ಕಲಘಟಗಿ: ಆಧುನಿಕತೆಯ ಭರಾಟೆಯಿಂದ ಹಳ್ಳಿಗಳಲ್ಲಿ ನಾಟಕಗಳು ಕಡಿಮೆಯಾಗುತ್ತಿವೆ. ಇಂದಿನ ಯುವ ಪೀಳಿಗೆ ಗ್ರಾಮೀಣ ಕಲೆ ಉಳಿಸಿಕೊಂಡ ಹೋಗಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಭಾನುವಾರ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಶ್ರೀ ಗಜಾನನ ಕಲಾ ಸಾಂಸ್ಕೃತಿಕ ಸಂಘದ ಐವತ್ತನೇಯ ವರ್ಷದ ಸುವರ್ಣ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಣ್ಣಾಟ, ದೊಡ್ಡಾಟ, ಆನೇಕ ಪೌರಾಣಿಕ ನಾಟಕಗಳು ಸೇರಿದಂತೆ ಸಾಮಾಜಿಕ ನಾಟಕಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ, ಯುವ ಜನತೆ ಮೊಬೈಲ್ ಬಳಕೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾ ದಲ್ಲಿ ಮಗ್ನರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಹಳ್ಳಿಗಳಲ್ಲಿ ಜನರು ಯಾರೂ ಜಾತಿ, ಧರ್ಮಕ್ಕೆ ತಾರತಮ್ಯ ಮಾಡಬೇಡಿ. ಯಾರೂ ರಾಜಕೀಯ ಪಕ್ಷಗಳಿಗೆ ಅಂಟಿಕೊಳ್ಳಬೇಡಿ. ಎಲ್ಲರೂ ಸೇರಿಕೊಂಡರು ಅಭಿವೃದ್ಧಿ ಕೆಲಸದ ಜೊತೆಗೆ ತಾಲೂಕಿನಲ್ಲಿ ಮುಂದಿನ ಭವಿಷ್ಯಕ್ಕಾಗಿ ಈಗಾಗಲೇ ರೂಪರೇಷೆಯ ಯೋಜನೆ ರೂಪಿಸಿ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಿರೇಹೊನ್ನಿಹಳ್ಳಿಯಿಂದ ಉಗ್ನಿಕೇರಿ ರಸ್ತೆ, ಕೆರೆ ನೀರು ತುಂಬಿಸುವ ಯೋಜನೆ, ಹಿರೇಹೊನ್ನಿಹಳ್ಳಿಯಿಂದ ಮುತ್ತಗಿ ರಸ್ತೆ ಮಧ್ಯದಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಸದ್ಯದಲ್ಲೇ ಪ್ರಾರಂಭ ಮಾಡುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ್, ವೈ.ಬಿ. ದಾಸನಕೊಪ್ಪ. ಮಲ್ಲನಗೌಡರ ಪಾಟೀಲ, ಮಂಜುನಾಥ ಮುರಳಿ, ನರೇಶ್ ಮಲೆನಾಡು, ವಿನಾಯಕ ಧನಿಗೊಂಡ, ಗುರುಸಿದ್ದಪ್ಪ ಬಡಿಗೇರ, ಪ್ರಭು ರಾಮನಾಳ, ಸಹದೇವಪ್ಪ ಧನಿಗೊಂಡ, ದ್ಯಾಮಣ ಬಡಿಗೇರ, ಷಣ್ಮುಕಪ್ಪ ಬಡಿಗೇರ, ನಿಂಗಪ್ಪ ಬೆಳಿವಾಲಿ, ಮಂಜು ಲಂಗೋಟಿ, ಮಹದೇವಪ್ಪ ಜಮ್ಮಿಹಾಳ, ಗುರುಲಿಂಗ ಉಣಕಲ್, ಮಲ್ಲಪ್ಪ ಧನಿಗೊಂಡ, ಶಂಕರ ರಾಮನಾಳ, ಶಿವರುದ್ರಪ್ಪ ಧನಿಗೊಂಡ, ಹರಿಶಂಕರ ಮಠದ, ಬಾಬು ಅಂಚಟಗೇರಿ ಶಂಕರ ದಾಸನಕೊಪ್ಪ, ಸೋಮಶೇಖರ ಬೆನ್ನೂರ ಉಪಸ್ಥಿತರಿದ್ದರು.