಾರ್ಮಸಿ, ಎಂ.ಫಾರ್ಮ, ನರ್ಸಿಂಗ್ ಆಯುರ್ವೇದಿಕ್ ಕಾಲೇಜು ನಮ್ಮ ಸಂಸ್ಥೆಯಡಿಯಲ್ಲಿ ನಡೆಸುತ್ತಿರುವುದು ಸುಲಭವಲ್ಲ ಎಂದರು.
ಬೇರೆ ಕಾಲೇಜುಗಳಿಗೆ ಹೋಲಿಸಿದರೆ ಬಿ.ಇ.ಡಿ. ಕಾಲೇಜುಗಳಿಗೆ ನ್ಯಾಕ್ ತುಂಬಾ ಸುಲಭ. ಬೈನರಿ ಪದ್ಧತಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಬೆಳೆಯಲು ನ್ಯಾಕ್ ಬೇಕು ಎಂದರು.
ಮಕ್ಕಳಿಗೆ ಪಾಠ ಮಾಡುವಾಗ ಗುರಿ ತಲುಪುತ್ತಿದ್ದೇವೆಯೆ ಎನ್ನುವ ಕಡೆ ಶಿಕ್ಷಕರು ಯೋಚಿಸಬೇಕು. ಇಂದಿನ ಯುಗದಲ್ಲಿ ಮಕ್ಕಳಿಗೆ ಕೌಶಲ್ಯಯುತ ಶಿಕ್ಷಣ ಮುಖ್ಯ. ಬಿ.ಇ.ಡಿ. ಶಿಕ್ಷಣ ಮುಗಿಸಿ ಮಕ್ಕಳ ಎದುರು ನಿಲ್ಲದಿದ್ದರೆ ಅಂತಹ ಶಿಕ್ಷಣ ಪ್ರಯೋಜನವಿಲ್ಲ. ಶಿಕ್ಷಣಕ್ಕೂ ಕೌಶಲ್ಯಕ್ಕೂ ವ್ಯತ್ಯಾಸವಿದೆ. ಫೀಡ್ ಬ್ಯಾಕ್ ಪದ್ಧತಿ ಜಾರಿಯಲ್ಲಿರುವುದರಿಂದ ಕೆಲವು ಸಂಸ್ಥೆಗಳು ನ್ಯಾಕ್ ಪದ್ಧತಿಯನ್ನು ಗಂಭೀರವಾಗಿ ತೆಗೆದುಕೊಂಡಿವೆ ಎಂದು ತಿಳಿಸಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ರಿಜಿಸ್ಟರ್ ಡಾ.ರಮೇಶ್.ಸಿ.ಕೆ. ಸಮ್ಮೇಳನದ ಸಂಯೋಜಕ ಪ್ರೊ.ಆರ್.ಎಸ್.ರಾಜು, ಐ.ಕ್ಯೂ.ಎ.ಸಿ.ಸಂಯೋಜಕರಾದ ಡಾ.ಎಚ್.ಎಸ್.ಬದ್ರಿ, ನ್ಯಾಕ್‍ನ್ ಫಾರ್ಮರ್ ಡೆಪ್ಯೂಟಿ ಸೆಕ್ರೆಟರಿ ಡಾ.ಎಸ್.ಶ್ರೀನಿವಾಸ್ ಮಾತನಾಡಿದರು.ಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಿ.ಸಿ.ಅನಂತರಾಮು ಅಧ್ಯಕ್ಷತೆ ವಹಿಸಿದ್ದರು.