ಯುವಜನತೆ ದುಶ್ಚಟಕ್ಕೆ ಬಲಿಯಾಗದೆ ದೇಶ ರಕ್ಷಿಸಲಿ

KannadaprabhaNewsNetwork |  
Published : Aug 16, 2025, 12:00 AM ISTUpdated : Aug 16, 2025, 12:01 AM IST
15ುಲು1 | Kannada Prabha

ಸಾರಾಂಶ

ಭವ್ಯ ಭಾರತದ ಭವಿಷ್ಯ ಯುವಕರ ಕೈಯಲ್ಲಿದೆ. ಇಂತಹ ಸಂದರ್ಭದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ದೇಶದ ರಕ್ಷಣೆ ಮತ್ತು ಪಾಲಕರ ರಕ್ಷಣೆಗೆ ಮುಂದಾಗಬೇಕು.

ಗಂಗಾವತಿ:

ನಗರ ಸೇರಿದಂತೆ ಕ್ಷೇತ್ರದಲ್ಲಿ ಡ್ರಗ್ಸ್ ಹಾವಳಿ ಅತಿಯಾಗಿದ್ದು, ಇದರಿಂದ ಯುವಕರು ಬಲಿಯಾಗುತ್ತಿದ್ದಾರೆಂದು ಶಾಸಕ ಗಾಲಿ ಜನಾರ್ದನ ರಡ್ಡಿ ಕಳವಳ ವ್ಯಕ್ತ ಪಡಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭವ್ಯ ಭಾರತದ ಭವಿಷ್ಯ ಯುವಕರ ಕೈಯಲ್ಲಿದೆ. ಇಂತಹ ಸಂದರ್ಭದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ದೇಶದ ರಕ್ಷಣೆ ಮತ್ತು ಪಾಲಕರ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಎಷ್ಟೇ ಕ್ರಮಕೈಗೊಂಡರು ಸಹ ನಿಯಂತ್ರಣವಾಗುತ್ತಿಲ್ಲ ಎಂದರು.

ವಿಕಸಿತ ಭಾರತದ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಿ. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸಬೇಕೆಂದು ಕರೆ ನೀಡಿದರು.

ಈ ವೇಳೆ ಸಕ್ಷಮ ಅಂಗನವಾಡಿಗಳಿಗೆ ಟಿವಿ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಹೀರಾಬಾಯಿ ನಾಗರಾಜ್, ಉಪಾಧ್ಯಕ್ಷೆ ಸುಧಾ ಸೋಮನಾಥ್, ತಹಸೀಲ್ದಾರ್‌ ಎಸ್. ರವಿ ಅಂಗಡಿ, ತಾಲೂಕು ಪೊಲೀಸ್ ಉಪವಿಭಾಗಾಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ನಗರಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಬಿಇಒ ಎಚ್.ಬಿ. ನಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಶ್ರೀರಾಮನಗರ:

ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು. ಪ್ರಾಚಾರ್ಯ ಪ್ರೊ. ಕರಿಗೂಳಿ ಮಾತನಾಡಿ, ಸ್ವಾತಂತ್ರ್ಯವು ನಾವು ಈಗ ಅನುಭವಿಸುತ್ತಿರುವಷ್ಟು ಸುಲಭವಾಗಿ ಧಕ್ಕಿದ್ದಲ್ಲ. ಶತಮಾನದಷ್ಟು ಸುದೀರ್ಘ ಹೋರಾಟದ ಫಲವಾಗಿದೆ. ಅದೆಷ್ಟೋ ಮಹನೀಯರು ಹಾಗೂ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳ ನೆತ್ತರು ಹರಿಸಿ ಕೊಟ್ಟಿದ್ದಾರೆ. ಈ ಭವ್ಯ ಭಾರತದ ಈ ಸ್ವಾತಂತ್ರ್ಯವನ್ನು ಸಂಘರ್ಷರಹಿತವಾಗಿ ಸಂಭ್ರಮಿಸೋಣ ಎಂದರು.

ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ, ಅಧ್ಯಾಪಕ ಸರಫ್‌‌ರಾಜ್ ಅಹ್ಮದ್, ರವಿಕುಮಾರ, ವಿರೂಪಾಕ್ಷ ಕೆ, ಜಬೀನಾ ಬೇಗಂ, ಶಾಂತಿ, ಚಿನ್ನವರಪ್ರಸಾದ, ಶರಣಬಸವ ಉಪಸ್ಥಿತರಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!