ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಾಮಪುರ ಶ್ರೀನೀಲಕಂಠೇಶ್ವರ ಮಠದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ ರಬಕವಿ-ಬನಹಟ್ಟಿ, ಕಸಾಪ ತೇರದಾಳ-ಮಹಾಲಿಂಗಪುರ ವಲಯಗಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-25, ಬೆಳ್ಳಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿ, ಅಲಕ್ಷಿತ ಕಲಾವಿದರು, ಸಾಹಿತಿಗಳು, ಯುವ ಬರಹಗಾರರನ್ನು ಗುರುತಿಸಿ ವೇದಿಕೆ ಕಲ್ಪಿಸಲು ಕಸಾಪ ಬದ್ಧವಾಗಿದೆ. ಜಿಲ್ಲಾದ್ಯಂತ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಧೋಳದ ಹಿರಿಯ ಜಾನಪದ ಸಾಹಿತಿ ಡಾ.ಸಿದ್ದು ದಿವಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕಗಳು ಜೀವನದಲ್ಲಿ ಹೊಸ ಆಯಾಮ ಸೃಷ್ಟಿಸುತ್ತವೆ. ಪುಸ್ತಕಾವಲೋಕನ ಸ್ತುತ್ಯಾರ್ಹವಾಗಿದೆ. ಇದು ನಿರಂತರ ನಡೆಯಬೇಕೆಂದು ಹೇಳಿದರು.ಬನಹಟ್ಟಿಯ ಕಥೆಗಾರರಾದ ಆನಂದ ಕುಂಚನೂರ ವಸುಧೇಂದ್ರರ ಕೃತಿ ತೇಜೋ ತುಂಗಭದ್ರಾ ಅವಲೋಕಿಸಿದರು. ಗುರುರಾಜ ಖಾಸನೀಸ್, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟಮಠ ಸಂವಾದ ನಡೆಸಿದರು.ಹಿರಿಯರು, ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವಪ್ರಭು ಹಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಾಹಿತಿಗಳಾದ ಜಿ.ಎಸ್. ವಡಗಾಂವಿ, ಶಿವಾನಂದ ದಾಶಾಳ, ಶಿವಜಾತ ಉಮದಿ, ಮಲ್ಲಿಕಾರ್ಜುನ ಹುಲಗಬಾಳಿ, ಮಲಕಪ್ಪ ಜವಳಗಿ, ಗುರುನಾಥ ಸುತಾರ, ಕನ್ನಡಪರ ಹೋರಾಟಗಾರ ಚಿದಾನಂದ ಸೊಲ್ಲಾಪುರ, ಮಲ್ಲಪ್ಪ ಗಣಿ, ಮಹೇಶ ಮನ್ನಯ್ಯನವರಮಠ, ದಾನಪ್ಪ ಆಸಂಗಿ, ಎನ್.ಎನ್. ಕವಟಗಿ, ಶಿವಾನಂದ ಕೊಳಕಿ, ಈರಣ್ಣ ಬಾಣಕಾರ, ಮಹಾಲಿಂಗ ತೆಳಗಿನಮನಿ, ಮಹಾಲಿಂಗ ಘಂಟಿ, ಇಲಾಹಿ ಜಮಖಂಡಿ, ಕೆ.ಎಸ್. ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.