ಯುವ ಸಮೂಹ ರಕ್ತದಾನಕ್ಕೆ ಮುಂದಾಗಲಿ: ಪೂರ್ಣಿಮಾ

KannadaprabhaNewsNetwork |  
Published : Sep 18, 2025, 01:10 AM IST
17ಕೆಎಂಎನ್‌ಡಿ-4ಮಂಡ್ಯ ಪೇಟೆಬೀದಿಯಲ್ಲಿರುವ ತೇರಾ ಪಂಥ್ ಸಭಾ ಭವನದಲ್ಲಿ ಅಖಿಲ ಭಾರತೀಯ ತೇರಾ ಪಂಥ್ ಯುವಕರ ಪರಿಷತ್ ರಕ್ತದಾನ ಅಮೃತ ಮಹೋತ್ಸವ ಅಂಗವಾಗಿ ರಕ್ತ ಸಂಗ್ರಹಿಸಿ ನೀಡಿತು. | Kannada Prabha

ಸಾರಾಂಶ

ರಕ್ತ ಜೀವ ಉಳಿಸುವ ಸಂಜೀವಿನಿ. ಅಪಘಾತಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುವವರಿಗೆ ಸಕಾಲದಲ್ಲಿ ದೊರೆಯುವ ರಕ್ತ ಅಮೂಲ್ಯ ಜೀವಗಳನ್ನು ಉಳಿಸುತ್ತದೆ. ನಾವು ನೀಡುವಂತಹ ರಕ್ತ ಹಲವು ಜೀವಗಳನ್ನು ಉಳಿಸಿದರೆ ಬದುಕು ಸಾರ್ಥಕಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಕ್ತಕ್ಕೆ ರಕ್ತವೇ ಹೊರತು ಪರ್ಯಾಯ ವಸ್ತು ಯಾವುದೂ ಇಲ್ಲ. ಕೃತಕ ರಕ್ತವನ್ನು ಸೃಷ್ಟಿಸುವುದಕ್ಕೂ ಸಾಧ್ಯವಿಲ್ಲ. ಬೇಡಿಕೆಯಷ್ಟು ರಕ್ತ ಸೃಷ್ಟಿಯಾಗಬೇಕಾದರೆ ಯುವಕರು ಹೆಚ್ಚು ರಕ್ತದಾನ ಮಾಡಲು ಮುಂದಾಗುವಂತೆ ನಗರಸಭೆ ಸದಸ್ಯೆ ಪೂರ್ಣಿಮಾ ಅವರು ತಿಳಿಸಿದರು.

ನಗರದ ಪೇಟೆಬೀದಿಯಲ್ಲಿರುವ ತೇರಾ ಪಂಥ್ ಸಭಾ ಭವನದಲ್ಲಿ ಅಖಿಲ ಭಾರತೀಯ ತೇರಾ ಪಂಥ್ ಯುವಕರ ಪರಿಷತ್ ಇವರ ಆಶ್ರಯದಲ್ಲಿ ವಿಶ್ವದ ಅತಿ ದೊಡ್ಡ ಅಭಿಯಾನ-ರಕ್ತದಾನ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ, ರಕ್ತ ಜೀವ ಉಳಿಸುವ ಸಂಜೀವಿನಿ. ಅಪಘಾತಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುವವರಿಗೆ ಸಕಾಲದಲ್ಲಿ ದೊರೆಯುವ ರಕ್ತ ಅಮೂಲ್ಯ ಜೀವಗಳನ್ನು ಉಳಿಸುತ್ತದೆ. ನಾವು ನೀಡುವಂತಹ ರಕ್ತ ಹಲವು ಜೀವಗಳನ್ನು ಉಳಿಸಿದರೆ ಬದುಕು ಸಾರ್ಥಕಗೊಳ್ಳುತ್ತದೆ ಎಂದರು.

ಆರೋಗ್ಯವಂತ ಮಹಿಳೆ ವರ್ಷಕ್ಕೆ ೨ ಬಾರಿ, ಪುರುಷ ೩ ಬಾರಿ ರಕ್ತದಾನ ಮಾಡಬಹುದು, ಹೆಚ್ಚು ರಕ್ತದಾನ ಮಾಡಿದ ಮಹಾರಕ್ತದಾನಿಗಳು ನಮ್ಮ ನಡುವೆ ಇದ್ದಾರೆ, ಅವರಿಗೆ ಗೌರವ ಸಮರ್ಪಿಸೋಣ ಎಂದರು.

ಯುವಕರ ಪರಿಷತ್ ಉಪಾಧ್ಯಕ್ಷ ಪ್ರವೀಣ್ ಜಿ ಡಕ್, ಇಂದು ವಿಶ್ವದಾದ್ಯಂತ ಅಭಿಯಾನ ನಡೆಯುತ್ತಿದೆ, ೭೫೦೦ ರಕ್ತದಾನ ಶಿಬಿರಗಳು ನಡೆಯುತ್ತಿವೆ, ಹೈದರಬಾದ್‌ನಲ್ಲಿ ೧ ಲಕ್ಷ ಯುನಿಟ್ ರಕ್ತ ಸಂಗ್ರಹ ಕಾರ್ಯ ಆರಂಭಗೊಂಡಿದೆ, ಪ್ರಪಂಚದಲ್ಲಿಯೇ ೫ರಿಂದ ೬ಲಕ್ಷ ಯುನಿಟ್ ರಕ್ತ ಸಂಗ್ರಹ ಗುರಿಯಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತೇರಾ ಪಂತ್ ಯುವಕರ ಪರಿಷತ್ ಅಧ್ಯಕ್ಷ ಸುರೇಶ್ ಬನ್ಸಾಲಿ, ಸ್ಥಾನಿಕ ಅಧ್ಯಕ್ಷ ಮದನ್ ಲಾಲ್ ಜೈನ್, ಮೂರ್ತಿ ಪೂಜೆ ಸಂಘ ಅಧ್ಯಕ್ಷ ಪ್ರಕಾಶ್ ಜಿ. ಕಂಠಾಣಿ, ಯುವಪರಿಷತ್ ಅಧ್ಯಕ್ಷ ಕಮಲೇಶ್ ಗೋಕುರು, ಉಪಾಧ್ಯಕ್ಷ ಪ್ರವೀಣ್ ಜಿ ಡಕ್, ರಾಕೇಶ್ ಬಾನ್ಸಾಲಿ, ಕನ್ವೀನರ್, ಕಿರಣ್ ಬೋರ, ರೋಹಿತ್ ಕೊಠಾರಿ ರಕ್ತ ನಿಧಿ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ