ಯುವ ಸಮುದಾಯ ರಂಗಕಲೆಯಲ್ಲಿ ತೊಡಗಿಕೊಳ್ಳಲಿ

KannadaprabhaNewsNetwork |  
Published : Aug 15, 2024, 01:49 AM IST
ಫೋಟೋವಿವರ- (13ಎಂಎಂಎಚ್‌2) ಮರಿಯಮ್ಮನಹಳ್ಳಿಯ ಅನ್ನದಾನೇಶ್ವರ ಮಠದಲ್ಲಿ ಭಾನುವಾರ ನಡೆದ ಹೊಸಪೇಟೆಯ ಭುವನೇಶ್ವರಿ ಕಲಾ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಸಮೂಹ ನೃತ್ಯ ಹಾಗೂ ನಾನಕ್ಕನೇನ್ ನಿನಗೆ ತಂಗೆ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.  | Kannada Prabha

ಸಾರಾಂಶ

ಊರಿನ ಅನೇಕ ಕಲಾವಿದರು ರಂಗಭೂಮಿ ಮತ್ತು ಮರಿಯಮ್ಮನಹಳ್ಳಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ.

ಮರಿಯಮ್ಮನಹಳ್ಳಿ: ನಾಟಕಗಳು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುತ್ತಿವೆ. ರಂಗಭೂಮಿ ಉಳಿಯಬೇಕಾದರೆ ಇಂದಿನ ಯುವ ಸಮುದಾಯ ರಂಗಕಲೆಯಲ್ಲಿ ತೊಡಗಿಸಿಕೊಂಡು ಪ್ರತಿಭಾವಂತ ಕಲಾವಿದರಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಹೊಸಪೇಟೆಯ ಕಲಾವಿದ ಮುದೇನೂರು ಉಮಾಮಹೇಶ್ವರ ಹೇಳಿದರು.

ಇಲ್ಲಿನ ಅನ್ನದಾನೇಶ್ವರ ಮಠದಲ್ಲಿ ಭಾನುವಾರ ನಡೆದ ಹೊಸಪೇಟೆಯ ಭುವನೇಶ್ವರಿ ಕಲಾ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದಡಿ ಸಮೂಹ ನೃತ್ಯ ಹಾಗೂ ನಾನಕ್ಕನೇನ್ ನಿನಗೆ ತಂಗೆ’ಎಂಬ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮರಿಯಮ್ಮನಹಳ್ಳಿ ಒಂದು ಕಲಾ ಗ್ರಾಮವಾಗಿದ್ದು, ಈ ಊರಿನ ಅನೇಕ ಕಲಾವಿದರು ರಂಗಭೂಮಿ ಮತ್ತು ಮರಿಯಮ್ಮನಹಳ್ಳಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಅವರಂತೆ ಮುಂದಿನ ಪೀಳಿಗೆ ರಂಗಭೂಮಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಯಲಾಟದ ಹಿರಿಯ ಕಲಾವಿದ ಕೆ. ರಾಮಚಂದ್ರಪ್ಪ ಮಾತನಾಡಿದರು. ವೃತ್ತಿ ರಂಗಭೂಮಿಯ ಹಿರಿಯ ರಂಗ ಕಲಾವಿದೆ ಅಕಾರಿ ಚಂದ್ರಮ್ಮ (ಚಂದ್ರಕಲಾ), ಹೊಸಪೇಟೆ ಭರ್ಮಪ್ಪ, ಬಯಲಾಟದ ಕಲಾವಿದ ಡ್ರೈವರ್ ಹನುಮಂತಪ್ಪ, ದೇವಲಾಪುರ ದುರ್ಗಪ್ಪ, ಪತ್ರಕರ್ತ ಸೋಮೇಶ್ ಉಪ್ಪಾರ್, ರಂಗಚೌಕಿ ಕಲಾ ಟ್ರಸ್ಟ್ ಅಧ್ಯಕ್ಷ ಸರದಾರ ಬಿ. ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕೆ. ಕಾಳೇಶ ಮತ್ತು ತಂಡದಿಂದ ಸಮೂಹ ನೃತ್ಯ ಹಾಗೂ ಸರದಾರ ಅವರ ನಿರ್ದೇಶನದಲ್ಲಿ ’ನಾನಕ್ಕನೇನ್ ನಿನಗೆ ತಂಗೆ’ಎಂಬ ಪೌರಾಣಿಕ ನಾಟಕವನ್ನು ಪುಷ್ಪ ಪಿ ಮತ್ತು ತಂಡವರು ಪ್ರದರ್ಶಿಸಿದರು.

ಮರಿಯಮ್ಮನಹಳ್ಳಿಯ ಅನ್ನದಾನೇಶ್ವರ ಮಠದಲ್ಲಿ ಭಾನುವಾರ ನಡೆದ ಹೊಸಪೇಟೆಯ ಭುವನೇಶ್ವರಿ ಕಲಾ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದಡಿ ಸಮೂಹ ನೃತ್ಯ ಹಾಗೂ ನಾನಕ್ಕನೇನ್ ನಿನಗೆ ತಂಗೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌