ಶಾಲಾ ಶೌಚಾಲಯಗಳ ಸ್ವಚ್ಛತೆಗೆ ಗ್ರಾಪಂಗಳು ಕೈಜೋಡಿಸಲಿ-ಶಾಸಕ ಪಠಾಣ

KannadaprabhaNewsNetwork |  
Published : Dec 26, 2024, 01:02 AM IST
ಪೊಟೋ ಪೈಲ್ ನೇಮ್ ೨೫ಎಸ್‌ಜಿವಿ೧      ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ ಶಾಸಕ ಯಾಸೀರಾಹ್ಮದಖಾನ್ ಪಠಾಣ ಮಾತನಾಡಿದವರು೨೫ಎಸ್‌ಜಿವಿ೧-೧ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ  ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಮಾತನಾಡಿದವರು೨೫ಎಸ್‌ಜಿವಿ೧-೨ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ  ಸಿಡಿಪಿಓ ಗಣೇಶ  ಮಾಹಿತಿ ಹೇಳಲು ತಡವಡಿಸಿದರು ಅಧಿಕಾರಿಗಳು ಇದ್ದರು. ೨೫ಎಸ್‌ಜಿವಿ೧-೩     ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಹುನುಗುಂದ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆರೋಗ್ಯ ಇಲಾಖೆಯಲ್ಲಿ ಸಮಿತಿಯ ಸಭೆಗಳು ನಿರಂತರವಾಗಿ ನಡೆಯಬೇಕು, ಶಾಲೆಗಳ ಶೌಚಾಲಯಗಳ ಸ್ವಚ್ಛತೆ ಕಾಪಾಡುವಲ್ಲಿ ಗ್ರಾಪಂಗಳು ಕೈಜೋಡಿಸಬೇಕು. ಪುರಸಭೆಗಳು ಕೊಳಚೆ ಪ್ರದೇಶಗಳತ್ತ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಯಾಸೀರ್‌ ಅಹ್ಮದಖಾನ್ ಪಠಾಣ ಹೇಳಿದರು.

ಶಿಗ್ಗಾಂವಿ: ಆರೋಗ್ಯ ಇಲಾಖೆಯಲ್ಲಿ ಸಮಿತಿಯ ಸಭೆಗಳು ನಿರಂತರವಾಗಿ ನಡೆಯಬೇಕು, ಶಾಲೆಗಳ ಶೌಚಾಲಯಗಳ ಸ್ವಚ್ಛತೆ ಕಾಪಾಡುವಲ್ಲಿ ಗ್ರಾಪಂಗಳು ಕೈಜೋಡಿಸಬೇಕು. ಪುರಸಭೆಗಳು ಕೊಳಚೆ ಪ್ರದೇಶಗಳತ್ತ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಯಾಸೀರ್‌ ಅಹ್ಮದಖಾನ್ ಪಠಾಣ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಕೆಡಿಪಿ ಸಭೆಯನ್ನು ನಿರ್ಲಕ್ಷಿಸುವ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ದ್ರೋಹ ಮಾಡಿದಂತೆ. ಆದ್ದರಿಂದ ಮಾಸಿಕ ಸಭೆ ಮಾಡುವ ಮೂಲಕ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತ ವ್ಯವಸ್ಥೆ ಉತ್ತಮಗೊಳಿಸುವ ಮೂಲಕ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ತುರ್ತುಗತಿಯಲ್ಲಿ ಮುಟ್ಟಿಸುವ ಹಾಗೂ ಸರ್ಕಾರದ ಹೊಸ ಯೋಜನೆಗಳ ಮಾಹಿತಿ ಉದ್ದೇಶವಾಗಿದೆ ಎಂದರು.

ಸರ್ಕಾರಿ ಶಾಲೆಗಳ ಶಿಕ್ಷಕರು ಮೆರಿಟ್‌ನಲ್ಲಿ ಆಯ್ಕೆಯಾಗಿ ಶಿಕ್ಷಕ ವೃತ್ತಿ ಪಡೆದಿರುತ್ತಾರೆ. ಆದರೆ ಅವರ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ತೆಗೆಯುವಲ್ಲಿ ವಿಫಲರಾಗಿದ್ದಾರೆ. ಗರಿಷ್ಠ ಸಂಬಳ ಪಡೆದು ಕನಿಷ್ಠ ಸೇವೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದ್ದು, ತಾಲೂಕಿನಲ್ಲಿ ಬಹುತೇಕ ಶಿಕ್ಷಕರು ಎಲ್‌ಐಸಿ ಏಜೆಂಟರು, ಗುಂಪುಗಳನ್ನು ಕಟ್ಟಿಕೊಂಡು ರಾಜಕೀಯ ಮಾಡುವುದಾದರೇ ತಕ್ಷಣ ಸ್ವಯಂ ನಿವೃತ್ತಿ ಪಡೆದುಕೊಂಡು ರಾಜಕೀಯ ಮಾಡಲಿ ಎಂದರು.

ನರೇಗಾ ಯೋಜನೆಯ ಕಾಮಗಾರಿಗಳ ಪ್ರಗತಿ ಕುಂಠಿತವಾಗಿದ್ದು, ಚುರುಕು ಪಡೆಯಬೇಕಾಗಿದೆ. ಹುಲಗೂರು ಗ್ರಾಮಕ್ಕೆ ಮೌಲಾನಾ ಆಜಾದ ಶಾಲೆಯನ್ನು ಸರ್ಕಾರ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವೇಶನ ನಿಗದಿಯಾಗಿಲ್ಲ. ಅಂಗನವಾಡಿ ಕಟ್ಟಡಗಳನ್ನು ಕಟ್ಟಲು ನಿವೇಶನಗಳನ್ನು ನಿಯೋಗ ಮಾಡಲಾಗುತ್ತದೆ. ಶಾಲಾ ಆವರಣಗಳ ಪಕ್ಕದಲ್ಲಿರುವ ಟಿಸಿಗಳನ್ನು ಹೆಸ್ಕಾಂ ಇಲಾಖೆ ಸ್ಥಳಾಂತರಿಸಬೇಕು ಮತ್ತು ರೈತರ ಹೊಸ ಬೋರ್ ವೆಲ್‌ಗಳಿಗೆ ತೊಂದರೆಯಾಗದಂತೆ ಟಿಸಿ ಸಾಮರ್ಥ್ಯ ಹೆಚ್ಚಿಸಬೇಕು.

ತೋಟಗಾರಿಕಾ ಇಲಾಖೆಯಲ್ಲಿ ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಲ್ಲಿ ೧.೧೩ ಕೋಟಿ ಹಣವಿದ್ದು, ಇಲಾಖೆ ಸರಿಯಾದ ಫಲಾನುಭವಿಗಳನ್ನು ಹುಡುಕಿ ಯೋಜನೆಯನ್ನು ತಲುಪಿಸದ ಕಾರಣ ೪೮.೭೨ ಲಕ್ಷ ಮಾತ್ರ ಬಳಕೆಯಾಗಿದೆ.ಕೃಷಿ ಬೆಳೆ ವಿಮೆ ವಿಷಯದಲ್ಲಿ ಕೆಲವು ವ್ಯಕ್ತಿಗಳು ರೈತರನ್ನು ಬೆಳೆ ಪೆರಿಹಾರ ಹಾಗೂ ಬೆಳೆ ವಿಮೆಗೆ ಏಜೆಂಟರುಗಳು ಹೇಳಿದಂಗ ಕೇಳುವಂತಾಗಿದೆ ಅಲ್ಲದೆ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದು, ಕೃಷಿ ಸಹಾಯಕ ನಿರ್ದೇಶಕರು ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅಂತವರ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಪ್ರಗತಿ ಕಾಮಗಾರಿಗಳಲ್ಲಿ ಇನ್ನು ಬಹಳಷ್ಟು ಸಮಸ್ಯೆಗಳಿದ್ದು, ಕೆಲ ಇಲಾಖೆಗಳ ಪ್ರಗತಿ ಪರಿಶೀಲಿಸಲು ಹಿರಿಯ ಅಧಿಕಾರಿಗಳ ನಿಯೋಗ ಪರಿಶೀಲನೆಯನ್ನು ಮಾಡುವ ಮೂಲಕ ಚುರುಕು ಮುಟ್ಟಿಸಲಾಗುವುದು ಎಂದು ಹೇಳಿದರು. ಇಲಾಖೆ ಅಧಿಕಾರಿಗಳನ್ನು ಕಚೇರಿಗೆ ಹೋಗಿ ಸಂಪೂರ್ಣ ಮಾಹಿತಿ ತರುವಂತೆ ಪ್ರಾರಂಭದಲ್ಲಿ ಆದೇಶಿಸಿದ ಶಾಸಕ ಯಾಸೀರಖಾನ ಪಠಾಣ ಸಂಜೆವರೆಗೂ ಕಾದುಕುಳಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕೆಲವು ತಾಲೂಕು ಅಧಿಕಾರಿಗಳು ಕಚೇರಿಗಳಲ್ಲಿ ಫೈಲ್‌ಗಳನ್ನು ಹುಡುಕಲು ಹೆಣಗಾಡಿದ ಘಟನೆಗಳು ಜರುಗಿದವು.ಇದೆ ಸಂದರ್ಭದಲ್ಲಿ ತಾಲೂಕಿನ ಹುನುಗುಂದ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.ಸವಣೂರ ಉಪ ವಿಭಾಗಾಧಿಕಾರಿ ಮಮ್ಮದ ಖೀಜರ, ತಾ.ಪಂ. ಆಡಳಿತಾಧಿಕಾರಿ, ತಹಸೀಲ್ದಾರ್ ಮಲ್ಲಿಕಾರ್ಜುನ, ಇಒ ಕುಮಾರ ಮಣ್ಣನ್ನವರ, ಎಸ್.ಎಫ್. ಮಣಕಟ್ಟಿ ಗುಡ್ಡಪ್ಪಾಜಲದಿ, ಬಾಬರ ಬಾವೂಜಿ, ಪರಶುರಾಮ ಕಟ್ಟೆಪ್ಪನವರ, ಬಸವರಾಜ ರಾಗಿ, ಕವಿತಾ ಮಲ್ಲಾಪೂರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ