ಶಿವಶರಣರ ವಚನ ಪಾಲನೆಗೆ ಯುವಜನತೆ ಮುಂದಾಗಲಿ

KannadaprabhaNewsNetwork |  
Published : Aug 17, 2026, 02:30 AM IST
ಯಲಬುರ್ಗಾದ ಸಾಯಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಬಸವಾನುಭವ, ಶಿವಶರಣರ ಚಿಂತನಾ ಗೋಷ್ಠಿಯಲ್ಲಿ ಸಾಹಿತಿ ಡಾ. ಶಿವಕುಮಾರ ಮಾಲಿಪಾಟೀಲ್ ಮಾತನಾಡಿದರು. | Kannada Prabha

ಸಾರಾಂಶ

ಬಸವತತ್ವ ಪ್ರತಿಯೊಬ್ಬರೂ ಪಾಲಿಸಬೇಕು. ಶಿವಶರಣರ ವಚನಗಳು ಸಮಾಜ ಸುಧಾರಣೆಗೆ ಪೂರಕ

ಯಲಬುರ್ಗಾ: ಬಸವಾದಿ ಶರಣರ ವಚನಗಳ ಸಾರ ಪ್ರತಿಯೊಬ್ಬರೂ ತಿಳಿದುಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಗಂಗಾವತಿ ಸಾಹಿತಿ ಡಾ. ಶಿವಕುಮಾರ್ ಮಾಲಿಪಾಟೀಲ್ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಬಸವ ಶಿವಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಬಸವಾನುಭವ, ಶಿವಶರಣರ ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಬಸವತತ್ವ ಪ್ರತಿಯೊಬ್ಬರೂ ಪಾಲಿಸಬೇಕು. ಶಿವಶರಣರ ವಚನಗಳು ಸಮಾಜ ಸುಧಾರಣೆಗೆ ಪೂರಕವಾಗಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಎಲ್ಲ ವರ್ಗದ ಜನರ ಕಲ್ಯಾಣ ಹಾಗೂ ಸಮಾನತೆಗಾಗಿ ಬಸವೇಶ್ವರರು ವಚನ ಕ್ರಾಂತಿ ಮಾಡಿದರು. ಹಡಪದ ಅಪ್ಪಣ್ಣ ಹಾಗೂ ಶಂಕರ ದಾಸಿಮಯ್ಯ ವಚನಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಸಂದೇಶ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಗಿಲ್ ವಿಜಯೋತ್ಸವ ಹಾಗೂ ಹಡಪದ ಅಪ್ಪಣ್ಣ, ಶಂಕರ ದಾಸಿಮಯ್ಯ ಜಯಂತಿ ಆಚರಿಸಲಾಯಿತು. ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಜಿಲ್ಲಾ ನಿವೃತ್ತ ಉಪನಿರ್ದೇಶಕ ಶಂಕ್ರಪ್ಪ ಗಾಂಜಿ, ಸಿದ್ದಲಿಂಗಪ್ಪ ಶ್ಯಾಗೋಟಿ, ಗವಿಸಿದ್ದಪ್ಪ ಬನ್ನಿಗೋಳ, ಬುಡ್ನೇಸಾಬ್ ನಾಯಕ, ಮುತ್ತಪ್ಪ ನಾಗನಗೌಡ್ರು, ಬಸವರಾಜ ಮುಳಗುಂದ, ಶಿವಪ್ಪ ಶಾಸ್ತ್ರೀ, ಈರಣ್ಣ ಬಳೂಟಗಿ, ಕೆ. ಬಸವರಾಜ ಗಂಗಾವತಿ, ವಿ.ಬಿ. ಹನುಮಶಟ್ಟಿ, ದೇವಪ್ಪ ವಾಲ್ಮೀಕಿ, ಅಶೋಕ ಮಾಲಿಪಾಟೀಲ, ಅನುಸೂಯಾ ತೆಂಗಿನಕಾಯಿ, ವಿಜಯಲಕ್ಷ್ಮಿ, ರಚನಾ, ಜ್ಯೋತಿ ಪಲ್ಲೇದ್, ಆಶಾರಾಣಿ, ಬಸವರಾಜ ಗುಳಗುಳಿ, ಸಿದ್ದಯ್ಯ ಕೊಣ್ಣೂರ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ