ಕುಷ್ಟಗಿ: ನಮ್ಮ ವಾಲ್ಮೀಕಿ ಸಮಾಜದ ಯುವಕರು ಉನ್ನತವಾದ ಶಿಕ್ಷಣ ಪಡೆದುಕೊಂಡು ಸರ್ಕಾರದ ಮೇಲ್ಮಟ್ಟದ ಹುದ್ದೆಗಳನ್ನು ಪಡೆಯುವಂತಾಗಬೇಕು ಎಂದು ಯುವ ನಾಯಕ ರಾಹುಲ್ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನೂತನ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ವಾಲ್ಮೀಕಿ ನೌಕರರ ಸನ್ಮಾನ ಸಮಾರಂಭ, ಸಾಮೂಹಿಕ ವಿವಾಹ ಹಾಗೂ ವಾಲ್ಮೀಕಿ ಪೀಠದ ಪ್ರಸನ್ನನಾನಂದ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ನಮ್ಮ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರು ನಮ್ಮ ನಾಡಿಗೆ ರಾಮಾಯಣವನ್ನು ರಚನೆ ಮಾಡುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಹರ್ಷಿ ಅವರ ತತ್ವ-ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮವಾದ ಬದುಕು ಕಟ್ಟಿಕೊಳ್ಳೋಣ ಎಂದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ನಾಡಿಗೆ ಕೊಟ್ಟ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಾಲ್ಮೀಕಿ ಸಮಾಜದ ಗುರುಗಳಾದ ಪ್ರಸನ್ನಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ. ಆಧುನಿಕ ಜಗತ್ತಿನಲ್ಲಿ ಮಾನವ ಸಂಬಂಧಗಳು ಸಡಿಲಗೊಳ್ಳುತ್ತಿದ್ದು, ಮದುವೆಯಾದವರು ಪರಸ್ಪರ ಒಬ್ಬರನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಅಂದಾಗ ಮಾತ್ರ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದರು. ಶಿಕ್ಷಕ ವಾಸಪ್ಪ ಸುರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಧಾನ ಎಂಜಿನಿಯರ್ ಪ್ರಭಾಕರ ಚಿಣಿ, ಮಾಲತಿ ನಾಯಕ ಇತರರು ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 13 ನವ ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು , ಹುಲಿಹೈದರ್ ವಾಲ್ಮೀಕಿ ಕುಲಗುರುಗಳು ರಾಜ ನವೀನಚಂದ್ರ ನಾಯಕ ಸಾನ್ನಿಧ್ಯವಹಿಸಿದ್ದರು. ಶಿವಶಂಕರಗೌಡ ಪಾಟೀಲ್ ಕಡೂರು, ಜಿಲ್ಲಾ ಧರ್ಮ ದರ್ಶಕರಾದ ರಾಮಣ್ಣ ಕಲ್ಲಣ್ಣವರ, ಗ್ರಾಪಂ ಅಧ್ಯಕ್ಷೆ ಮಲ್ಲವ್ವ ತಳವಾರ, ಶಿವಮೂರ್ತಿ ಗುತ್ತೂರು, ಕನಕಪ್ಪ ತಳವಾರ, ರಾಮಣ್ಣ ಬೇವಿನಾಳ ಕುಣಕೇರಿ, ಕೆ.ಆರ್. ಪಾಟೀಲ್, ರಂಗಪ್ಪ ವಾಲೇಕಾರ , ತಾಪಂ ಮಾಜಿ ಸದಸ್ಯ ದೇವರಾಜ ಗೌಡ್ರು ಕುರಕುಂದಾ, ಸೋಮಶೇಖರ ವೈಜಾಪೂರು, ಮಾನಪ್ಪ ಪೂಜಾರ, ರಾಮಣ್ಣ ಚೌಡ್ಕಿ, ದೇವಪ್ಪ ಗಂಗನಾಳ ಹಿರೇಮನ್ನಾಪುರ, ಸಂಗಣ್ಣ ಕರಡಿ, ರಮೇಶ ಕೊಳ್ಳಿ, ಪರಶುರಾಮ ತಳವಾರ, ಗುಂಡನಗೌಡ ಪಾಟೀಲ್ , ಹಂಚಾಳಪ್ಪ ಪೂಜಾರ, ದ್ಯಾಮನಗೌಡ ಪೊಲೀಸ್ ಪಾಟೀಲ್, ರಾಮಪ್ಪ ಗುಜ್ಜಲ, ನೀಲವ್ವ ಖಜಾಸಾಬ ಕಲ್ಲಭಾವಿ ಸಿಆರ್‌ಪಿ ಶರಣಗೌಡ ಗೌಡ್ರ, ಜಯಶ್ರೀ, ಶ್ರೀಕಾಂತ ಹೂಗಾರ, ಅಶೋಕ ಬಡಿಗೇರ, ಬಸವರಾಜ ದಾಸರ ಇದ್ದರು.