ಗದಗ-ವಾಡಿ ರೈಲು ತಪ್ಪಿದಂತೆ, ನೀರಿನ ಯೋಜನೆ ಕೈ ತಪ್ಪದಿರಲಿ

KannadaprabhaNewsNetwork |  
Published : Oct 31, 2026, 02:30 AM IST
ಯೋಜನೆಯ ತಾಂತ್ರಿಕ ರೂಪರೇಶಗಳು | Kannada Prabha

ಸಾರಾಂಶ

ಕೃಷ್ಣಾ ಬಿ ಸ್ಕೀಂ ೩ನೇ ಹಂತ ಕೊಪ್ಪಳ ಏತ ನೀರಾವರಿ ಯೋಜನೆ ಅಡಿ ತಾಲೂಕಿನ ಕೆರೆಗಳನ್ನು ತುಂಬಿಸಬೇಕು ಎಂಬು ಕೂಗು ಹಿಂದಿಗಿಂತಲೂ ಈಗ ಜೋರಾಗಿದ್ದು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ಕೆರೆಗಳನ್ನು ತುಂಬಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ತಾಲೂಕಿನಾದ್ಯಂತ ಬಲವಾದ ಆಗ್ರಹ । ಸಾರ್ವಜನಿಕ ವಲಯದಲ್ಲಿ ಚರ್ಚೆ, ಕೆರೆ ತುಂಬಿಸಲು ಒತ್ತಾಯ

ಎಸ್.ಎಂ.ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಕೃಷ್ಣಾ ಬಿ ಸ್ಕೀಂ ೩ನೇ ಹಂತ ಕೊಪ್ಪಳ ಏತ ನೀರಾವರಿ ಯೋಜನೆ ಅಡಿ ತಾಲೂಕಿನ ಕೆರೆಗಳನ್ನು ತುಂಬಿಸಬೇಕು ಎಂಬು ಕೂಗು ಹಿಂದಿಗಿಂತಲೂ ಈಗ ಜೋರಾಗಿದ್ದು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ಕೆರೆಗಳನ್ನು ತುಂಬಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಈ ಹಿಂದೆ ಗದಗ-ವಾಡಿ ರೈಲು ಮಾರ್ಗ ತಾಲೂಕಿನಿಂದ ಕೈ ತಪ್ಪಿದಂತೆ, ಈ ಯೋಜನೆಯೂ ತಪ್ಪದಿರಲಿ ಎಂಬ ಚರ್ಚೆಗಳು ನಡೆಯುತ್ತಿವೆ.

ಪಟ್ಟಣ ಸೇರಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು ಕೈಸುಟ್ಟುಕೊಂಡರೆ ಇತ್ತ ದಿನ ನಿತ್ಯದ ಜೀವನಕ್ಕೆ ನೀರಿಗಾಗಿ ಜನರು ಪಟ್ಟಣದ ಪುರಸಭೆ ಸೇರಿ ವಿವಿಧ ಗ್ರಾಪಂ ಎದುರು ನೀರಿಗಾಗಿ ಹೋರಾಟ ನಡೆಸುವುದು ವಾಡಿಕೆ ಎಂಬಂತಾಗಿದೆ. ತಾಲೂಕಿನ ಕೆರೆಗಳನ್ನು ತುಂಬಿಸಬೇಕು ಎನ್ನುವ ಕೂಗು ಸಹ ಈ ಬಾರಿ ಬಲವಾಗಿದೆ.

ಯೋಜನೆ ಉದ್ಧೇಶ:

ರೋಣ ಮತ್ತು ಗಜೇಂದ್ರಗಡ ಭಾಗದ ಬರಪೀಡಿತ ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಕುಡಿಯುವ ನೀರಿಗಾಗಿ ಮುಖ್ಯ ನಾಲೆಯಿಂದ ಕೆರೆಗಳಿಗೆ ನೀರು ತುಂಬಿಸುವ ಲಿಪ್ಟ್ ಪೈಪ್‌ಲೈನ್ ಮತ್ತು ವಿತರಣಾ ಕಾಲುವೆಗಳ ಜಾಲದ ಕಾಮಗಾರಿ ಕೊನೆಯ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಹಂತ-೩ಕ್ಕೆ ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರ ₹೭೦ ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು ಇದರಲ್ಲಿ ರೋಣ ತಾಲೂಕಿನ ಗಡಿ ಗ್ರಾಮಗಳು ಸಹ ಭಾರೀ ಪ್ರಮಾಣದಲ್ಲಿ ಪ್ರಯೋಜನ ಪಡೆಯಲಿವೆ. ಈಗಾಗಲೇ ಕೊಪ್ಪಳ ಏತ ನೀರಾವರಿ ಯೋಜನೆ ಅಡಿ ಒಟ್ಟು ₹೩೦೦೧.೫೨ ಕೋಟಿ ಅನುಮೋದಿತ ವೆಚ್ಚದಲ್ಲಿ ಈಗಾಗಲೇ (ಸುಮಾರು ಶೇ.೮೮.೪೭ ರಷ್ಟು) ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಹರಿಸುವ ಪರೀಕ್ಷೆಗಳೂ ಯಶಸ್ವಿಯಾಗಿವೆ. ಪರಿಣಾಮ ಕುಷ್ಟಗಿ, ಯಲಬುರ್ಗಾ, ಗಂಗಾವತಿ ಹಾಗೂ ಕನಕಗಿರಿ ಭಾಗದಲ್ಲಿ ಯೋಜನೆಯ ಪ್ರಯೋಜನ ಲಭ್ಯವಾಗಿದೆ. ಆದರೆ ಗಜೇಂದ್ರಗಡ ತಾಲೂಕಿನಲ್ಲಿ ಮಾತ್ರ ಇಂತಹ ಬೆಳವಣಿಗೆ ಕಾಣದ್ದು ಇಲ್ಲಿನ ರೈತರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಆಡಳಿತ ಇತ್ತ ಗಮನ ಹರಿಸಿ ತಾಲೂಕಿನ ಕೆರೆಗಳನ್ನು ತುಂಬಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಬಲವಾದ ಆಗ್ರಹವಾಗಿದೆ.ಈ ಹಿಂದೆ ಜನಪ್ರನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಗದಗ-ವಾಡಿ ರೈಲು ವಾಡಿ ತಪ್ಪಿದಂತೆ, ಈ ಯೋಜನೆಯಲ್ಲಿ ಅನಾಯ್ಯವಾಗದಂತೆ ಎಚ್ಚರಿಕೆ ವಹಿಸಬೇಕು. ಗದಗ ಜಿಲ್ಲೆಗೆ ನೀರಾವರಿ ಯೋಜನೆ ಇಲ್ಲದಂತಾಗಿದೆ. ಹೀಗಾಗಿ ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು ಹಾಗೂ ರೈತರು ಮತ್ತು ಜನರೊಂದಿಗೆ ಚರ್ಚಿಸಿ ಪಕ್ಷಾತೀತವಾಗಿ ಮುಂದಿನ ಹೋರಾಟವನ್ನು ರೂಪಿಸಲಾಗುವುದು.

ಎಂ.ಎಸ್. ಹಡಪದ, ಕಾರ್ಮಿಕ ಮುಖಂಡ

ಕೃಷ್ಣಾ ಬಿ ಸ್ಕೀಂ ೩ನೇ ಹಂತ ಕೊಪ್ಪಳ ಏತ ನೀರಾವರಿ ಯೋಜನೆ ಅಡಿ ತಾಲೂಕಿನ ಕೆರೆಗಳನ್ನು ತುಂಬಿಸಬೇಕು ಎಂಬುದು ನ್ಯಾಯಯುತವಾದ ಬೇಡಿಕೆಯಾಗಿದೆ. ಕೆರೆಗಳು ತುಂಬುವುದರಿಂದ ಎಲ್ಲರಿಗೂ ಸಹ ಲಾಭ ಸಿಗಲಿದೆ. ಹೀಗಾಗಿ ಶಾಸಕರು ನೇತೃತ್ವದಲ್ಲಿ ಯೋಜನೆಯ ಲಾಭ ಶೀಘ್ರದಲ್ಲೇ ಜನರಿಗೆ ತಲುಪಲಿ.

ಅಶೋಕ ಬಾಗಮಾರ ವರ್ತಕರು, ಗಜೇಂದ್ರಗಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ